🔥 TRENDING जिले में 49 ग्रामीण आशा कार्यकर्ता के... Cyclone Murasu Downgrades to Depressio... Cyclone Murasu Set to Strike Andhra Pr... सफाई अभियान Gujarat CM Bhupendra Patel Commences T... GMDCL Shares Surge 9% on Strong Market...
04 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ - ಮಹಾನಗರ ಪಾಲಿಕೆ ಹಾಗೂ ಡಾ. ಅಗರವಾಲ್ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ

✍️ Reporter: Ningappa 🗓 03 Nov 2026, 06:07 PM 👁 24
Share: 💬 WhatsApp 📘 Facebook 𝕏 Post

ರಾಯಚೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳ ಆರೋಗ್ಯಕ್ಕಾಗಿ ನಗರ ಮಹಿಳಾ ಸಮಾಜದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ - ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಪೊರೆ, ಗ್ಲುಕೋಮಾ, ರೆಟಿನಾ, ಕಾರ್ನಿಯಾ ತಪಾಸಣೆ, ವಲಯ ಆಯುಕ್ತ ಮಲ್ಲಿಕಾರ್ಜುನ ಬಿ.ಎಂ, ಉಪಾಯುಕ್ತ ಮುರಳೀಧರ ಭಾಗಿ

ರಾಯಚೂರಿನಲ್ಲಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ*

*ರಾಯಚೂರು, ನ. 3:* *ರಾಯಚೂರು ಮಹಾನಗರ ಪಾಲಿಕೆ ಹಾಗೂ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ* ವತಿಯಿಂದ ನಗರದ *ಮಹಿಳಾ ಸಮಾಜದಲ್ಲಿ* ಪಾಲಿಕೆಯ *ಸ್ವಚ್ಛತಾ ಸಹಕಾರ್ಮಿಕರು ಹಾಗೂ ಸಿಬ್ಬಂದಿಗೆ ಕಣ್ಣಿನ ತಪಾಸಣಾ ಶಿಬಿರ* ನಡೆಸಲಾಯಿತು.

*ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ* ಸಹಯೋಗದಲ್ಲಿ ಸಿಬ್ಬಂದಿಗೆ *ಕಣ್ಣಿನ ಪೊರೆ (Cataract), ಗ್ಲುಕೋಮಾ, ರೆಟಿನಾ, ಕಾರ್ನಿಯಾ* ಮತ್ತು ಇನ್ನೂ ಅನೇಕ ಕಣ್ಣಿನ ತೊಂದರೆಗಳಿಗೆ ಸಂಬಂಧಿಸಿದಂತೆ ಸಮಗ್ರ ತಪಾಸಣೆ ನಡೆಸಿ, ಕಣ್ಣಿನ ಚಿಕಿತ್ಸೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ದಿನನಿತ್ಯ ಕಸ, ಧೂಳಿನ ನಡುವೆ ನಗರ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಕಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಕಾರ್ಮಿಕರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ *ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರು, ಪಾಲಿಕೆಯ ವಲಯ ಆಯುಕ್ತರಾದ ಶ್ರೀ ಮಲ್ಲಿಕಾರ್ಜುನ ಬಿ.ಎಂ, ಉಪಾಯುಕ್ತರಾದ ಶ್ರೀ ಮುರಳೀಧರ (ಆಡಳಿತ)*, ಪಾಲಿಕೆಯ ಸಿಬ್ಬಂದಿಗಳು ಹಾಜರಿದ್ದರು.

ಪಾಲಿಕೆಯ ಈ ಕಾರ್ಯಕ್ಕೆ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.
📲Get App