🔥 ट्रेंडिंग విధి నిర్వహణలో మానవత్వం చాటిన మహిళా కా... ਸਪੀਡ ਰਿਕਾਰਡਸ ਦੇ ਡਾਇਰੈਕਟਰ ਦੀ ਛੋਟੇ ਪੁੱਤਰ... सतना से रीवा जाने वाली चलती ट्रेन मे ह... हरित ऊर्जा को बढ़ावा देने के लिए तमिलन... आँध्र प्रदेश में बुधवार, 4 नवंबर को स्... एमपी उच्च न्यायालय ने तय किया: वकील की...
03 नव. 2026•
ગુજરાતી मराठी ਪੰਜਾਬੀ বাংলা

ಡಿ.ಎಂ. ಮಕಾನದಾರ, ಧರೆಪ್ಪ ಠಕ್ಕನ್ನವರ ಇವರಿಗೆ 'ಸಮಾಜ ಸೇವಾ ರತ್ನ' ಪ್ರಶಸ್ತಿಗೆ ಆಯ್ಕೆ

✍️ रिपोर्टर: Manojkumar Patole 🗓 03 नव. 2026, 06:21 PM 👁 40
शेयर करें: 💬 WhatsApp 📘 Facebook 𝕏 Post

ಡಿ.ಎಂ. ಮಕಾನದಾರ, ಧರೆಪ್ಪ ಠಕ್ಕನ್ನವರ ಇವರಿಗೆ 'ಸಮಾಜ ಸೇವಾ ರತ್ನ' ಪ್ರಶಸ್ತಿಗೆ ಆಯ್ಕೆ

ಸಮಾಜ ಸೇವಾ ರತ್ನ ಪ್ರಶಸ್ತಿಗೆ ಡಿ.ಎಂ. ಮಕಾನದಾರ, ಧರೆಪ್ಪ ಟಕ್ಕನ್ನವರ ಆಯ್ಕೆ

ಸಮಾಜ ಸೇವೆ, ಸಹಕಾರಿ ಕ್ಷೇತ್ರದ ಕೊಡುಗೆ ಗುರುತಿಸಿ ಗೌರವ | ನ.5ರಂದು ಬೆಳಗಾವಿಯಲ್ಲಿ ಪ್ರಶಸ್ತಿ ಪ್ರದಾನ

ಅಥಣಿ : ಸಮಾಜ ಸೇವೆ, ಸಹಕಾರಿ ಕ್ಷೇತ್ರ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಅಥಣಿಯ ರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ರಾಜ್ಯ ಅಧ್ಯಕ್ಷರಾದ ಡಿ.ಎಂ. ಮಕಾನದಾರ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಧರೆಪ್ಪ ಟಕ್ಕನ್ನವರ ಅವರು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸಮಾಜ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಮಾಜಿಕ ಬದ್ಧತೆಯಿಂದ ವಿವಿಧ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಮಾಜ ಸೇವೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಂಘಟನಾ ಕಾರ್ಯಕ್ಷಮತೆಯನ್ನು ಪರಿಗಣಿಸಿ ಡಿ.ಎಂ. ಮಕಾನದಾರ ಮತ್ತು ಧರೆಪ್ಪ ಟಕ್ಕನ್ನವರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನವೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಇಬ್ಬರಿಗೂ ‘ಸಮಾಜ ಸೇವಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಸುನಿಲ್ ಕುಂಬಾರ ಅವರು ವಹಿಸಲಿದ್ದಾರೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಮತ್ತಷ್ಟು ಜನಪರ ಕಾರ್ಯಗಳಿಗೆ ಪ್ರೇರಣೆ ನೀಡುವುದು ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ. ಸಮಾಜ ಸೇವೆ ಹಾಗೂ ಸಹಕಾರಿ ಕ್ಷೇತ್ರದಲ್ಲಿ ನಿರಂತರವಾಗಿ ಶ್ರಮಿಸುವ ಕಾರ್ಯಕರ್ತರ ಸೇವೆಯನ್ನು ಸಾರ್ವಜನಿಕವಾಗಿ ಗುರುತಿಸಿ ಗೌರವಿಸುವುದರಿಂದ ಅವರಲ್ಲಿ ಇನ್ನಷ್ಟು ಉತ್ಸಾಹ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಮೂಡುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಡಿ.ಎಂ. ಮಕಾನದಾರ ಹಾಗೂ ಧರೆಪ್ಪ ಟಕ್ಕನ್ನವರ ಅವರ ಆಯ್ಕೆಗೆ ಅಥಣಿ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ಸಹಕಾರಿ ಕ್ಷೇತ್ರದ ಮುಖಂಡರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
📲Get App