🔥 TRENDING Another police encounter reported in A... 17-Year-Old Student Dies After Injecti... तंबौर क्षेत्र में बड़ी दुर्घटना, तीन ल... Woman Falls from Pushpak Express Near... नाचना ग्राम पंचायत: सरपंच नामांकन के द... बलिया के नगरा थाना में गौवापार गाँव मे...
15 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದ ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿ - ಸಮಾಜಮುಖಿ ಕಾರ್ಯಗಳಿಗೆ ಅಧ್ಯಕ್ಷ ಜಿ. ಬಸವರಾಜ್ ಕರೆ - ಸಂಘವನ್ನು ತಾಲೂಕಿನಾದ್ಯಂತ ಮಾದರಿಯಾಗಿ ಬೆಳೆಸಲು ಸದಸ್ಯರ ಸಹಕಾರ ಅತ್ಯಗತ್ಯ

✍️ Reporter: Ningappa 🗓 15 Nov 2026, 11:27 AM 👁 23
Share: 💬 WhatsApp 📘 Facebook 𝕏 Post

ದೇವದುರ್ಗ ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿ - ಅಧ್ಯಕ್ಷ ಜಿ. ಬಸವರಾಜ್ ಅಧ್ಯಕ್ಷತೆ - ಸಮಾಜಮುಖಿ ಸೇವಾ ಕಾರ್ಯಗಳಿಗೆ ಕರೆ - ಆಯವ್ಯಯ, ಲೆಕ್ಕಶೀರ್ಷಿಕೆ ಮಂಡನೆ, ಮಹತ್ವದ ನಿರ್ಣಯಗಳು

ದೇವದುರ್ಗದ ಬಳಕೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿ: ಸಮಾಜಮುಖಿ ಕಾರ್ಯಗಳಿಗೆ ಅಧ್ಯಕ್ಷ ಜಿ. ಬಸವರಾಜ್ ಕರೆ

ದೇವದುರ್ಗ: ಪಟ್ಟಣದ ಬಳಕೆದಾರರ ಸಹಕಾರ ಸಂಘ ನಿಯಮಿತ (ರಿ.) ದೇವದುರ್ಗ ಇದರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಕಚೇರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿ. ಬಸವರಾಜ್ ನಾಯಕರು, ಸಹಕಾರ ಸಂಘವು ಕೇವಲ ಆರ್ಥಿಕ ವಹಿವಾಟಿಗೆ ಸೀಮಿತವಾಗದೆ, ಸದಸ್ಯರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಘವನ್ನು ತಾಲೂಕಿನಾದ್ಯಂತ ಮಾದರಿಯಾಗಿ ಬೆಳೆಸಲು ಪ್ರತಿಯೊಬ್ಬ ಸದಸ್ಯರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಘದ ಉಪಾಧ್ಯಕ್ಷ ವಿಶ್ವನಾಥ್ ಸಾರು, ಕಾರ್ಯದರ್ಶಿ ನಾಗೇಂದ್ರ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಕಳೆದ ಒಂದು ವರ್ಷದ ಆಯವ್ಯಯ, ಲೆಕ್ಕಶೀರ್ಷಿಕೆ ಮಂಡನೆ ಹಾಗೂ ಸಂಘದ ಮುಂದಿನ ಸಮಗ್ರ ಬೆಳವಣಿಗೆಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ ಅಕ್ಕರಕಿ ಹಾಗೂ ಮುಖಂಡರಾದ ಶಿವರಾಜ್ ರುದ್ರಾಕ್ಷಿ ಮಾತನಾಡಿ, ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆದು ಸದಸ್ಯರಿಗೆ ನಿರಂತರ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

ಈ ಮಹಾಸಭೆಯಲ್ಲಿ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ಜನ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ವಾರ್ಷಿಕ ಸಭೆಯನ್ನು ಯಶಸ್ವಿಗೊಳಿಸಿದರು.
📲Get App