🔥 TRENDING Women outnumber men in Tamil Nadu vote... छठ पूजा के प्रथम अनुष्ठान “नहाय‑खाय” क... Man dies in Mangalore after rasgulla e... MP Police Constable 2026 Admit Card Re... किसान 25 नवंबर को संतपुरा में बड़ा विर... Madhya Pradesh Prepares to Acquire New...
13 Nov 2026•
ગુજરાતી मराठी ਪੰਜਾਬੀ বাংলা
Politics

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ

✍️ Reporter: Basavaraj pujari 🗓 13 Nov 2026, 06:23 PM 👁 13
Share: 💬 WhatsApp 📘 Facebook 𝕏 Post
ಬೀದರ್: ನಗರದ ಕೇಂದ್ರ ಬಸ್ ನಿಲ್ದಾಣದಿಂದ ತಾಯಿ-ಮಗು ವೃತ್ತ, ಅಕ್ಕಮಹಾದೇವಿ ಕಾಲೇಜಿನಿಂದ ಕೆಇಬಿ ಕಚೇರಿ ಹಾಗೂ ರೋಟರಿ ವೃತ್ತದಿಂದ ಖಂಡ್ರೆ ಪೆಟ್ರೋಲ್ ಬಂಕ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಹೀಂಖಾನ್ ಶುಕ್ರವಾರ ಚಾಲನೆ ನೀಡಿದರು.
ಮೂರೂ ರಸ್ತೆ ಕಾಮಗಾರಿಗಳು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ರೂ. 37.50 ಕೋಟಿ ರಸ್ತೆ ಅಭಿವೃದ್ಧಿ ಪ್ಯಾಕೇಜ್‍ನ ಭಾಗವಾಗಿವೆ. ಈ ಕಾಮಗಾರಿಗಳಿಗೆ ರೂ. 5 ಕೋಟಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.
ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ರಸ್ತೆಗಳನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
ಬೀದರ್ ಕ್ಷೇತ್ರದ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದೇ ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
📲Get App