🔥 TRENDING Top 5 Pankaj Tripathi Thriller Films t... Congress outpaces BJP by 14 lakh votes... Forgotten Bengali Disco Track Revived... बिहार के नर्सिंग व पैरामेडिकल कॉलेजों... Aparna Reddy Unveils Bold, Retro‑Inspi... Charlie Puth and Ellie Goulding to Deb...
21 Nov 2026•
ગુજરાતી मराठी ਪੰਜਾਬੀ বাংলা
Local

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ವಿಜಯಪುರದ ನವರಸಪುರದಲ್ಲಿ

✍️ Reporter: YALLAPPA RAGATE (PATIL) 🗓 15 Nov 2026, 07:57 PM 👁 56
Share: 💬 WhatsApp 📘 Facebook 𝕏 Post

15‑11‑2026 ರಂದು ನವರಸಪುರದ ಸುಕ್ಷೇತ್ರ ಶಿವಾಲಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯರು ಪ್ರವಾಸ, ವೈದ್ಯಕೀಯ ಶಿಬಿರ ಮತ್ತು ವಿವಿಧ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಂಡರು.

15‑11‑2026 ರಂದು ಬೆಳಿಗ್ಗೆ 11 ಗಂಟೆಗೆ ನವರಸಪುರದ ಸೇನಾ ನಗರದಲ್ಲಿರುವ ಸುಕ್ಷೇತ್ರ ಶಿವಾಲಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ಎಸ್.ಎಲ್. ಇಂಗಳೇಶ್ವರ ವಹಿಸಿದ್ದರು.

ಸಭೆಗೆ ಶ್ರೀ ಬಿ.ಡಿ. ಕಡಕೋಳ, ಶ್ರೀ ಕೆ.ಜಿ. ಕೋಟ್ಯಾಳ, ಶ್ರೀ ಎಲ್.ಎ. ಸಿಂಧೆ, ಶ್ರೀ ಎಸ್.ಐ. ಹಿರೇಮಠ, ಶ್ರೀಮತಿ ಮಂದಾಕಿನಿ ಹಳ್ಳಿ ಮತ್ತು ಇತರ ಸದಸ್ಯರು ಹಾಜರಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಭಾರತಿ ಪಾಟೀಲ ಸ್ವಾಗತ ಗೀತೆ ಹಾಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಜಿ. ಕೋಟ್ಯಾಳ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಭೆಯಲ್ಲಿ 06‑12‑2026 ರಂದು ಸುಕ್ಷೇತ್ರ ಕೊಪ್ಪಳದ ಪೂಜ್ಯ ಅಭಿನವ ಗವಿದ್ದೇಶ್ವರ ಸ್ವಾಮೀಜಿಯವರ ಮಠಕ್ಕೆ ಚಿಕ್ಕ ಪ್ರವಾಸ ಕೈಗೊಳ್ಳಲು ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಪ್ರತಿ ಸದಸ್ಯರಿಗೆ ರೂ.800 ನಿಗದಿಪಡಿಸಲಾಗಿದ್ದು, ನಿಗದಿತ ಹಣವನ್ನು 20‑11‑2026 ರೊಳಗಾಗಿ ಶ್ರೀ ಕೋಟ್ಯಾಳ ಅಥವಾ ಶ್ರೀ ಸಾಲಿಮಠ ಅವರಿಗೆ ಸಲ್ಲಿಸುವಂತೆ ತಿಳಿಸಲಾಯಿತು. ಜೊತೆಗೆ ನವೆಂಬರ್ ತಿಂಗಳ ಕೊನೆಯ ವಾರದೊಳಗೆ ಸಂಬಂಧಿಸಿದ ಇಲಾಖೆಯ ಮೂಲಕ ಸಂಘದ ಎಲ್ಲಾ ಸದಸ್ಯರಿಗೆ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲು ನಿರ್ಧರಿಸಲಾಯಿತು; ಶಿಬಿರದಲ್ಲಿ ರಕ್ತದೊತ್ತಡ, ಹೃದಯ ಮತ್ತು ಮಧುಮೇಹ ಪರೀಕ್ಷೆಗಳು ನಡೆಸಲಾಗುವುದು.

ಸಭೆಯಲ್ಲಿ ಶ್ರೀ ವಿವೇಕಾನಂದ ಪಾಟೀಲ ಗೋಮಾತೆಯ ಮಹತ್ವ, ಶ್ರೀ ಎಸ್.ಎಸ್. ಬಡಿಗೇರ ಧ್ಯಾನ, ಶ್ರೀಮತಿ ಶಾಂತಾ ಹೆರಕಲ್ ಆರೋಗ್ಯ ಕುರಿತ ಉಪಯುಕ್ತ ವಿಚಾರಗಳನ್ನು ಹಂಚಿಕೊಂಡರು. ಅಧ್ಯಕ್ಷ ಶ್ರೀ ಎಸ್.ಎಲ್. ಇಂಗಳೇಶ್ವರ ಸಮಾರೋಪ ಭಾಷಣ ಮಾಡಿ, ಶ್ರೀ ಸಾಲಿಮಠ ವಂದನಾರ್ಪಣೆ ಸಲ್ಲಿಸಿದರು; ಶ್ರೀ ಡಿ.ಎಂ. ಘೋರ್ಪಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ಸದಸ್ಯರು ಸಂಘದ ಸಮವಸ್ತ್ರದಲ್ಲಿ ಹಾಜರಾಗಿದ್ದು, ಅಲ್ಪೋಪಹಾರದೊಂದಿಗೆ ಸಭೆ ಸುಸಂಪನ್ನಗೊಂಡಿತು. ಗೈರುಹಾಜರಾದ ಸದಸ್ಯರು ಮುಂದಿನ ಸಭೆಗಳಿಗೆ ತಪ್ಪದೇ ಹಾಜರಾಗುವಂತೆ ನಿರ್ಣಯ ಕೈಗೊಳ್ಳಲಾಯಿತು.
📲Get App