🔥 TRENDING प्रकाश फाउंडेशन ने बरो (सुपौल) में नशा... CBI brings back Mahadev betting app ki... State Foundation Day 2026: Six Indian... Madhya Pradesh marks 71st Foundation D... સરપંચ, તલાટી અને ટીડીઓની હાજરીમાં દુકા... पंचायत चुनाव 2026 के तृतीय चरण के मध्य...
01 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಕಾಟಾಚಾರಕ್ಕೆ ರಾಜ್ಯೋತ್ಸವ ಆಚರಣೆ? ತಾಲ್ಲೂಕು ಆಡಳಿತದ ವಿರುದ್ಧ ಗ್ಯಾರಂಟಿ ಸಮಿತಿ ಅಧ್ಯಕ್ಷ ಜ್ಯೋತಿ ಲಕ್ಷ್ಮಣ್ ಆಕ್ರೋಶ

✍️ Reporter: Ningappa 🗓 01 Nov 2026, 09:54 PM 👁 20
Share: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕು ಆಡಳಿತದ ಕನ್ನಡ ರಾಜ್ಯೋತ್ಸವ ಆಚರಣೆ ಕಾಟಾಚಾರಕ್ಕೆ ನಡೆದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜ್ಯೋತಿ ಲಕ್ಷ್ಮಣ್ ಆರೋಪ - ವಿದ್ಯಾರ್ಥಿಗಳು, ಪತ್ರಕರ್ತರು, ಕನ್ನಡಪರ ಸಂಘಟನೆಗಳಿಗೆ ವ್ಯವಸ್ಥೆ ಇಲ್ಲದೆ ಬೇಸರ

ದೇವದುರ್ಗ ತಾಲೂಕು ಆಡಳಿತದಿಂದ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವ - ಗ್ಯಾರಂಟಿ ಸಮಿತಿ ಅಧ್ಯಕ್ಷ ಜ್ಯೋತಿ ಲಕ್ಷ್ಮಣ್ ಆರೋಪ

ದೇವದುರ್ಗ: ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೇವಲ 'ಕಾಟಾಚಾರಕ್ಕೆ' ಆಯೋಜಿಸಿದಂತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ *ಜ್ಯೋತಿ ಲಕ್ಷ್ಮಣ್* ಅವರು ಆರೋಪಿಸಿದ್ದಾರೆ.

ಕಾರ್ಯಕ್ರಮದ ಆಯೋಜನೆಯಲ್ಲಿ ಉತ್ಸಾಹ ಹಾಗೂ ಸೂಕ್ತ ಸಿದ್ಧತೆಯ ಕೊರತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ, ಅದು ಕನ್ನಡಿಗರ ಅಸ್ಮಿತೆ ಮತ್ತು ಹೆಮ್ಮೆಯ ಹಬ್ಬ. ಕನ್ನಡ ಭಾಷೆಗೆ 2000ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದ್ದು, ಸಾಹಿತಿಗಳು ಹಾಗೂ ಮಹನೀಯರು ನೀಡಿದ ಕೊಡುಗೆಯನ್ನು ನಾವು ಸ್ಮರಿಸಬೇಕು" ಎಂದು ಹೇಳಿದ್ದಾರೆ.

"ಒಂದು ಕಡೆ ವಿದ್ಯಾರ್ಥಿಗಳಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ, ಕಾರ್ಯಕ್ರಮದಲ್ಲಿ ಪತ್ರಕರ್ತರಿಗೂ ಸರಿಯಾದ ಆಸನದ ವ್ಯವಸ್ಥೆ ಇರಲಿಲ್ಲ. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನೆಲದಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಆಡಳಿತವು ಮುಂದಿನ ದಿನಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಮತ್ತು ಎಲ್ಲರಿಗೂ ಗೌರವ ನೀಡುವ ರೀತಿಯಲ್ಲಿ ಆಯೋಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ
📲Get App