🔥 TRENDING Madhya Pradesh BJP Revamps Structure,... UPSC Sends Three Names for Madhya Prad... Congress rebounds in Rajasthan Panchay... ಗ್ರಾಮ ಸಂಪರ್ಕ ಕಾರ್ಯಕ್ರಮ: ಗಡಿಭಾಗದ ಜನರಿಗೆ... मुरबाडमध्ये जुगल जाखोटीया यांच्या गोडा... ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ?...
20 Nov 2026•
ગુજરાતી मराठी ਪੰਜਾਬੀ বাংলা
Politics

ರಾಜ್ಯ ಸರ್ಕಾರದ ಕ್ರಮಕ್ಕೆ ಬಸವರಾಜ ಧನ್ನೂರ ಸಂತಸ

✍️ Reporter: Basavaraj pujari 🗓 20 Nov 2026, 09:50 PM 👁 16
Share: 💬 WhatsApp 📘 Facebook 𝕏 Post

ಕೃತಿ ನಿಷೇಧ: ಬಸವಾನುಯಾಯಿಗಳಿಂದ ಸಂಭ್ರಮಾಚರಣೆ ಬೀದರ್: ರಾಜ್ಯ ಸರ್ಕಾರ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅವರ ವಿವಾದಾತ್ಮಕ ಬಸವ ಮಂಟಪ ಕೃತಿ

ರಾಜ್ಯ ಸರ್ಕಾರದ ಕ್ರಮಕ್ಕೆ ಬಸವರಾಜ ಧನ್ನೂರ ಸಂತಸ

ಕೃತಿ ನಿಷೇಧ: ಬಸವಾನುಯಾಯಿಗಳಿಂದ ಸಂಭ್ರಮಾಚರಣೆ

ಬೀದರ್: ರಾಜ್ಯ ಸರ್ಕಾರ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅವರ ವಿವಾದಾತ್ಮಕ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಸವ ಪರ ಸಂಘಟನೆಗಳ ಪ್ರಮುಖರು ನಗರದಲ್ಲಿ ಶುಕ್ರವಾರ ಸಂಭ್ರಮ ಆಚರಿಸಿದರು.
ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ, ಬಸವಣ್ಣನವರ ಪ್ರತಿಮೆಗೆ ಹೂ ಮಾಲೆ ಹಾಕಿ, ಜೈಕಾರದ ಘೋಷಣೆ ಕೂಗಿದರು. ಬಳಿಕ ಪರಸ್ಪರ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.
ರಾಜ್ಯ ಸರ್ಕಾರ ಬಸವ ಭಕ್ತರ ಭಾವನೆಯನ್ನು ಗೌರವಿಸಿ, ಕೃತಿ ಹಾಗೂ ಲೇಖಕರ ವಿರುದ್ಧ ಕ್ರಮ ಜರುಗಿಸಲು ತೀರ್ಮಾನಿಸಿರುವುದು ಸೂಕ್ತ ಹಾಗೂ ಸ್ವಾಗತಾರ್ಹವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಆದಷ್ಟು ಬೇಗ ಕೃತಿಯ ಲೇಖಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಸವಣ್ಣನವರು ಲಿಂಗಾಯತರ ಅಸ್ಮಿತೆ. ಬಸವಣ್ಣನವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ಕೆಲಸ ಯಾರು ಮಾಡಿದರೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಹುಗ್ಗಿಪಾಟೀಲ, ಪ್ರಮುಖರಾದ ಸಿದ್ದಯ್ಯ ಕವಡಿಮಠ, ಯೋಗೇಂದ್ರ ಯದಲಾಪುರೆ, ರಾಜಕುಮಾರ ಕಮಠಾಣೆ, ಗಣೇಶ ಬಿರಾದಾರ, ರವಿ ಪಾಪಡೆ, ರಾಜೇಂದ್ರ ಜೊನ್ನಿಕೇರಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಯೋಗೇಶ್ ಶ್ರೀಗಿರಿ, ಶಿವಕುಮಾರ, ರಾಜಶೇಖರ ಮಠಪತಿ, ಸಿದ್ದಪ್ಪ ಮೂಲಗೆ, ಶ್ರೀಕಾಂತ ಬಿರಾದಾರ, ರಮೇಶ ಬಿರಾದಾರ, ಡಾ. ಪ್ರವೀಣ್ ಎಕಲಾರೆ, ರಾಜಕುಮಾರ ಪಾಟೀಲ ಕನ್ನಳ್ಳಿ, ಬಸವರಾಜ ಪಾಟೀಲ ಕನ್ನಳ್ಳಿ, ಅಶೋಕ್ ಶಂಭು, ಮಾರುತೆಪ್ಪ ಪಾಪಡೆ, ಅಶೋಕ್ ಶೀಲವಂತ, ಸಂಜುಕುಮಾರ ಪಾಟೀಲ, ಸಾಯಿನಾಥ ಆಣದೂರ, ಬಸವರಾಜ ಚನಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
📲Get App