🔥 ट्रेंडिंग 3,272 शिक्षक ने किया जनगणना चरण II का... वीड का सामना गोवा से आज के उद्घाटन मुक... नागालैंड राज्य लॉटरी के विजेताओं की सू... बीडीओ और एमओआईसी के आदेश पर पाकुड़िया... पीएम मोदी ने कहा विज्ञान और आध्यात्मिक... लुधियाना में दो गाड़ियां जलकर राख बन ग...
14 नव. 2026•
ગુજરાતી मराठी ਪੰਜਾਬੀ বাংলা

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘಟನೆಯಿಂದ ಶಾಸಕರಿಗೆ ಮನವಿ

✍️ रिपोर्टर: Ningappa 🗓 14 नव. 2026, 04:45 PM 👁 26
शेयर करें: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷೇತ್ರದ ಶಾಸಕಿ ಕರಿಯಮ್ಮ ಜೀ ನಾಯಕ ಅವರಿಗೆ ಕೃಷಿ ಕೂಲಿಕಾರ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಮಹಿಳಾ ವಸತಿ ನಿಲಯ, ಅಕ್ರಮ ಮದ್ಯಪಾನ, ಮಟ್ಕಾ,ಜೂಜಾಟ, ಅಕ್ರಮ ಮರಳು ಸಾಗಾಣಿಕೆ ನಿಯಂತ್ರಿಸುವಂತೆ ಒತ್ತಾಯಿಸಿದರು.

ಅಲ್ಲದೇ ಬಸವೇಶ್ವರ ವೃತ್ತದಿಂದ ಬಾಲಕರ ಪ್ರೌಡ ಶಾಲೆ ವರೆಗೆ ರಸ್ತೆ ಡಿವೈಡರ್ ನಿರ್ಮಿಸುವುದು, ವಾಲ್ಮೀಕಿ ವೃತ್ತದಿಂದ ಶ್ರೀಲಕ್ಷ್ಮಿ ರಂಗನಾಥ ದೇವಸ್ಥಾನದ ವರೆಗೆ ರಸ್ತೆ ಒತ್ತುವರಿಯಾಗಿದ್ದು ಅದನ್ನು ತೆರವುಗಳಿಸುವು ಮತ್ತು ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನದ ಜಾತ್ರಾ ಮಹೋತ್ಸಕ್ಕೆ ಮೀಸಲಿಟ್ಟ ಜಾಗ ಹದ್ದುಬಸ್ತು ಮಾಡುವಂತೆ ಒತ್ತಾಯಿಸಿದ ಮನವಿ ಪತ್ರ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಜಾಲಹಳ್ಳಿ ಗ್ರಾಮ ಘಟಕ ಅಧ್ಯಕ್ಷ ಶರಣಪ್ಪ ಕಾರಲಕುಂಟಿ, ಸುರೇಶ್ ಗೌಡ,ನರೇಶ್, ಶಾಂತಕುಮಾರ್, ಆನಂದ ಇದ್ದರು.
📲Get App