🔥 TRENDING गुरुजी गुरुग्राम वाले की आध्यात्मिक या... शिवपुरी के वीरपुर में काजल जाटव की लाप... दीपावली से पहले प्रशासन का बड़ा एक्शन... নিজের জন্মদিনে রক্তদান করে মানবিকতার ব... सतना अमाजान के स्वास्थ्य की सुरक्षा मे... Minority Morcha across ut Jammu and Ka...
04 Nov 2026•
ગુજરાતી मराठी ਪੰਜਾਬੀ বাংলা

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿಗೆ ದೇವದುರ್ಗ ತಾಲೂಕು ಆಡಳಿತದಿಂದ ಸನ್ಮಾನ

✍️ Reporter: Ningappa 🗓 04 Nov 2026, 06:12 PM 👁 16
Share: 💬 WhatsApp 📘 Facebook 𝕏 Post

ದೇವದುರ್ಗ: ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಸನ್ಮಾನ - ಮಾಳೆಗಡ್ಡಿ ನಿವಾಸದಲ್ಲಿ ಕಲಾವಿದ ದಂಪತಿಗೆ ಗೌರವ - ದ್ರೌಪದಿ ವಸ್ತ್ರಾಪಹರಣ ಧರ್ಮರಾಯನ ಡೈಲಾಗ್ ಹೇಳಿ ಗಮನ ಸೆಳೆದ ಕಲಾವಿದ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿಗೆ ದೇವದುರ್ಗ ತಾಲೂಕು ಆಡಳಿತದಿಂದ ಸನ್ಮಾನ

ದೇವದುರ್ಗ, ನ. 4: ಇತ್ತೀಚೆಗೆ ರಾಜ್ಯ ಸರ್ಕಾರ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿಗೆ ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ನಾಗಮ್ಮ ಎಂ.ಕಟ್ಟಿಮನಿ ಅವರು ಗೌರವಿಸಿ ಸನ್ಮಾನಿಸಿದರು.

ಪಟ್ಟಣದ ಮಾಳೆಗಡ್ಡಿ ಪ್ರದೇಶದಲ್ಲಿರುವ ಈರಣ್ಣ ರುದ್ರಾಕ್ಷಿಯವರ ಮನೆಯಲ್ಲಿ ಕಲಾವಿದ ದಂಪತಿಗಳನ್ನು ತಹಸೀಲ್ ಸಿಬ್ಬಂದಿ ಬುಧವಾರ ಗೌರವಿಸಿದರು.

ಇದೇ ಸಂದರ್ಭದಲ್ಲಿ ಕಲಾಪ್ರೇಮಿಗಳ ಒತ್ತಾಯದ ಮೇರೆಗೆ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರು ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶದ ಧರ್ಮರಾಯನ ಪಾತ್ರದ ಡೈಲಾಗ್ ಹೇಳಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ದೇವರಡ್ಡಿ ಗಾಣದಾಳ, ಪ್ರಥಮ ದರ್ಜೆ ಸಹಾಯಕ ಪ್ರವೀಣ ಯಡ್ರಾಮಿ, ಅಭಿಷೇಕ ಹುಡೇದ್, ದೀಪಾ, ಶಿವರಾಜ ರುದ್ರಾಕ್ಷಿ ಹಾಗೂ ಇತರರು ಉಪಸ್ಥಿತರಿದ್ದರು.
📲Get App