🔥 ट्रेंडिंग केरल हाई कोर्ट ने आरएसएस‑संबंधित समूह... रेब्बेना स्टेशन पर केरल एक्सप्रेस से ग... मगध मेडिकल कॉलेज से जुड़ी कार में विदे... शिरूर नगरपरिषदेच्या मागासवर्गीय कल्याण... देवउठनी ग्यारस के अवसर पर ग्राम पलोहा... वाराणसी ने 10वीं श्याम नारायण पाण्डेय...
20 नव. 2026•
ગુજરાતી मराठी ਪੰਜਾਬੀ বাংলা
देश

ಶ್ರೀ ಮಡಿವಾಳೇಶ್ವರ ಶಾಲೆಯಲ್ಲಿ ಶ್ರದ್ಧಾಭಕ್ತಿಯಿಂದ ದೀಪಪೂಜನ

✍️ रिपोर्टर: Basavaraj pujari 🗓 20 नव. 2026, 09:38 PM 👁 29
शेयर करें: 💬 WhatsApp 📘 Facebook 𝕏 Post

ಸಂಸ್ಕೃತಿ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಜಾಗೃತಿಗೆ ವರದರಾಜ ಬಾವುಗೆ ಕರೆ ಬೀದರ್: ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಸನಾತನ ಸಂಸ್ಕೃತಿ, ಪರಂಪರೆ ಹಾಗೂ ಕುಟುಂಬ ಮೌಲ್ಯಗಳನ್ನು ಉಳಿಸಿ ಬೆಳ

ಶ್ರೀ ಮಡಿವಾಳೇಶ್ವರ ಶಾಲೆಯಲ್ಲಿ ಶ್ರದ್ಧಾಭಕ್ತಿಯಿಂದ ದೀಪಪೂಜನ
ಸಂಸ್ಕೃತಿ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಜಾಗೃತಿಗೆ ವರದರಾಜ ಬಾವುಗೆ ಕರೆ

ಬೀದರ್: ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಸನಾತನ ಸಂಸ್ಕೃತಿ, ಪರಂಪರೆ ಹಾಗೂ ಕುಟುಂಬ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಂದು ಕುಟುಂಬದ ಮೇಲಿದೆ ಎಂದು ಕುಟುಂಬ ಪ್ರಬೋಧನ ಕಲಬುರಗಿ ವಿಭಾಗದ ಸಂಯೋಜಕ ವರದರಾಜ ಬಾವುಗೆ ಹೇಳಿದರು.

ನಗರದ ಮಂಗಲಪೇಟೆಯ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದೀಪಪೂಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಭಾರತವು ವೈವಿಧ್ಯಮಯ ಹಬ್ಬ-ಹರಿದಿನಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಸಾಂಸ್ಕೃತಿಕ ಶ್ರೀಮಂತಿಕೆಯ ನಾಡಾಗಿದೆ. ದೀಪವು ಕೇವಲ ಕತ್ತಲೆಯನ್ನು ಹೋಗಲಾಡಿಸುವ ಸಾಧನವಲ್ಲ; ಅದು ಜ್ಞಾನ, ಅರಿವು, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯ ಸಂಕೇತವಾಗಿದೆ. ಪ್ರತಿಯೊಂದು ಹಿಂದೂ ಕುಟುಂಬದಲ್ಲಿಯೂ ದೀಪ ಬೆಳಗಿಸುವ ಸಂಪ್ರದಾಯ ನಮ್ಮ ಸಂಸ್ಕೃತಿಯ ಮಹತ್ವವನ್ನು ಸಾರುತ್ತದೆ ಎಂದರು.

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಇಂದಿನ ಅಗತ್ಯವಾಗಿದೆ. ತಂದೆ-ತಾಯಿಗಳು ಮಕ್ಕಳೊಂದಿಗೆ ಪ್ರೀತಿ, ಸ್ನೇಹ ಮತ್ತು ಆತ್ಮೀಯತೆಯಿಂದ ನಡೆದುಕೊಂಡು ಶಿಸ್ತು, ಸಂಯಮ ಹಾಗೂ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕು. ಪ್ರತಿಯೊಂದು ಮನೆಯಲ್ಲಿ ಅರಿವಿನ ದೀಪ ಮತ್ತು ಜ್ಞಾನದ ದೀಪ ಬೆಳಗಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಮಾತನಾಡಿ, ಕಾರ್ತಿಕ ಮಾಸದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆ ಜೀವನ ಮೌಲ್ಯಗಳ ಸಂದೇಶ ಅಡಗಿದ್ದು, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಘವೇಂದ್ರ ಕುಲಕರ್ಣಿ ದೀಪಪೂಜೆಯ ವಿಧಿವಿಧಾನ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷ ನಾಗೇಶ್ ರೆಡ್ಡಿ ಸಂಕಲ್ಪ ಬೋಧನೆ ಮಾಡಿದರು. ಸಹ ಕಾರ್ಯದರ್ಶಿಗಳಾದ ಶಿವಶರಣಪ್ಪ ಪಾಟೀಲ್ ದಂಪತಿ ಹಾಗೂ ಮಹಾದೇವ ಪಾಟೀಲ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಸಿರಿಗೆರೆ, ಶಿಕ್ಷಕ ವೃಂದದವರು ಹಾಗೂ ದೀನದಯಾಳ ಉಪಾಧ್ಯಾಯ ಸೇವಾ ವಸತಿಯ ಮಾತೆಯರು ಉಪಸ್ಥಿತರಿದ್ದರು. ಒಟ್ಟು 230 ಮಾತೆಯರು ಭಕ್ತಿಭಾವದಿಂದ ದೀಪಪೂಜನದಲ್ಲಿ ಪಾಲ್ಗೊಂಡರು.

ಅಶ್ವಿನಿ ಪಾಟೀಲ್ ಸ್ವಾಗತಿಸಿದರು. ಪ್ರತಿಭಾ ತೇಲಿ ಕಾರ್ಯಕ್ರಮ ನಿರೂಪಿಸಿದರು. ಚೆನ್ನಮ್ಮ ಪಾಂಚಾಳ ವೈಯಕ್ತಿಕ ಗೀತೆ ಪ್ರಸ್ತುತಪಡಿಸಿದರು. ಅರ್ಚನಾ ಸಿರಿಗೆರೆ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
📲Get App