🔥 TRENDING सतमलपुर के आजाद चौक में छठ महापर्व की... હિંમતનગરમાં એસપી ઓફિસની નજીક તસ્કરોની... Assam Olympic Association Reviews Spor... Abu Road Water Harvesting Project Face... Uttar Pradesh cattle smugglers fire at... Union Minister Sarbananda Sonowal Obse...
15 Nov 2026•
ગુજરાતી मराठी ਪੰਜਾਬੀ বাংলা

ಇದು ಕೇವಲ ಒಬ್ಬ ವ್ಯಕ್ತಿಯ ಜೀವನಕಥೆಯಲ್ಲ. ಪ್ರೀತಿ, ಸಂಬಂಧ, ತ್ಯಾಗ, ನೋವು, ಸಂಘರ್ಷ, ಬದುಕಿನ ಅನಿರೀಕ್ಷಿತ ತಿರುವುಗಳು ಮತ್ತು ಸಾರ್ವಜನಿಕ ಸೇವೆಯ ಸುದೀರ್ಘ ಪಯಣದ ಅಪರೂಪದ ನಿರೂಪಣೆ- ಸಚಿವ ಶಿವರಾಜ ತಂಗಡಗಿ

✍️ Reporter: Ningappa 🗓 15 Nov 2026, 03:11 PM 👁 21
Share: 💬 WhatsApp 📘 Facebook 𝕏 Post
ಕೊಪ್ಪಳ: ನಮ್ಮ ಅಧಿನಾಯಕಿ, ತ್ಯಾಗಕ್ಕೆ ಪ್ರತೀಕರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಕಥನದ ಪ್ರತಿ ನನ್ನ ಕೈ ಸೇರಿದ್ದು, ಓದಲು ಶುರು ಮಾಡಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಎಫ್ ಬಿ ವಾಲ್ ನಲ್ಲಿ ಹಂಚಿಕೊಂಡಿದ್ದಾರೆ.

‘Belonging: A Journey of Love’ ಹೆಸರಿನಲ್ಲೇ ಪ್ರೀತಿ, ಆತ್ಮೀಯತೆ ಮತ್ತು ಸಂಬಂಧಗಳ ಆಳವನ್ನು ಹೊತ್ತಿರುವ ಕೃತಿ.

ಇದು ಕೇವಲ ಒಬ್ಬ ವ್ಯಕ್ತಿಯ ಜೀವನಕಥೆಯಲ್ಲ. ಪ್ರೀತಿ, ಸಂಬಂಧ, ತ್ಯಾಗ, ನೋವು, ಸಂಘರ್ಷ, ಬದುಕಿನ ಅನಿರೀಕ್ಷಿತ ತಿರುವುಗಳು ಮತ್ತು ಸಾರ್ವಜನಿಕ ಸೇವೆಯ ಸುದೀರ್ಘ ಪಯಣದ ಅಪರೂಪದ ನಿರೂಪಣೆ.

ಇಟಲಿಯ ಬಾಲ್ಯದಿಂದ ಭಾರತದ ಬದುಕಿನವರೆಗೆ, ಗಾಂಧಿ ಕುಟುಂಬದೊಂದಿಗಿನ ಬೆಸುಗೆ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೀತಿ ಮತ್ತು ದಾಂಪತ್ಯದ ನೆನಪುಗಳು, ವೈಯಕ್ತಿಕ ಬದುಕಿನ ಏರಿಳಿತಗಳು, ಇದರಿಂದ ಬಂದ ಸವಾಲು, ತೆಗಳಿಕೆ, ನಿಂದನೆಗಳನ್ನು ಮೆಟ್ಟಿ ನಿಂತು ಈ ಮಣ್ಣಿನಲ್ಲೇ ಮಣ್ಣಾಗುವ ಶಪಥ ಮಾಡಿರುವ ಈ ದೇಶದ ಹೆಮ್ಮೆ ಸೋನಿಯಾ ಗಾಂಧಿ.

ಪ್ರಧಾನಮಂತ್ರಿ ಹುದ್ದೆ, ಪುತ್ರನಿಗೆ ಸಚಿವ ಸ್ಥಾನ ಎಲ್ಲವನ್ನೂ ತ್ಯಾಗ ಮಾಡಿಯೂ ಮೂದಲಿಕೆ, ಟೀಕೆ ಟಿಪ್ಪಣಿ ಎದುರಿಸಿದ ಮಹಿಳೆ ಸೋನಿಯಾ ಗಾಂಧಿ ಅವರು. ಅವರ ಸಾರ್ವಜನಿಕ ಜೀವನದ ಹಲವು ಮಜಲುಗಳನ್ನು ಈ ಕೃತಿ ತೆರೆದಿಡುತ್ತದೆ.

ಕೆಲವೇ ಪುಟಗಳ ಓದಿನಲ್ಲೇ ಈ ಕೃತಿಯ ಭಾವನಾತ್ಮಕ ಆಳ ಮತ್ತು ನಿರೂಪಣೆಯ ಆತ್ಮೀಯತೆ ಮನಸ್ಸನ್ನು ಸೆಳೆದಿದೆ. ಇತಿಹಾಸದ ಕೆಲವು ಮಹತ್ವದ ಕ್ಷಣಗಳನ್ನು ಮತ್ತೊಂದು ದೃಷ್ಟಿಕೋನದಿಂದ ಅರಿಯುವ ಅವಕಾಶವನ್ನೂ ಈ ಪುಸ್ತಕ ಒದಗಿಸಲಿದೆ ಎಂಬ ನಿರೀಕ್ಷೆಯಿದೆ.

ಕೆಲವು ಪುಸ್ತಕಗಳು ನಮ್ಮ ಕೈ ಸೇರುತ್ತವೆ. ಇನ್ನು ಕೆಲವು ನಮ್ಮ ಮನಸ್ಸನ್ನು ಪ್ರವೇಶಿಸುತ್ತವೆ. ಈ ಕೃತಿ ಅಂತಹದ್ದೊಂದು ವಿಶೇಷ ಓದಿನ ಅನುಭವ ನೀಡುವ ಭರವಸೆ ಮೂಡಿಸಿದೆ.
📲Get App