🔥 TRENDING साहिबगंज के बरहरवा में कांग्रेस नेताओं... ગણશ્યામ રિસોર્ટ, પીપલોદમાં અંતરના અજવા... Juhi Chawla stars in Apple's folk rema... IMD Issues Rain Alert for Multiple Tel... बिदर विश्वविद्यालय में अंतर‑कॉलेज पहाड... Kerala Weather Alert: 9 Districts Unde...
06 Nov 2026•
ગુજરાતી मराठी ਪੰਜਾਬੀ বাংলা

ದೇವರಗುಡ್ಡದ ಹಿರಿಯ ಸಾಹಿತಿ ಭೀಮರಾಯ ಭಂಡಾರಿಗೆ ರಂಗ ಗೌರವ ಪ್ರಶಸ್ತಿ - ಹುನಗುಂದದಲ್ಲಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರರಿಂದ ಪ್ರಶಸ್ತಿ ಪ್ರದಾನ - ಹನುಮಂತಪ್ಪ ಮನ್ನಾಪುರ ಹರ್ಷ

✍️ Reporter: Ningappa 🗓 06 Nov 2026, 10:33 AM 👁 14
Share: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮದ ಹಿರಿಯ ಸಾಹಿತಿ, ಚಿಂತಕ, ಹೋರಾಟಗಾರ ಭೀಮರಾಯ ಭಂಡಾರಿ ಅವರಿಗೆ 2023-24ನೇ ಸಾಲಿನ ರಂಗ ಗೌರವ ಪ್ರಶಸ್ತಿ - ಹುನಗುಂದದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರರಿಂದ ಪ್ರಶಸ್ತಿ ಪ್ರದಾನ - ಎಂ.ಆರ್.ಎಚ್.ಎಸ್. ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರ ಹರ್ಷ

ದೇವರಗುಡ್ಡದ ಹಿರಿಯ ಸಾಹಿತಿ ಭೀಮರಾಯ ಭಂಡಾರಿಗೆ ರಂಗ ಗೌರವ ಪ್ರಶಸ್ತಿ

ದೇವದುರ್ಗ: ತಾಲೂಕಿನ ದೇವರಗುಡ್ಡ ಗ್ರಾಮದ ಹಿರಿಯ ಸಾಹಿತಿ, ಚಿಂತಕ, ಹೋರಾಟಗಾರ ಹಾಗೂ ಕಲಾವಿದ ಭೀಮರಾಯ ಭಂಡಾರಿ ಅವರು 2023-24ನೇ ಸಾಲಿನ ಪ್ರತಿಷ್ಠಿತ ರಂಗ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವೆಂಬರ್ 4ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರ ಅವರು ಭೀಮರಾಯ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರಶಸ್ತಿ ಪ್ರದಾನಕ್ಕೆ ಸಂತಸ ವ್ಯಕ್ತಪಡಿಸಿರುವ ಎಂ.ಆರ್.ಎಚ್.ಎಸ್. ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರ ಅವರು, ಭೀಮರಾಯ ಭಂಡಾರಿ ಅವರು ಸಾಹಿತ್ಯ, ಚಿಂತನೆ, ಹೋರಾಟ ಹಾಗೂ ಕಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ವ್ಯಕ್ತಿಯಾಗಿದ್ದಾರೆ. ಅವರ ಸರಳತೆ, ಮುಗ್ಧ ಮನಸ್ಸು ಹಾಗೂ ಬಹುಮುಖಿ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದೇವರಗುಡ್ಡ ಗ್ರಾಮದ ಭೀಮರಾಯ ಭಂಡಾರಿ ಅವರ ಪ್ರತಿಭೆ ಹಾಗೂ ಸೇವೆಯನ್ನು ಗುರುತಿಸಿ ರಂಗ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದ ಬಾಗಲಕೋಟೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿ.ಪಿ. ದುತ್ತರಗಿ ಟ್ರಸ್ಟ್ ಸುಳೇಭಾವಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಹನುಮಂತಪ್ಪ ಮನ್ನಾಪುರ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ
📲Get App