🔥 TRENDING Rajasthan's Food Safety Dept Seizes 2,... -ಕುಮಾರಸ್ವಾಮಿ ಅವರಿಗೆ ಅಗೌರವದ ಮಾತು: ಜನರ ಭ... ब्रैकिंग न्यूज ಬಲ್ಲೂರ್ : ರಾಜ್ಯೋತ್ಸವ ನಿಮಿತ್ಯ ಒಂದು ಕಿಲ... EPFOએ WhatsApp દ્વારા PF ધારકોને નવી ડ... केंद्रीय मंत्री नितिन गडकरी से मिलीं द...
02 Nov 2026•
ગુજરાતી मराठी ਪੰਜਾਬੀ বাংলা

ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಚಲೋ ದಿಲ್ಲಿ' ಮಹಾ ಪ್ರತಿಭಟನೆ - ಜಿಲ್ಲೆಯ ಯುವ ನಾಯಕ ರವಿ ಬೋಸರಾಜ್ ಭಾಗಿ - ಪ್ರಜಾಪ್ರಭುತ್ವ ರಕ್ಷಣೆಗೆ ಕರೆ

✍️ Reporter: Ningappa 🗓 02 Nov 2026, 12:28 PM 👁 19
Share: 💬 WhatsApp 📘 Facebook 𝕏 Post

ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲವರ್ಧನೆಗಾಗಿ ದೆಹಲಿಯಲ್ಲಿ ನಡೆದ ಚಲೋ ದಿಲ್ಲಿ ಮಹಾ ಪ್ರತಿಭಟನೆಯಲ್ಲಿ ರಾಯಚೂರು ಜಿಲ್ಲೆಯ ಯುವ ನಾಯಕ ರವಿ ಬೋಸರಾಜ್ ಭಾಗವಹಿಸಿ ಪ್ರಜಾಪ್ರಭುತ್ವ ಮೌಲ್ಯಗಳ ಸಂರಕ್ಷಣೆಗೆ ಒತ್ತು

ದೆಹಲಿಯ 'ಚಲೋ ದಿಲ್ಲಿ' ಮಹಾ ಪ್ರತಿಭಟನೆಯಲ್ಲಿ ಜಿಲ್ಲೆಯ ಯುವ ನಾಯಕ ರವಿ ಬೋಸರಾಜ್ ಭಾಗಿ*

*ದೇವದುರ್ಗ / ರಾಯಚೂರು:* ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಲವರ್ಧನೆ, ಮತದಾನದ ಹಕ್ಕಿನ ರಕ್ಷಣೆ ಹಾಗೂ ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಒತ್ತು ನೀಡುವ ಉದ್ದೇಶದಿಂದ ದೆಹಲಿಯ *ರಾಮಲೀಲಾ ಮೈದಾನದಲ್ಲಿ* ನಡೆದ *‘ಚಲೋ ದಿಲ್ಲಿ’ ಮಹಾ ಪ್ರತಿಭಟನಾ ಮೆರವಣಿಗೆಯಲ್ಲಿ* ಜಿಲ್ಲೆಯ ಯುವ ನಾಯಕ *ರವಿ ಬೋಸರಾಜ್* ಅವರು ಭಾಗವಹಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಜನರ ಹಕ್ಕುಗಳು, ಸಮಾನ ಅವಕಾಶಗಳು ಮತ್ತು ಜನರ ಆಶಯಗಳಿಗೆ ದೊರೆಯುವ ಗೌರವದಲ್ಲಿ ಅಡಕವಾಗಿದೆ. ಈ ಮೌಲ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾಗರಿಕರ ಧ್ವನಿಗೆ ಮಹತ್ವ ನೀಡುವುದು ಅತ್ಯಗತ್ಯ" ಎಂದರು.

"ದೇಶದ ಐಕ್ಯತೆ, ಪ್ರಜಾಪ್ರಭುತ್ವದ ಘನತೆ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳ ರಕ್ಷಣೆಗೆ ನಮ್ಮ ಬದ್ಧತೆ ಸದಾ ಇರಲಿದೆ" ಎಂದು ಹೇಳಿದರು.
📲Get App