🔥 TRENDING India's Vice-President to Visit Thooth... MP inaugurates ₹24 crore Kamdhenu Gaus... Madhya Pradesh Police Sub‑Inspector 20... दीवाली के बाद दिल्ली की हवा में AQI 40... दिल्ली में यमुना पर शुरू हुई पहली क्रू... Gujarat Home Minister Unveils Rs 1,400...
10 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಕೆಲಸದ ಸಮಯದಲ್ಲಿ ಮನವಿ ಸಲ್ಲಿಸಿದ ಸರ್ಕಾರಿ ನೌಕರರು - ಅರ್ಧ ದಿನ ರಜೆ ತೆಗೆದುಕೊಂಡು ಮನವಿ ಸಲ್ಲಿಸಬೇಕಿತ್ತು, ಇಲ್ಲದಿದ್ದರೆ ಲೋಕಾಯುಕ್ತ ದೂರು - ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ಅಮರಾಪೂರ ಎಚ್ಚರಿಕೆ

✍️ Reporter: Ningappa 🗓 10 Nov 2026, 04:27 PM 👁 11
Share: 💬 WhatsApp 📘 Facebook 𝕏 Post

ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಅವರಿಗೆ ನ.6 ರಂದು ಸರ್ಕಾರಿ ನೌಕರರ ಸಂಘದಿಂದ ಮನವಿ - ಕೆಲಸದ ಸಮಯದಲ್ಲಿ ಮನವಿ ಸಲ್ಲಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ಅಮರಾಪೂರ ಆರೋಪ - ಅರ್ಧ ದಿನ ರಜೆ ತೆಗೆದುಕೊಂಡು ಮನವಿ ಸಲ್ಲಿಸಬೇಕಿತ್ತು, ಇಲ್ಲದಿದ್ದರೆ ಲೋಕಾಯುಕ್ತ ದೂರು, ಕಾನೂನು ಹೋರಾಟ ಎಂದು ಎಚ್ಚರಿಕೆ - ಇನ್ನೊಂದೆಡೆ ಆರ್‌ಟಿಐ ನಕಲಿ ಕಾರ್ಯಕರ್ತರು, ಸುಳ್ಳು ಸುದ್ದಿ ಹಾಕಿ ಬೆದರಿಸುವವರ ವಿರುದ್ಧ ಕ್ರಮಕ್ಕೆ ನೌಕರರ ಸಂಘ ಒತ್ತಾಯ - ಕಚೇರಿ ಸಮಯದಲ್ಲಿ ಕಿರುಕುಳ ತಪ್ಪಿಸದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ

ದೇವದುರ್ಗ: ಕಾನೂನಿನ ನಿಯಮದಡಿಯಲ್ಲಿ ಕೆಲಸ ಮಾಡಬೇಕಾದ ಸರ್ಕಾರದ ಅಧಿಕಾರಿಗಳು ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರದ ಕೆಲಸದ ಸಮಯದಲ್ಲಿ ಕೆಲಸ ಮಾಡದೆ ದಿನಾಂಕ 6/11/2026 ರಂದು ದೇವದುರ್ಗ ಪಟ್ಟಣದಲ್ಲಿ ಇರುವ ತಹಶೀಲ್ದಾರ್ ಕಚೇರಿಯ ಗೌರವಾನ್ವಿತ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಅವರಿಗೆ ಸರ್ಕಾರಿ ನೌಕರರ ಸಂಘ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ಅಮರಾಪೂರ ಆರೋಪಿಸಿದ್ದಾರೆ.

ಇವರು ಅರ್ಧ ದಿನದ ರಜೆ ತೆಗೆದುಕೊಂಡು ಮನವಿ ಸಲ್ಲಿಸಿದರೆ ಸರಿಯಾಗಿದೆ, ಇಲ್ಲವಾದರೆ ಇವರೆಲ್ಲರ ವಿರುದ್ಧ ಲೋಕಾಯುಕ್ತ ದೂರು ಸಲ್ಲಿಸಲಾಗುವುದು ಮತ್ತು ಇವರೆಲ್ಲರ ವಿರುದ್ಧ ಕಾನೂನಿನ ಹೋರಾಟ ಮಾಡಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ಅಮರಾಪೂರ ಎಚ್ಚರಿಸಿದ್ದಾರೆ.

ಸರ್ಕಾರಿ ನೌಕರರು ಸರ್ಕಾರದ ಕೆಲಸದ ಸಮಯದಲ್ಲಿ ತಮ್ಮ ಕೆಲಸ ಬಿಟ್ಟು ಮನವಿ ಸಲ್ಲಿಸಲು ಹೋಗುವುದು ಸರಿಯೇ. ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗುವುದಿಲ್ಲವೇ. ನಿಯಮ ಎಲ್ಲರಿಗೂ ಒಂದೇ ಅಲ್ಲವೇ ಎಂದು ಅಳ್ಳಪ್ಪ ಅಮರಾಪೂರ ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸರ್ಕಾರಿ ನೌಕರರಿಗೆ ತೊಂದರೆ ಕೊಡುವ ಆರ್‌ಟಿಐ ನಕಲಿ ಕಾರ್ಯಕರ್ತರು ಹಾಗೂ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ಮನವಿ ಸಲ್ಲಿಸಿದ್ದರು.

ತಾಲೂಕಿನಲ್ಲಿ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಹೆಸರಿನಲ್ಲಿ ಆರ್‌ಟಿಐ ಅರ್ಜಿ ಹಾಕಿ ನೌಕರರಿಗೆ ತೊಂದರೆ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ನೌಕರರನ್ನು ಗುರಿಯಾಗಿಸಿಕೊಂಡು ಪದೇ ಪದೇ ಆರ್‌ಟಿಐ ಅರ್ಜಿ ಹಾಕಿ ಬೆದರಿಸುವ, ಹಣದ ಬೇಡಿಕೆ ಇಡುವವರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಕೆಲವರು ಮಾನಹಾನಿ ಮಾಡುವ ಸುದ್ದಿ, ಸುಳ್ಳು ಸುದ್ದಿ ಪ್ರಕಟಿಸಿ ಹಣ ಕೀಳುವ ಜಾಲ ಹುಟ್ಟಿಕೊಂಡಿದೆ. ಇದರಿಂದಾಗಿ ನಿರ್ಭೀತಿಯಿಂದ ಕೆಲಸ ಮಾಡದಂತಾಗಿದೆ ಎಂದು ನೌಕರರು ತಿಳಿಸಿದ್ದಾರೆ.

ಆರ್‌ಟಿಐ ಹೆಸರಿನಲ್ಲಿ ಬೆದರಿಸುವ, ಮಾನಹಾನಿ ಮಾಡುವ, ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದೇ ಇಲಾಖೆಗೆ ಪದೇ ಪದೇ ಅನಗತ್ಯ ಆರ್‌ಟಿಐ ಅರ್ಜಿ ಸಲ್ಲಿಸಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಚೇರಿ ಸಮಯದಲ್ಲಿ ಕಿರುಕುಳ ನೀಡುವುದನ್ನು ತಪ್ಪಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು.
📲Get App