🔥 ट्रेंडिंग ਮਹਾਭਾਰਤ'' ਫੇਮ ਅਦਾਕਾਰ ਨਾਲ 4.44 ਕਰੋੜ ਰੁਪ... शाहजहांपुर में तिलहर विधानसभा क्षेत्र... હુમલાખોરને ચેતવણી આપવા છતાં તાબે ન થતા... शौच के लिए निकली महिला को बाइक ने मारी... ਐਡਵੋਕੇਟ ਹਰਜਿੰਦਰ ਸਿੰਘ ਧਾਮੀ ਛੇਵੀਂ ਵਾਰ ਬਣ... Agra में आयोजित रोजगार मेले में छात्रो...
20 नव. 2026•
ગુજરાતી मराठी ਪੰਜਾਬੀ বাংলা

ಮಹಿಳೆಯರ ಘನತೆ ಎತ್ತಿ ಹಿಡಿದ ಮಹಾನ್ ನಾಯಕ ಟಿಪ್ಪು - ಅಬ್ದುಲ್ ರೆಹಮಾನ್

✍️ रिपोर्टर: Ningappa 🗓 20 नव. 2026, 12:29 PM 👁 31
शेयर करें: 💬 WhatsApp 📘 Facebook 𝕏 Post
ಜಾಲಹಳ್ಳಿಯಲ್ಲಿ ಹಜರತ್‌‌ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ದೇವದುರ್ಗ:ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಘನತೆಯನ್ನು ಎತ್ತಿ ಹಿಡಿದ ಮಹಾನ್ ನಾಯಕ ಹಜರತ್‌‌ ಟಿಪ್ಪು ಸುಲ್ತಾನ್ ಎಂದು ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಮಾನ್ ಹೇಳಿದರು.

ಜಾಲಹಳ್ಳಿ ಪಟ್ಟಣದಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಇಲ್ಲದ ಕಾಲಘಟ್ಟದಲ್ಲಿ ಸಮಾನತೆಯ ಧ್ವನಿ ಎತ್ತಿದ್ದ, ಕೃಷಿ ಪದ್ದತಿ, ತಂತ್ರಜ್ಞಾನ, ಆಡಳಿತ ಸುಧಾರಣೆ ನೀತಿಗಳನ್ನು ಜಾರಿಗೆ ತಂದಿದ್ದರು,ಅಲ್ಲದೇ ರಾಜ ಆಡಳಿತದಲ್ಲಿ ಅನಿಷ್ಟ ಪದ್ದತಿಗಳ ವಿರುದ್ಧ ಯುದ್ಧ ಸಾರಿದ ಮಹಾನ್ ನಾಯಕ ಟಿಪ್ಪು, ಈ ದೇಶದಲ್ಲಿ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮತ್ತು ಭೂ ಮಾಲೀಕರಿಗೆ ಟಿಪ್ಪುವಿನ ವಿಚಾರ ಅಂಬೇಡ್ಕರ್ ಸಂವಿಧಾನ ನುಂಗಲಾರದ ತುತ್ತಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಂಗಣ್ಣ ಕೋಲ್ಕರ, ಹುಸೇನಪ್ಪ ಚಲುವಾದಿ, ಖಾಜಾಹುಸೇನ್ (ಬಾಂಬೆ ಸೇಠ್), ಈಶಣ್ಣ ಕಾಟಮಳ್ಳಿ, ಖುರ್ಷಿದ್ ಪಟೇಲ್, ಖಾಜಾಹುಸೇನ್ ಬಾಬಾ ಮೆಡಿಕಲ್, ರಾಜಮೊಹ್ಮದ್ ಸರ್ನೌಬಾತ್, ಹೈದರ್ ಸಾಬ್ ಕೆ ಮುಲ್ಲಾ, ಶಂಕರಗೌಡ, ಶ್ರೀದರ್ ದೇಸಾಯಿ, ಯಾಸಿನ್ ಸಾಬ್ ಮುಲ್ಲಾ, ರಂಗಪ್ಪ ಬಂಡಿ, ಬಸವರಾಜ ಗೋಪಾಳಪುರ, ಮೊಹಮ್ಮದ್ ಇದ್ರೀಸ್, ಯಲ್ಲಪ್ಪ ಗಾಜಲದನ್ನಿ, ಯಲ್ಲಪ್ಪ ಪೂಜಾರಿ, ಭೂತಪ್ಪ ದೇವರಮನಿ, ಸಾಬಣ್ಣ ಹೂಗಾರ, ವೆಂಕನಗೌಡ, ವೆಂಕೋಬ ಪೂಜಾರಿ, ಗೋವಿಂದಪ್ಪ ಆಲಗೇರಿ, ರಾಜಾವಾಸುದೇವ್ ನಾಯಕ, ರಮೇಶ್ ಬಾವಿಮನಿ, ಬೀಮಣ್ಣ ವಿರಗೋಟ, ರಾಮು ಗಾಜಲದಿನ್ನಿ, ಇಮಾಮ್ ಸಾಬ್ ಉದ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
📲Get App