🔥 ट्रेंडिंग राजस्थान में रेलवे ट्रैक के पास दो बम... लकी सुपर जायंट्स ने मो. शमी को राजस्था... तमिलनाडु मंत्री की मुदुमलई ट्रेक से वन... डीएमके ने विजय के समर्थन में भगवान मुर... જખૌ મરીન પોલીસ અને SOGએ ખિદરત ટાપુમાં... मदुरै तनिष्क गोल्ड डकैती: मुख्य आरोपी...
16 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ತಾಲೂಕಿನ ರೈತರ ಸಮಸ್ಯೆ ಬಗೆಹರಿಸಿ ಕಾಲುವೆಗೆ ನೀರು ಹರಿಸದಿದ್ದರೆ ವಿಧಾನಸೌಧ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ:- ಶಾಸಕಿ ಕರೆಮ್ಮ್ ಜಿ ನಾಯಕ

✍️ रिपोर्टर: Khaja Hussain 🗓 16 नव. 2026, 09:04 PM 👁 24
शेयर करें: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

ದೇವದುರ್ಗ ತಾಲೂಕಿನ ರೈತರ ಸಮಸ್ಯೆ ಬಗೆಹರಿಸಿ ಕಾಲುವೆಗೆ ನೀರು ಹರಿಸದಿದ್ದರೆ
ವಿಧಾನಸೌಧ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ:- ಶಾಸಕಿ ಕರೆಮ್ಮ್ ಜಿ ನಾಯಕ

**ದೇವದುರ್ಗ, ನ.16:** ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ವಹಣೆ, ನಾರಾಯಣಪುರ ಬಲದಂಡೆ ಕಾಲುವೆಗೆ ಜನವರಿ ತಿಂಗಳವರೆಗೆ ನೀರು ಹರಿಸುವುದು, ನೀರಾವರಿ ಕಚೇರಿಗಳ ಸ್ಥಳಾಂತರ ಆದೇಶ ರದ್ದುಪಡಿಸುವುದು ಹಾಗೂ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ವತಿಯಿಂದ ಸೋಮವಾರ ದೇವದುರ್ಗ ಪಟ್ಟಣದ ಸಿರವಾರ ಕ್ರಾಸ್‌ನಲ್ಲಿ ಶಾಸಕಿ ಕರೆಮ್ಮ ಜಿ. ನಾಯಕ ಅವರ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಚಳವಳಿ ಹಾಗೂ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಯನ್ನು ಉದ್ದೇಸಿಸಿ ಮಾತನಾಡಿದ

ಬಾಕ್ಸ್ ನಲ್ಲಿ

ಶಾಸಕಿ ಕರೆಮ್ಮ ಜಿ. ನಾಯಕ ಅವರು ರೈತರ ಸಮಸ್ಯೆ ಬಗೆಹರಿಸಿ ಕಾಲುವೆಗೆ ನೀರು ಹರಿಸದಿದ್ದರೆ
ವಿಧಾನಸೌಧ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ, ಇನ್ನೊಮ್ಮೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಲಾಗುವದು
ನೀರಾವರಿ ಇಲಾಖೆ ಎಮ್ ಡಿ ಅವರನ್ನು ಭೇಟಿ ಯಾಗಿ ಇನ್ನೊಮ್ಮೆ ರೈತರ ಸಮಸ್ಯೆ ಗಳನ್ನು ವಿವರಿಸಲಾಗುವದು, ರೈತರ ಸಮಸ್ಯೆ ಗೆ ಪರಿಹಾರ ಸಿಗದಿದ್ದರೆ ಬಗೆಹರಿಸಿ ಕಾಲುವೆಗೆ ನೀರು ಹರಿಸದಿದ್ದರೆ
ವಿಧಾನಸೌಧ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ, ಇನ್ನೊಮ್ಮೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಲಾಗುವದು ಎಂದು ಪ್ರತಿಭಟನೆ ಉದ್ದೇಸಿಸಿ ಮಾತನಾಡಿದರು

ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ದೇವದುರ್ಗ ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು, ಕೃಷಿ ಕಾರ್ಮಿಕರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳಿಲ್ಲದೆ ಬಡ ಕುಟುಂಬಗಳು ಜೀವನೋಪಾಯಕ್ಕಾಗಿ ಗೋವಾ ಮತ್ತು ಬೆಂಗಳೂರಿನತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕಿ ಕರೆಮ್ಮ್ ಜಿ ನಾಯಕ ಆತಂಕ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ರೈತರಿಗೆ ನೀಡಿದ ಭರವಸೆಯಂತೆ ಸರ್ಕಾರ ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಎರಡೂ ಹಂಗಾಮು ಸೇರಿ ಒಟ್ಟು 18 ಟಿಎಂಸಿ ನೀರು ನೀಡುವುದಾಗಿ ಹೇಳಿದ್ದರೂ, ಭರವಸೆಯಂತೆ ನೀರು ಪೂರೈಸಿಲ್ಲ. ನೀರಿನ ಅಂಕಿ-ಅಂಶಗಳ ಬಗ್ಗೆಯೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇವದುರ್ಗ ತಾಲ್ಲೂಕಿನಲ್ಲಿ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 15 ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಈ ಬೆಳೆಗಳನ್ನು ಉಳಿಸಲು ನಾರಾಯಣಪುರ ಬಲದಂಡೆ ಕಾಲುವೆಗೆ ಜನವರಿ ತಿಂಗಳವರೆಗೆ ನಿರಂತರವಾಗಿ ನೀರು ಹರಿಸಬೇಕು. ಮೆಣಸಿನಕಾಯಿ ಬೆಳೆ ಕಟಾವಿಗೆ ಬರುವವರೆಗೂ ನೀರು ಪೂರೈಸುವುದು ರೈತರ ಹಕ್ಕಾಗಿದೆ. ನೀರಿನ ಕೊರತೆಯಿಂದ ಉಂಟಾದ ಬೆಳೆ ನಷ್ಟವನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಸುಮಾರು 11 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು, ವಿಮಾ ಕಂತು ಪಾವತಿಸಿರುವ ಎಲ್ಲ ಅರ್ಹ ರೈತರಿಗೆ ತಕ್ಷಣ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಎಕರೆವಾರು ವೈಜ್ಞಾನಿಕ ಬೆಳೆ ಹಾನಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

**ಕುಡಿಯುವ ನೀರು, ಮೇವು ಕೊರತೆ ನಿವಾರಿಸಲು ಒತ್ತಾಯ:**

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಆದ್ದರಿಂದ ಅಗತ್ಯವಿರುವ ಕಡೆ ಗೋಶಾಲೆ ಮತ್ತು ಮೇವು ಬ್ಯಾಂಕ್‌ಗಳನ್ನು ಆರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಕಲ್ಪಿಸಿ ವಲಸೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

**ನೀರಾವರಿ ಕಚೇರಿಗಳ ಸ್ಥಳಾಂತರಕ್ಕೆ ವಿರೋಧ:**

ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ 15 ಮತ್ತು 16ರ ನಿರ್ವಹಣೆಗೆ ಸಂಬಂಧಿಸಿದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಲಾಭಾ ವಿಭಾಗ ಸಂಖ್ಯೆ 6ರ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ಉಪವಿಭಾಗ ಸಂಖ್ಯೆ 18ರ ಚಿಕ್ಕಹೊನ್ನಕುಣಿ ಕಚೇರಿಗಳನ್ನು ರಾಯಚೂರಿಗೆ ಸ್ಥಳಾಂತರಿಸುವ ಆದೇಶವನ್ನು ರದ್ದುಗೊಳಿಸಬೇಕು. ರೈತರ ಅನುಕೂಲಕ್ಕಾಗಿ ಈ ಕಚೇರಿಗಳನ್ನು ಚಿಕ್ಕಹೊನ್ನಕುಣಿಯಲ್ಲಿಯೇ ಮುಂದುವರಿಸಬೇಕು. ಪ್ರಸ್ತುತ ಕೃಷ್ಣಾಪುರದಲ್ಲಿರುವ ಅಧೀಕ್ಷಕ ಅಭಿಯಂತರರ ಕಚೇರಿಯನ್ನು ದೇವದುರ್ಗ ತಾಲ್ಲೂಕಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

**ಪ್ರಮುಖ ಎಂಟು ಬೇಡಿಕೆಗಳು:**

1. ನಾರಾಯಣಪುರ ಬಲದಂಡೆ ಕಾಲುವೆಗೆ ಜನವರಿ ತಿಂಗಳವರೆಗೆ ನಿರಂತರವಾಗಿ ನೀರು ಹರಿಸಬೇಕು.
2. ಹಾಲಿನ ದರ, ವಿದ್ಯುತ್ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು.
3. ಬೆಳೆ ಕಳೆದುಕೊಂಡ ರೈತರಿಗೆ ಎಕರೆ ಆಧಾರದ ಮೇಲೆ ವೈಜ್ಞಾನಿಕ ಬೆಳೆ ಹಾನಿ ಪರಿಹಾರ ವಿತರಿಸಬೇಕು.
4. ಕೃಷ್ಣ ಭಾಗ್ಯ ಜಲ ನಿಗಮದ ಲಾಭಾ ವಿಭಾಗ ಸಂಖ್ಯೆ 6 ಹಾಗೂ ಉಪವಿಭಾಗ ಸಂಖ್ಯೆ 18ರ ಕಚೇರಿಗಳನ್ನು ಚಿಕ್ಕಹೊನ್ನಕುಣಿಯಲ್ಲಿಯೇ ಮುಂದುವರಿಸಬೇಕು.
5. ಕೃಷ್ಣಾಪುರದಲ್ಲಿರುವ ಅಧೀಕ್ಷಕ ಅಭಿಯಂತರರ ಕಚೇರಿಯನ್ನು ದೇವದುರ್ಗ ತಾಲ್ಲೂಕಿಗೆ ಸ್ಥಳಾಂತರಿಸಬೇಕು.
6. ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ಜಮೀನುಗಳ ರೈತರಿಗೆ ಬಾಕಿ ಇರುವ ಭೂಪರಿಹಾರ ಪಾವತಿಸಬೇಕು.
7. ತುಂಗಭದ್ರಾ ವಿತರಣಾ ಕಾಲುವೆ ಸಂಖ್ಯೆ 94ರ ವ್ಯಾಪ್ತಿಯ ನಾಗಡದಿನ್ನಿ, ಹೆಗ್ಗಡದಿನ್ನಿ ಮತ್ತು ತಿಪ್ಪಲದಿನ್ನಿ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು.
8. ಬೆಳೆ ವಿಮೆ ಕಂತು ಪಾವತಿಸಿರುವ ಎಲ್ಲ ಅರ್ಹ ರೈತರಿಗೆ ತಕ್ಷಣ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು.

ಇದಲ್ಲದೆ, ಬರ ಪರಿಸ್ಥಿತಿ ನಿರ್ವಹಣೆಗೆ ವಿಪತ್ತು ಪರಿಹಾರ ನಿಧಿ ಬಿಡುಗಡೆ ಮಾಡಿ ತುರ್ತು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ, ಸಿದ್ದಣ್ಣ ತಾತ ಮುಂಡರಗಿ, ರೇಣುಕಸ್ವಾಮಿ, ಸಿದ್ದಯ್ಯ ತಾತ ಮಸರಕಲ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾಧ್ಯಕ್ಷ ವಿರೂಪಾಕ್ಷಿ, ಕಾರ್ಯಾಧ್ಯಕ್ಷ ಶಿವಶಂಕರ ಪಾಟೀಲ್, ಅಂಬರೀಶ್ ಪಾಟೀಲ್, ಶಾಲಂ, ಗೋವಿಂದರಾಜ್ ಜಾಲಹಳ್ಳಿ, ಗೋವಿಂದರಾಜ್ ಕೊತ್ತದೊಡ್ಡಿ, ಶರಣಗೌಡ ಸುಂಕೇಶ್ವರಹಾಳ, ಸಿದ್ದಲಿಂಗಪ್ಪ ಗೌಡ ನಾಗಡದಿನ್ನಿ, ಮಹಿಬೂಬ್, ರಮೇಶ್ ರಾಮನಾಳ, ವೆಂಕನಗೌಡ ಕೊತ್ತದೊಡ್ಡಿ, ದ್ರಾಕ್ಷಿಣಿ, ಗೌರಿ ಜಿ. ನಾಯಕ, ಸಂತೋಷ್ ಜಿ. ನಾಯಕ, ನಾಗರಾಜ್ ಪಾಟೀಲ್ ಸೇರಿದಂತೆ ಜೆಡಿಎಸ್ ಮುಖಂಡರು, ರೈತ ಮುಖಂಡರು ಹಾಗೂ ಸಾವಿರಾರು ರೈತರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App