🔥 TRENDING ଭିଜିଲାନ୍ସ ଜାଲରେ ଗୋଲାମୁଣ୍ଡା ତହସିଲଦାର l Meghalaya Among BBC's Top 20 Travel De... Meghalaya Signs MoU to Handover Baljek... Meghalaya Police Chief Highlights Cybe... Sangha Appointed Additional Director o... ਪੰਜਾਬੀਓ Smog ਨੂੰ ਨਾ ਸਮਝੋ Fog, ਛੋਟੀ ਜਿਹ...
19 Nov 2026•
ગુજરાતી मराठी ਪੰਜਾਬੀ বাংলা

ನವರಸಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

✍️ Reporter: YALLAPPA RAGATE (PATIL) 🗓 19 Nov 2026, 06:01 PM 👁 23
Watch on: 📘 Facebook
Share: 💬 WhatsApp 📘 Facebook 𝕏 Post
ಪತ್ರಿಕಾ ಪ್ರಕಟಣೆ

ನವರಸಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ವಿಜಯಪುರ: ನಗರದ ನವರಸಪುರದ ಸೇನಾ ನಗರದ ಸುಕ್ಷೇತ್ರ ಶ್ರೀ ಶಿವಾಲಯದಲ್ಲಿ ದಿನಾಂಕ 19-11-2026 ರಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಜಿಲ್ಲಾ ಆರೋಗ್ಯ ಇಲಾಖೆಯ THO ಡಾ. ಪರಶುರಾಮ್ ಹಿಟ್ನಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಲ್. ಇಂಗಳೇಶ್ವರ ಮಾತನಾಡಿ, ಸರ್ಕಾರ ಜನರಿಗೆ ಹಲವು ಭಾಗ್ಯಗಳನ್ನು ನೀಡುತ್ತದೆ. ಆದರೆ ಆರೋಗ್ಯ ಭಾಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ರತ್ನಾಕರ್, ಶ್ರೀಶೈಲ್ ವಾಗಮೋರೆ, RIO ಗೌಡರ್, ಇಮಾಮ್ ಸಾಬ್ ಕಲಬುರ್ಗಿ, ನಾಗರಾಜ್ ತಾಳಿಕೋಟಿ, ಶ್ರೀಮತಿ ವೇಣಾ ಕಟ್ಟಿಮನಿ, ಪ್ರಮೋದ್, ಕುಮಾರಿ ಶೀತಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷರಾದ ಶ್ರೀ ಬಿಳಿ ಕಡಕೋಳ, ಮುಖ್ಯ ಕಾರ್ಯದರ್ಶಿ ಕೆ.ಜಿ. ಕೋಟ್ಯಾಳ, ಉಪಾಧ್ಯಕ್ಷರಾದ ಎಸ್.ಎಸ್. ಓತಿಹಾಳ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀಮತಿ ಬಾಸೂಕರ್ ಅವರು ವಂದನಾರ್ಪಣೆ ಸಲ್ಲಿಸಿದರು. ಶ್ರೀ ಡಿ.ಎಂ. ಘೋರ್ಪಡೆ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಆಯೋಜಿಸಲಾದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು.

ಇಂತಿ,
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ,
ನವರಸಪುರ, ವಿಜಯಪುರ.
📲Get App