Education
ಕೆಪಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ | ಕೆಪಿ ವಿದ್ಯಾ
ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಕಿವಿಮಾತು ಕನ್ನಡ ಅಳಿವು ಉಳಿವು ಶಿಕ್ಷಕರ ಕೈಯಲ್ಲಿ ಬೀದರ: ಕೆಪಿ ವಿದ್ಯಾ ಸಂಸ್ಥೆಯ ಕನ್ಯಾಪ ಪರಮೇಶ್ವರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಂಸ್ಥ
ಕೆಪಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ | ಕೆಪಿ ವಿದ್ಯಾ
ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಕಿವಿಮಾತು
ಕನ್ನಡ ಅಳಿವು ಉಳಿವು ಶಿಕ್ಷಕರ ಕೈಯಲ್ಲಿ
ಬೀದರ: ಕೆಪಿ ವಿದ್ಯಾ ಸಂಸ್ಥೆಯ ಕನ್ಯಾಪ ಪರಮೇಶ್ವರಿ ಪ್ರಾಥಮಿಕ ಹಾಗೂ ಪ್ರೌಢ
ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಂಸ್ಥೆಯ ಅಧ್ಯಕ್ಷರಾದ ಬಾಬು
ವಾಲಿ ಧ್ವಜಾರೋಹಣ ನಡೆಸಿಕೊಟ್ಟರು.
ಕರುನಾಡಿಗೆ ಒಂದು ನೆಲೆ ನೀಡಿದ ಆಲ್ಲೂರು ವೆಂಕಟರಾಯರನ್ನು ನಾವು ಇಂದು
ಸ್ಮರಿಸಬೇಕು. ಏಂಟು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮ ಕರುನಾಡು ಸಾವಿರಾರು
ವರ್ಷಗಳ ಇತಿಹಾಸ ಹೊಂದಿದೆ. ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕವಾಗಿ ತುಂಬಿದ ಈ
ನಾಡು ಶಾಂತಿಗೆ ಹೆಸರುವಾಸಿಯಾಗಿದೆ. ಈ ನಾಡಿನ ಗತವೈಭವ ದೇಶಕ್ಕೆ ಮಾದರಿಯಾಗಿದೆ.
ರಾಜ್ಯೋತ್ಸವದ ಜೊತೆಗೆ ನಾಡು ನುಡಿಗಾಗಿ ಶ್ರಮಿಸಿದ ಮಹನೀಯರಿಗೆ ಇಂದು ನಾವು
ಸ್ಮರಿಸಲೇಬೇಕು. ಈ ಸಮೃದ್ಧವಾದ ನಾಡಿನ ರಕ್ಷಣೆಗಾಗಿ ನಾವೆಲ್ಲ ಒಂದಾಗಬೇಕು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಕನ್ನಡವನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ
ಶಿಕ್ಷಕರ ಮೇಲಿದೆ ಎಂದರು.
ಈ ಶುಭ ಸಂಧರ್ಭದಂದು ವಚನ ಕ್ರಾಂತಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ 33
ವರ್ಷ ಪೂರ್ಣಗೊಳಿಸಿ 34ನೇ ವಸಂತಕ್ಕೆ ಕಾಲಿಟ್ಟಿದೆ. ಈ ಶುಭಸಂಧರ್ಭದಲ್ಲಿ ವಚನ
ಕ್ರಾಂತಿ ಓದುಗರಿಗೆ ಧನ್ಯವಾದ, ನಿಮ್ಮ ಸಹಕಾರ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು
ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ನುಡಿದರು.
ಈ ಸಂಧರ್ಭದಲ್ಲಿ ಶಿಕ್ಷಕರಿಂದ ಚಿತ್ರಗೊಂಡ ಸಮೃದ್ಧ ಭರಿತವಾದ ಕರ್ನಾಟಕ ನಕ್ಷೆ
ಎಲ್ಲರ ಗಮನ ಸೆಳೆಯಿತು.
ಈ ಸಂಧರ್ಭದಲ್ಲಿ ಕೆಪಿ ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಯ್ಯ ಸ್ವಾಮಿ, ಸದಸ್ಯರಾದ
ಮಲ್ಲಪ್ಪ ಭೋತಗಿ, ಸಂತೋಷ ಬಾಲೋಡೆ, ನಿವೃತ್ತಗೊಂಡ
ಮುಖ್ಯಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಮುಖ್ಯ ಗುರುಗಳಾದ
ಜೆಟ್ಟೆಪ್ಪಾ ಪೂಜಾರಿ ಸೇರಿದಂತೆ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.