🔥 TRENDING Two suspects murder husband, wife and... ಮಡಿವಾಳೇಶ್ವರ ಶಾಲೆಯ ಮೂವರು ವಿದ್ಯಾರ್ಥಿಗಳು... 25-year-old biker killed, two seriousl... Indore: Brother of PWD executive engin... निवाली गांव में कड़वी के पुंजों में लग... Rajasthan HC orders bank to freeze onl...
19 Nov 2026•
ગુજરાતી मराठी ਪੰਜਾਬੀ বাংলা
Religion

ಬೀದರ್: ಧರಿ ಹನುಮಾನ ಸುಕ್ಷೇತ್ರದಿಂದ ಕಲ್ಮೂಡದವರೆಗೆ ಭಕ್ತಿ ಪಾದಯಾತ್ರೆಗೆ ಚಾಲನೆ

✍️ Reporter: Basavaraj pujari 🗓 19 Nov 2026, 07:06 PM 👁 20
Share: 💬 WhatsApp 📘 Facebook 𝕏 Post

ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಲಾಧಾ ಗ್ರಾಮದ ಶ್ರೀ ಗುರುದೇವ ದತ್ತ ದಿಗಂಬರ ಮಾಣಿಕೇಶ್ವರ ಧರಿ ಹನುಮಾನ ಸುಕ್ಷೇತ್ರದಿಂದ ಕಲ್ಮೂಡದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.

ಬೀದರ್: ಔರಾದ ತಾಲ್ಲೂಕಿನ ಲಾಧಾ ಗ್ರಾಮದ ಶ್ರೀ ಶ್ರೀ ಶ್ರೀ ಗುರುದೇವ ದತ್ತ ದಿಗಂಬರ ಮಾಣಿಕೇಶ್ವರ ಧರಿ ಹನುಮಾನ ಸುಕ್ಷೇತ್ರದಿಂದ ಕಲ್ಮೂಡದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ಈ ಪಾದಯಾತ್ರೆ ಧರಿಹನುಮಾನ ಮಂದಿರದಿಂದ ಪ್ರಾರಂಭಗೊಂಡು ಲಾಧಾ, ಯೆರನಳ್ಳಿ, ಗಾಯಮುಖ, ಮೈಲಾರ ಮಲ್ಲಣ್ಣಾ, ಬ್ಯಾಲಹಳ್ಳಿ, ಸಿಮಿನಾಗನಾಥ, ಹುಡಗಿ, ಇಟಗಾ, ಸೊಂತ ಮತ್ತು ಚೆಂಗಟಾ ಮೂಲಕ 23ನೇ ತಾರೀಖು ಕಲ್ಮೂಡ ತಲುಪಲಿದೆ.

ಯುವ ಮುಖಂಡ ಪ್ರತೀಕ ಪ್ರಭು ಚವ್ಹಾಣ ಅವರು ಪಾದಯಾತ್ರೆಯ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು. ಮಾತನಾಡಿ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಯಾವುದೇ ಆತುರವಿಲ್ಲದೆ ಸಾಗಬೇಕು. ರಸ್ತೆಗಳಲ್ಲಿ ವಾಹನಗಳ ಸಂಚಾರವಿರುವುದರಿಂದ ಎಚ್ಚರಿಕೆ ವಹಿಸಬೇಕು. ಭಕ್ತರು ದೃಢ ಸಂಕಲ್ಪದೊಂದಿಗೆ ಪಾದಯಾತ್ರೆ ಕೈಗೊಂಡರೆ ಮಾಣಿಕೇಶ್ವರ ದೇವರ ಆಶೀರ್ವಾದ ಸದಾ ಅವರೊಂದಿಗಿರುತ್ತದೆ ಎಂದು ತಿಳಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸತ್ಸಂಗಗಳ ಮೂಲಕ ಈ ಭಾಗದ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮವು ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಷ.ಬ್ರ. ಶಿವಲಿಂಗ ಶಿವಾಚಾರ್ಯರ ಸಾನಿಧ್ಯದಲ್ಲಿ ಹಾಗೂ ಪೂಜ್ಯ ಷ.ಬ್ರ. ದಾರುಕಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಿತು. ಪೂಜ್ಯ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಾಣಿಕ ಪ್ರಭುಗಳು ಎಲ್ಲಿಗೂ ಹೋಗಿಲ್ಲ, ಭಕ್ತರ ಹೃದಯದಲ್ಲಿಯೇ ನೆಲೆಸಿದ್ದಾರೆ. ಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತಾ ಪಾದಯಾತ್ರೆ ಕೈಗೊಂಡರೆ ಒಳಿತಾಗುತ್ತದೆ. ಪಾದಯಾತ್ರೆಯ ಸಂದರ್ಭದಲ್ಲಿ ಸಂಸಾರದ ಚಿಂತೆಗಳನ್ನು ಬದಿಗಿಟ್ಟು ದೇವರ ಧ್ಯಾನ ಮತ್ತು ಸ್ಮರಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಅವರು ಮಾತನಾಡಿ, ಮಹಾತ್ಮರು ತಮ್ಮ ವೈಯಕ್ತಿಕ ಸುಖ-ಸೌಲಭ್ಯಗಳನ್ನು ತ್ಯಜಿಸಿ ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟವರು. ಅಂತಹ ಮಹಾತ್ಮರಲ್ಲಿ ಮಾಣಿಕ ಪ್ರಭುಗಳು ಪ್ರಮುಖರು. ಭಕ್ತರ ಕಲ್ಯಾಣಕ್ಕಾಗಿ ಚಿಂತಿಸಿದ ಮಹಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಉದ್ಯಮಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿಜಯಕುಮಾರ ಪಾಟೀಲ ಯರನಳ್ಳಿ ಅಧ್ಯಕ್ಷತೆ ವಹಿಸಿದ್ದು, ಭೋಜಾರೆಡ್ಡಿ ಅವರು ನಿರೂಪಿಸಿದ್ದರು. ಸಾವಿರಾರು ಭಕ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
📲Get App