🔥 TRENDING Himachal village forgoes Diwali celebr... Renowned Saints Form Committee to Puri... Roadways staff begin indefinite strike... Daler Mehndi thanks supporters after U... கணபதி அருகே கார் ஒர்க் ஷாப்பில் தீ வி... ಗಾಣಧಾಳ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ - ಮರಳ...
08 Nov 2026•
ગુજરાતી मराठी ਪੰਜਾਬੀ বাংলা

ನಶಾಮುಕ್ತ ರಾಯಚೂರುಗಾಗಿ ಜಾಗೃತಿ ಜಾಥಾ - ಶೆಟ್ಟಿಭಾವಿ ವೃತ್ತದಿಂದ ನಾಗರಕಟ್ಟೆವರೆಗೆ ಜಾಗೃತಿ ನಡಿಗೆ - ಯುವಜನರು ವ್ಯಸನಕ್ಕೆ ಬಲಿಯಾಗದೆ ಸದೃಢ ಆರೋಗ್ಯ ಹೊಂದಲು ಆಯುಕ್ತ ಜುಬಿನ್ ಮೋಹಾಪಾತ್ರ ಕರೆ

✍️ Reporter: Ningappa 🗓 08 Nov 2026, 10:35 PM 👁 18
Share: 💬 WhatsApp 📘 Facebook 𝕏 Post

ನಶಾಮುಕ್ತ ರಾಯಚೂರುಗಾಗಿ ಜಾಗೃತಿ ಜಾಥಾ - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸಹಯೋಗ - ನೇತಾಜಿ ನಗರ ಶೆಟ್ಟಿಭಾವಿ ವೃತ್ತದಿಂದ ಹರಿಜನವಾಡ ನಾಗರಕಟ್ಟೆವರೆಗೆ ನಡಿಗೆ - ಆಯುಕ್ತ ಜುಬಿನ್ ಮೋಹಾಪಾತ್ರ ಉದ್ಘಾಟನೆ - ಕಿರು ನಾಟಕ, ನಶಾಮುಕ್ತ ಪ್ರತಿಜ್ಞೆ

ನಶಾಮುಕ್ತ ರಾಯಚೂರುಗಾಗಿ ಜಾಗೃತಿ ಜಾಥಾ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ನಗರದ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಶಾಮುಕ್ತ ರಾಯಚೂರುಗಾಗಿ ಜಾಗೃತಿ ಜಾಥಾ ನಡೆಸಲಾಯಿತು.

ಯುವ ಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ, ಧೂಮಪಾನ ಮತ್ತು ಮಧ್ಯಪಾನದಂತಹ ವ್ಯಸನಗಳಿಂದ ಮುಕ್ತವಾಗಿಸಲು ನೇತಾಜಿ ನಗರದ ಶೆಟ್ಟಿಭಾವಿ ವೃತ್ತದಿಂದ ಹರಿಜನವಾಡದ ನಾಗರಕಟ್ಟೆಯವರೆಗೆ ಜಾಗೃತಿ ನಡಿಗೆ ಮಾಡಲಾಯಿತು.

ಆಯುಕ್ತರಾದ ಶ್ರೀ ಜುಬಿನ್ ಮೋಹಾಪಾತ್ರ ಅವರು ಜಾಥಾ ಉದ್ಘಾಟಿಸಿ ಮಾತನಾಡಿ, ಯುವ ಜನರಲ್ಲಿ ವ್ಯಸನದ ಗೀಳು ಹೆಚ್ಚಾಗುತ್ತಿದೆ. ಇದಕ್ಕೆ ಬಲಿಯಾಗದೇ ಸದೃಢ ಆರೋಗ್ಯ ಹೊಂದಿ ಜಿಲ್ಲೆಯನ್ನು ನಶಾಮುಕ್ತವಾಗಿಸಲು ಸಹಕರಿಸಬೇಕು ಎಂದರು.

ಜಾಗೃತಿಗಾಗಿ ಕಿರು ನಾಟಕ ಪ್ರದರ್ಶಿಸಿ ನಶಾಮುಕ್ತ ನಗರಕ್ಕಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
📲Get App