🔥 TRENDING MLA Gandra Satyanarayana Rao Announces... आम आदमी पार्टी के रामू अठवाल ने रैनी प... ਸੀਨੀਅਰ ਕਾਂਗਰਸੀ ਆਗੂ ਦਾ ਦਿਹਾਂਤ, 85 ਸਾਲ ਦ... 57th International Film Festival of In... ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಅವರ ನೂತನ ಭ... IBMA Launches Inaugural Indian Lead Ba...
20 Nov 2026•
ગુજરાતી मराठी ਪੰਜਾਬੀ বাংলা

ಮಹರ್ಷಿ ವಾಲ್ಮೀಕಿಯವರ ವಿಚಾರಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಬಾರದು: ಸಂಸದ ಜಿ.ಕುಮಾರ ನಾಯಕ - ರಾಯಚೂರಿನಲ್ಲಿ ವಾಲ್ಮೀಕಿ ಜಯಂತಿ ಹಾಗೂ ವಿಚಾರ ಸಂಕೀರ್ಣ ಉದ್ಘಾಟನೆ

✍️ Reporter: Ningappa 🗓 20 Nov 2026, 09:10 PM 👁 25
Share: 💬 WhatsApp 📘 Facebook 𝕏 Post

ಮಹರ್ಷಿ ವಾಲ್ಮೀಕಿಯವರ ವಿಚಾರಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಬಾರದು: ಸಂಸದ ಜಿ.ಕುಮಾರ ನಾಯಕ - ವಾಲ್ಮೀಕಿ ತತ್ತ್ವಗಳು ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಬೇಕು - ವಿದ್ಯಾರ್ಥಿಗಳು ಮಹಾಪುರುಷರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು - ವಾಲ್ಮೀಕಿ ಕುರಿತು ಪಠ್ಯ ರಚಿಸಲು ಸಲಹೆ - ಸಮಾನತೆ, ಭ್ರಾತೃತ್ವಕ್ಕೆ ವಿಚಾರ ಸಂಕೀರ್ಣಗಳ ಪಾತ್ರ ಮಹತ್ವ

ಮಹರ್ಷಿ ವಾಲ್ಮೀಕಿಯವರ ವಿಚಾರಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಬಾರದು: ಸಂಸದ ಜಿ.ಕುಮಾರ ನಾಯಕ

ರಾಯಚೂರು: ಮಹರ್ಷಿ ವಾಲ್ಮೀಕಿಯವರ ತತ್ತ್ವಾದರ್ಶಗಳು, ಸಂದೇಶಗಳು ಮತ್ತು ಮೌಲ್ಯಗಳು ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ಜನಾಂಗಕ್ಕೆ ಸೀಮಿತವಾಗಬಾರದು: ಅವು ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವಂತಿರಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಅಭಿಪ್ರಾಯಪಟ್ಟರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ರಾಯಚೂರು ವತಿಯಿಂದ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಚಿಂತನೆಗಳು: ಒಂದು ಅನುಸಂಧಾನ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ವಿದ್ಯಾರ್ಥಿಗಳು ಮಹಾಪುರುಷರ ವಿಚಾರಗಳು ಹಾಗೂ ಬರವಣಿಗೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾವು ಸರ್ಕಾರದ ಸೇವೆಯಲ್ಲಿದ್ದಾಗ ಬೆಂಗಳೂರಿನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (BSE) ಸ್ಥಾಪಿಸುವ ಸಂದರ್ಭದಲ್ಲಿ, ಪ್ರತಿ ಸೆಮಿಸ್ಟರ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ ಕೊಡುಗೆಗಳ ಕುರಿತಾದ ಕೋರ್ಸ್ ಅಳವಡಿಸಲು ಕೈಗೊಂಡ ಕ್ರಮಗಳನ್ನು ಈ ವೇಳೆ ಅವರು ಸ್ಮರಿಸಿದರು.

ಸರ್ಕಾರಗಳು ವಿಧ್ಯುಕ್ತವಾಗಿ ಜಯಂತಿಗಳನ್ನು ಆಚರಿಸುವುದರ ಜೊತೆಗೆ, ಶೈಕ್ಷಣಿಕ ಹಾಗೂ ಬೌದ್ಧಿಕ ವಲಯದಲ್ಲಿ ಮಹಾಪುರುಷರ ಹಾಗೂ ಮಹರ್ಷಿ ವಾಲ್ಮೀಕಿಯವರ ವಿಚಾರಗಳನ್ನು ನಿರಂತರವಾಗಿ ಪಸರಿಸಬೇಕು. ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸಮಾನತೆ ಹಾಗೂ ಭ್ರಾತೃತ್ವ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮತ್ತು ವಿಚಾರ ಸಂಕೀರ್ಣಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಮಹರ್ಷಿ ವಾಲ್ಮೀಕಿಗಳ ಕುರಿತಂತೆ ಪಠ್ಯವನ್ನು ರಚಿಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅನುಕೂಲ ಮಾಡಿ ಕೊಡಬೇಕೆಂದು ಸಲಹೆ ನೀಡಿದರು. ಅಲ್ಲದೇ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಈ ಭಾಗದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುವ ಮೂಲಕ ನಮಗಿರುವ ಹಿಂದುಳಿದ ಹಣೆಪಟ್ಟಿಯನ್ನು ಕಳಚಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ, ಕುಲಸಚಿವ (ಆಡಳಿತ) ಡಾ. ಎ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ವಿರುಪಾಕ್ಷಯ್ಯ ಡಿ.ಜಿ.ಎಂ., ಹಣಕಾಸು ಅಧಿಕಾರಿಗಳಾದ ಡಾ. ಎಂ.ಎಸ್. ಲತಾ, ಡಾ. ವೆಂಕಟೇಶ್ ಸೇರಿದಂತೆ ವಿಶ್ವವಿದ್ಯಾಲಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
📲Get App