🔥 ट्रेंडिंग सरणाऊ में MYPL 2026 का आगाज: 24 टीमों... ਜਪ੍ਹਉ ਜਿਨ੍ਰ ਅਰਜੁਨ ਦੇਵ ਗੁਰੂ ਫਿਰਿ ਸੰਕਟ ਜ... रायगड में दीपोत्सव, मशालों की रोशनी से... संजय राउत ने NCP विलिनीकरण मुद्दा उठाय... નવી સિવિલ હોસ્પિટલમાં વર્ગ‑૪ કર્મચારીઓ... उत्तर प्रदेश सरकार ने चुनाव से पहले मह...
07 नव. 2026•
ગુજરાતી मराठी ਪੰਜਾਬੀ বাংলা

ನಾಗರಾಳ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ರೈತ ಸಂಘದಿಂದ ಮನವಿ - ಸಾರಿಗೆ ಇಲ್ಲದೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರಿಗೆ ನಿತ್ಯ ಸಂಚಾರ ಸಂಕಷ್ಟ - ನಿಯಮಿತ ಬಸ್ ಸಂಚಾರ ಆರಂಭಿಸಲು ಆಗ್ರಹ

✍️ रिपोर्टर: Ningappa 🗓 07 नव. 2026, 01:43 PM 👁 18
शेयर करें: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕಿನ ನಾಗರಾಳ ಗ್ರಾಮಕ್ಕೆ ಇಂದಿಗೂ ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರಿಗೆ ಸಂಚಾರ ಸಂಕಷ್ಟ - ಬಸ್ ಸೌಲಭ್ಯ ಕಲ್ಪಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಾರಿಗೆ ವ್ಯವಸ್ಥಾಪಕರಿಗೆ ಮನವಿ - ತುರ್ತು ಕೆಲಸಕ್ಕೂ ಬಾಡಿಗೆ ವಾಹನ ಅವಲಂಬನೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ

ನಾಗರಾಳ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ರೈತ ಸಂಘದಿಂದ ಮನವಿ

ದೇವದುರ್ಗ: ತಾಲೂಕಿನ ಸಮೀಪದ ನಾಗರಾಳ ಗ್ರಾಮಕ್ಕೆ ಇಂದಿಗೂ ಸಮರ್ಪಕ ಸಾರ್ವಜನಿಕ ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ನಿತ್ಯವೂ ಸಂಚಾರದ ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚುನಪ್ಪ ಪೂಜಾರಿ ಬಣದ ಪದಾಧಿಕಾರಿಗಳು ಗ್ರಾಮಸ್ಥರೊಂದಿಗೆ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಗ್ರಾಮಕ್ಕೆ ಸಾರಿಗೆ ಸಂಪರ್ಕ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು, ಮಹಿಳೆಯರು ಹಾಗೂ ಸಾರ್ವಜನಿಕರು ಪಟ್ಟಣಕ್ಕೆ ಬಂದು ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಕೆಲಸಗಳಿಗೂ ಬಾಡಿಗೆ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ನಾಗರಾಳ ಗ್ರಾಮಕ್ಕೂ ನಿಯಮಿತ ಬಸ್ ಸಂಚಾರ ಆರಂಭಿಸಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.

ವಿಶೇಷವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಮಹಿಳೆಯರು ಸುರಕ್ಷಿತ ಸಂಚಾರಕ್ಕೆ ಅಧಿಕ ಆದ್ಯತೆ ನೀಡಿ, ಗ್ರಾಮಕ್ಕೆ ಸೂಕ್ತ ಸಮಯದಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಮನವಿಗೆ ಸ್ಪಂದಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹನುಮಂತರಾಯ ದೋರೆ ಸಿಪ್ಪಗೇರಾ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಪ್ರಧಾನ ಕಾರ್ಯದರ್ಶಿ ಮಾರುತಿ ನಾಯಕ, ಖಜಾಂಚಿ ಸುಗರಪ್ಪಗೌಡ, ಕರಣಗೌಡ, ನಾಯಕ, ನಾಗರಾಜು ಶಿವಪುರದೊಡ್ಡಿ, ಇಬ್ರಾಹಿಂ ಹಾಗೂ ಗ್ರಾಮಸ್ಥರಾದ ಸಿದ್ದಪ್ಪ ನಾಯಕ, ರಾಜಶೇಖರ ನಾಯಕ, ಚಿನ್ನಪ್ಪ ಸಾಹುಕಾರ, ರಂಗವ್ವ ನಾಯಕ, ರವಿ ಕುಮಾರ ನಾಯಕ, ಧನಂಜಯ, ಬಸಪ್ಪ ಗುಂತಪ್ಪಳ, ರಾಜಪ್ಪ ಸಾಹುಕಾರ, ರವಿಕುಮಾರ ಸಾಹುಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
📲Get App