🔥 TRENDING চন্দনগরে জগদ্ধাত্রী পূজার মহাষষ্টী উদয... ਭਾਰਤ ਦੇ ਅਰਸ਼ਦੀਪ ਸਿੰਘ ਬਣੇ ਮੇਨ ਆਫ ਦਾ ਮੈ... नवादा में मिर्जापुर छठ घाट पर जिला प्र... नोएडा के भट्ठा कालोनी में शाम को छठ पू... डॉ शैलेन्द्र गुप्ता महाराजा अग्रसेन ग्... ਭੀਮ ਨਗਰ, ਹੁਸ਼ਿਆਰਪੁਰ ਵਿੱਚ ਸ਼ਟ ਪੂਜਾ ਦਾ ਧ...
15 Nov 2026•
ગુજરાતી मराठी ਪੰਜਾਬੀ বাংলা

ಚಂದ್ರಶೇಖರ್ ದೋಡ್ಡಮನಿ ಅವರ ಮೇಲಿನ ಹಲ್ಲೆಯನ್ನು ಖಂಡಿಸೋಣ – ನ್ಯಾಯಕ್ಕಾಗಿ ಒಂದಾಗಿ ಧ್ವನಿ ಎತ್ತೋಣ!

✍️ Reporter: YALLAPPA RAGATE (PATIL) 🗓 15 Nov 2026, 06:09 PM 👁 18
Share: 💬 WhatsApp 📘 Facebook 𝕏 Post
ಸಮಾನ ಮನಸ್ಸು ಸಂಘಟನೆಗಳು,
ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿತರರಲ್ಲಿ
ಹೃತ್ಪೂರ್ವಕ ಮನವಿ
ಚಂದ್ರಶೇಖರ್ ದೋಡ್ಡಮನಿ ಅವರ
ಮೇಲಿನ ಹಲ್ಲೆಯನ್ನು ಖಂಡಿಸೋಣ –
ನ್ಯಾಯಕ್ಕಾಗಿ ಒಂದಾಗಿ ಧ್ವನಿ ಎತ್ತೋಣ!
ನಾವು ಚಂದ್ರಶೇಖರ್ ದೋಡ್ಡಮನಿ ಅವರ ಪ್ರತಿದಿನದ ಹೋರಾಟದಲ್ಲಿ ನೆಲವಾಗಿ ಭಾಗಿಯಾಗಬೇಕೆಂದು, ಅವರ ಅವರ ನಿರಂತರವಾಗಿ ಸಾಮಾಜಿಕ ನ್ಯಾಯಕ್ಕಾಗಿ, ಸಮುದಾಯದ ಹಕ್ಕುಗಳಿಗಾಗಿ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಅಗತ್ಯವಾದ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ.
ಒಬ್ಬ ಹೋರಾಟಗಾರನ ಮೇಲೆ ನಡೆದ ಹಲ್ಲೆ ಕೇವಲ ವ್ಯಕ್ತಿಯ ಮೇಲಿನ ದಾಳಿಯಲ್ಲ; ಅದು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕಿನ ಮೇಲಿನ ದಾಳಿಯಾಗಿದೆ.
ಆದ್ದರಿಂದ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಾವೆಲ್ಲರೂ ಒಂದಾಗಬೇಕು.
ದಿನಾಂಕ 16-11-2026 ರಂದು ಹೋವಿನ ಹಡಗಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಮಗಾರ ಮನಸ್ಸು ಸಂಘಟಕರು, ವಿವಿಧ ಸಮುದಾಯಗಳ ಮುಖಂಡರು, ಸಾಮಾಜಿಕ ಹೋರಾಟಗಾರರು, ಯುವಕರು ಹಾಗೂ ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಪ್ರತಿಭಟನೆಯ ವಿವರಗಳು:
ದಿನಾಂಕ: 16-11-2026
ಸ್ಥಳ: ಹೋವಿನ ಹಡಗಲಿ
ಮೆರವಣಿಗೆ ಮಾರ್ಗ:
ಮ್ಯುಲಾರ ಲಿಂಗೇಶ್ವರ ರಸ್ತೆ →
ಮೋದಲಪೇಟೆ ವೃತ್ತ → ಪೊಲೀಸ್ ಠಾಣೆ ಎದುರು.
ನಾವು ಅವರ ಪ್ರತಿಯೊಂದು ಹೋರಾಟದಲ್ಲೂ ಬೆಂಬಲಿಗರಾಗಿ, ಬೋಲುವವರಿಗೆ ನ್ಯಾಯವಾಗದಿದ್ದರೂ, ಸಂಘಟನೆಯ ಸಮುದಾಯದಲ್ಲಿ ಅವರ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯ.
ಇಂದು ನಾವು ಒಂದಾಗದಿದ್ದರೆ ನಾಳೆ ನಮ್ಮ ಧ್ವನಿಗೂ ಬೆಲೆ ಇಲ್ಲದಂತಾಗಬಹುದು.
ಬನ್ನಿ, ಒಗ್ಗಟ್ಟಿನಿಂದ ಪ್ರತಿಭಟಿಸೋಣ.
ಅನ್ಯಾಯವನ್ನು ಖಂಡಿಸೋಣ.
ಹೋರಾಟಗಾರ ಸುರಕ್ಷಿತ ಮತ್ತು ನ್ಯಾಯಕ್ಕಾಗಿ ಒಂದಾಗೋಣ.
ನಿಮ್ಮ ಉಪಸ್ಥಿತಿಯೇ ನಮ್ಮ ಒಗ್ಗಟ್ಟಿನ ಶಕ್ತಿ!
ಪಾ ಯ ಗಣೇಶ್ – 9481711600
ವೆಂಕಟೇಶ್ ಇಟ್ಟಿಗಿ – 9663987081
ವರುಣ್ ತೋರಣ್ ಗಟ್ಟಿ – 89515 18947
ನ್ಯಾಯಕ್ಕಾಗಿ ಒಂದಾಗೋಣ – ಹೋರಾಟಕ್ಕೆ ಕೈಜೋಡಿಸೋಣ!
📲Get App