🔥 TRENDING Actor Nithiin visits Tirumala Temple a... ITBP faces 8 vacant senior IPS posts a... 78,000+ Pilgrims Attend Buddha Relics... Pasighat DM bans loud music and live e... J&K Government Transfers 33 Executive... Sunil Calls on S-VYASA to Expand Yoga...
17 Nov 2026•
ગુજરાતી मराठी ਪੰਜਾਬੀ বাংলা

ಗಬ್ಬೂರಿನಿಂದ ನಾರಾಯಣಪುರ ಡ್ಯಾಮ್ ವರೆಗೆ ರೈತರ ಪಾದಯಾತ್ರೆ - ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ

✍️ Reporter: Ningappa 🗓 17 Nov 2026, 03:42 PM 👁 17
Share: 💬 WhatsApp 📘 Facebook 𝕏 Post
ಗಬ್ಬೂರಿನಿಂದ ನಾರಾಯಣಪುರ ಡ್ಯಾಮ್ ವರೆಗೆ ರೈತರ ಪಾದಯಾತ್ರೆ - ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ

ಜಾಲಹಳ್ಳಿ: ಕರ್ನಾಟಕ ರಾಜ್ಯ ರೈತರ ಸಂರಕ್ಷಣ ಸಮಿತಿ ಗಬ್ಬೂರು ವತಿಯಿಂದ ನಾರಾಯಣಪುರ ಡ್ಯಾಮ್ ವರೆಗೆ ಪಾದಯಾತ್ರೆ ಮಂಗಳವಾರ ಜಾಲಹಳ್ಳಿಗೆ ಆಗಮಿಸಿದಾಗ ಜಾಲಹಳ್ಳಿ ಪ್ರಗತಿಪರ,ರೈತಪರ,ಕನ್ನಡಪರ ಸಂಘಟನೆಗಳಿಂದ ಅದ್ದೂರಿಯಾಗಿ ಸ್ವಾಗತಿಸಿ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಪಾದಯಾತ್ರೆಗೆ ಶುಭ ಕೋರಿದರು.

ಸಭೆಯನ್ನು ಉದ್ದೇಶಿಸಿ ರೈತರ ಸಂರಕ್ಷಣ ಸಮಿತಿ ರಾಜ್ಯ ಅಧ್ಯಕ್ಷರಾದ ಮಸ್ತಾನ್ ನಾಯಕ ಮಾತನಾಡಿದರು. ಕಾಲುವೆಗೆ ನೀರು ಹರಿಸುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ,ಈ ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲ ನಾರಾಯಣಪುರ ಡ್ಯಾಮ್ ಪಾದಯಾತ್ರೆಗೆ ಜನ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಸರ್ಕಾರ ರೈತರ ಜೊತೆ ಚಲ್ಲಾಟ ಆಡಬಾರದು ರೈತರು ರೊಚ್ಚಿಗೆದ್ದರೆ ಯಾವ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಂಗಣ್ಣ ಕೊಲ್ಲೂರ್, ಶಬ್ಬೀರ್ ಜಾಲಹಳ್ಳಿ ಮಾತನಾಡಿದರು.

ಗ್ರಾಮದ ಯುವಕರು,ರೈತರು, ವಿವಿಧ ಪ್ರಗತಿಪರ, ರೈತಪರ,ಕನ್ನಡಪರ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.
📲Get App