🔥 TRENDING MLA sonawari adv Hilal akbar Lone met... ਪੰਜਾਬ ''ਚ ਨੈਸ਼ਨਲ ਹਾਈਵੇਅ ਜਾਮ! ਗੱਡੀਆਂ ਦੀਆ... ದೇವದುರ್ಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತ... Nagaland CM Neiphiu Rio Opens Totok Ch... Nagaland Govt Declares Aadhaar‑App Cre... Manipur Launches Inaugural North East...
04 Nov 2026•
ગુજરાતી मराठी ਪੰਜਾਬੀ বাংলা
National

ವಕೀಲರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ- ಭರತಕುಮಾರ ಗುಮ್ಮೆ

✍️ Reporter: Basavaraj pujari 🗓 04 Nov 2026, 02:54 PM 👁 23
Share: 💬 WhatsApp 📘 Facebook 𝕏 Post

ಬೀದರ್: ವಕೀಲರ ಮೇಲಿನ ಹಲ್ಲೆ, ಕೊಲೆ ಮತ್ತು ವೃತ್ತಿ ನಿರ್ವಹಿಸುವಾಗ ಸೂಕ್ತ ರಕ್ಷಣೆ ನೀಡುವಂತೆ ಬೀದರ್ ವಕೀಲರ ಸಂಘದ ಮಾಜಿ ಖಜಾಂಚಿ ಭರತಕುಮಾರ ಗುಮ್ಮೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ನ

ವಕೀಲರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ- ಭರತಕುಮಾರ ಗುಮ್ಮೆ


ಬೀದರ್: ವಕೀಲರ ಮೇಲಿನ ಹಲ್ಲೆ, ಕೊಲೆ ಮತ್ತು ವೃತ್ತಿ ನಿರ್ವಹಿಸುವಾಗ ಸೂಕ್ತ ರಕ್ಷಣೆ ನೀಡುವಂತೆ ಬೀದರ್ ವಕೀಲರ ಸಂಘದ ಮಾಜಿ ಖಜಾಂಚಿ ಭರತಕುಮಾರ ಗುಮ್ಮೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್ನ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಕೊಲೆ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಕೀಲರ ಮೇಲೆ ಹಲ್ಲೆ, ಕೊಲೆ ಅಥವಾ ಬೆದರಿಕೆ ಹಾಕುವ ಅಪರಾಧಗಳಿಗೆ ಜಾಮೀನು ರಹಿತ ಕಠಿಣ ಕಾನೂನು ಜಾರಿಗೆ ತಂದು ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು. ಪೊಲೀಸ್ ಠಾಣೆಗಳಲ್ಲಿ ಗೌರವ ನೀಡಬೇಕು: ಕಕ್ಷಿದಾರರ ಪರವಾಗಿ ಪೊಲೀಸ್ ಠಾಣೆಗಳಿಗೆ ತೆರಳುವ ವಕೀಲರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ವಕೀಲರ ಕೊಲೆ ಮತ್ತು ಹಲ್ಲೆ ಪ್ರಕರಣಗಳ ತನಿಖೆ ಪಾರದರ್ಶಕವಾಗಿ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ತ್ವರಿತ ನ್ಯಾಯ ಒದಗಿಸಬೇಕು: ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳ ವ್ಯವಸ್ಥೆ ಕಲ್ಪಿಸಬೇಕು.
ವಕೀಲರು ಕೇವಲ ತಮ್ಮ ವೈಯಕ್ತಿಕ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿಲ್ಲ. ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರಿಗೆ ನ್ಯಾಯ ದೊರೆಯುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ವಕೀಲರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ರಕ್ಷಕರಿಗೆ ಕಾನೂನಿನ ಮೂಲಕವೇ ಭದ್ರತೆ ಸಿಗಬೇಕೆಂದು ಭರತಕುಮಾರ ಗುಮ್ಮೆ ಅವರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳುಹಿಸದಂತೆ ಅವರು ಸರ್ಕಾರಕ್ಕೆ ಎಚ್ಚರಿಕ್ಕೆ ನೀಡಿದ್ದಾರೆ.
📲Get App