ತಿಪ್ಪೆಗುಂಡಿಗಳಿಂದ ಸಂಚಾರಕ್ಕೆ ತೊಂದರೆ - ಅರಕೇರಾ - ಗಲಗ - ಜಾಲಹಳ್ಳಿ ರಸ್ತೆಯಲ್ಲಿ ರಸ್ತೆ ಅತಿಕ್ರಮಿಸಿದ ತಿಪ್ಪೆಗುಂಡಿ, ಜಾಲಿ ಗಿಡ - ಬೈಕ್ ಸವಾರನ ಸಾವು, ಹಲವರು ಕಣ್ಣು-ಕಾಲು ಕಳೆದುಕೊಂಡಿದ್ದಾರೆ ಎಂದು ಆರೋಪ - ಒತ್ತುವರಿ ತೆರವಿಗೆ ಒತ್ತಾಯ
ಊಟ ಗ್ರಾಮದ ರಸ್ತೆಪಕ್ಕದಲ್ಲಿ ಹಾಕಿರುವ ತಿಪ್ಪೆಗುಂಡಿಗಳು ರಸ್ತೆ ಅತಿಕ್ರಮಿಸಿರುವುದು - ಅರಕೇರಾ ತಾಲ್ಲೂಕು ಕೇಂದ್ರದಿಂದ ಗಲಗ, ಊಟ, ಗಾಣಧಾಳ, ಸೋಮನಮರಡಿ, ಬೊಮ್ಮನಹಳ್ಳಿ ಮಾರ್ಗವಾಗಿ ಜಾಲಹಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ - 2 ವರ್ಷಗಳ ಹಿಂದೆ ಬೈಕ್ ಸವಾರ ಸಾವು, ದ್ವಿಚಕ್ರ ಸವಾರರು ಕಣ್ಣು, ಕಾಲು ಕಳೆದುಕೊಂಡಿದ್ದಾರೆ - ಒತ್ತುವರಿ ತೆರವಿಗೆ ಗಲಗ ಗ್ರಾಮಸ್ಥರ ಒತ್ತಾಯ
ತಿಪ್ಪೆಗುಂಡಿಗಳಿಂದ ಸಂಚಾರಕ್ಕೆ ತೊಂದರೆ
ಜಾಲಹಳ್ಳಿ: ಸಮೀಪದ ಅರಕೇರಾ ತಾಲ್ಲೂಕು ಕೇಂದ್ರದಿಂದ ಗಲಗ, ಊಟ, ಗಾಣಧಾಳ, ಸೋಮನಮರಡಿ, ಬೊಮ್ಮನಹಳ್ಳಿ ಮಾರ್ಗವಾಗಿ ಜಾಲಹಳ್ಳಿಗೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ಕೆಲವರು ತಿಪ್ಪೆಗುಂಡಿ ಹಾಕಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಮಾಡಿದ್ದಾರೆ. ಆದರೆ, ರಸ್ತೆಯ ಅಕ್ಕ ಪಕ್ಕದಲ್ಲಿ ತಿಪ್ಪೆ ಗುಂಡಿಗಳನ್ನು ಹಾಕಲಾಗಿದೆ. ರಸ್ತೆ ಪಕ್ಕದ ಜಮೀನಿರುವ ರೈತರು ನೀರಾವರಿ ಮಾಡಿಕೊಳ್ಳಲು ಎಲ್ಲೆಂದರಲ್ಲಿ ರಸ್ತೆ ಅಗೆದು ಪೈಪ್ ಹಾಕಿಕೊಂಡು ರಸ್ತೆಯನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ.
ರಸ್ತೆಯ ಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದಿವೆ. ಜಾಲಿ ಗಿಡಗಳ ಸಮಸ್ಯೆಯಿಂದ ಈ ರಸ್ತೆಯಲ್ಲಿ ಸಂಚರಿಸುವ ಅನೇಕ ದ್ವಿಚಕ್ರ ವಾಹನಸವಾರರು ಕಣ್ಣು, ಬೋಮ್ಮು, ಕಾಲು ಕಳೆದುಕೊಂಡಿದ್ದಾರೆ.
ಊಟ ಗ್ರಾಮದಲ್ಲಿ 2 ವರ್ಷಗಳ ಹಿಂದೆ ರಸ್ತೆಯ ಪಕ್ಕದಲ್ಲಿ ತಿಪ್ಪೆಗುಂಡಿ ಇರುವುದರಿಂದ ಸಾರಿಗೆ ಸಂಸ್ಥೆಯ ಬಸ್ ಚಕ್ರಕ್ಕೆ ಒಬ್ಬ ಬೈಕ್ ಸವಾರ ಪ್ರಾಣ ಕಳೆದುಕೊಂಡಿದ್ದಾನೆ.
ಮುಖ್ಯ ರಸ್ತೆ ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ತೊಂದರೆಯಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡಿದವರಿಗೆ ನೋಟಿಸ್ ಸಹ ನೀಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಕ್ಷಣವೇ ಅರಕೇರಾದಿಂದ ಗಲಗ ಹಾಗೂ ಜಾಲಹಳ್ಳಿವರೆಗೆ ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಗಲಗ ಗ್ರಾಮಸ್ಥರು ಒತ್ತಾಯಿಸಿದ್ದಾರೆ.