# ದೇವದುರ್ಗದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
**ದೇವದುರ್ಗ | ಬ್ರೇಕಿಂಗ್ ನ್ಯೂಸ್**
# ದೇವದುರ್ಗದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
### ಬೈಕ್ ರ‍್ಯಾಲಿ ಮೂಲಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ; ನೂತನ ವಿದ್ಯಾರ್ಥಿ ಘಟಕ ಸ್ಥಾಪನೆ
**ದೇವದುರ್ಗ, ನ. 1:** ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹಾಗೂ ನಗರ ಘಟಕ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನವೆಂಬರ್ 1ರಂದು 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಬೈಕ್ ರ‍್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜೈರುದ್ದೀನ್ ಪಾಷಾ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪುರಸಭೆ ಕಚೇರಿ ಸಮೀಪದಲ್ಲಿರುವ ಧ್ವಜಸ್ತಂಭದವರೆಗೆ ಬೈಕ್ ರ‍್ಯಾಲಿ ಹಾಗೂ ಮೆರವಣಿಗೆ ನಡೆಸಿ, ನಂತರ ಧ್ವಜಾರೋಹಣ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಬಸವರಾಜ ಗೋಪಾಳಪುರ, ಉಪಾಧ್ಯಕ್ಷ ಉಸ್ಮಾನ್ ಪಾಷಾ, ತಾಲೂಕು ಕಾರ್ಯಾಧ್ಯಕ್ಷ ಸುರೇಶ್ ಪಾಟೀಲ, ತಾಲೂಕು ಕಾರ್ಯದರ್ಶಿ ಅಮರೇಶ್ ಪಾಟೀಲ, ನಗರ ಘಟಕದ ಅಧ್ಯಕ್ಷ ಹುಸೇನ್ ಬಾಷಾ, ಉಪಾಧ್ಯಕ್ಷರಾದ ಉಸ್ಮಾನ್ ಬೂವಾಜಿ ಹಾಗೂ ಅಯ್ಯೂಬ್ ಖಾನ್, ಸದಸ್ಯರಾದ ಬಾಬು ಬುವಾಜಿ, ಬಾಬು, ಆಸಿಫ್, ಹಸೇನ್, ಜೈರುದ್ದೀನ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
**ನೂತನ ವಿದ್ಯಾರ್ಥಿ ಘಟಕ ಸ್ಥಾಪನೆ**
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ದೇವದುರ್ಗದಲ್ಲಿ ನೂತನ ನಗರ ವಿದ್ಯಾರ್ಥಿ ಘಟಕವನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಸಲ್ಮಾನ್, ಉಪಾಧ್ಯಕ್ಷರಾಗಿ ಬಾಬು. ಎಂ., ಗೌರವಾಧ್ಯಕ್ಷರಾಗಿ ಹಸೇನ್, ಪ್ರಧಾನ ಕಾರ್ಯದರ್ಶಿಯಾಗಿ ಜೈರುದ್ದೀನ್, ಸಹಕಾರ್ಯದರ್ಶಿಗಳಾಗಿ ಬಸವರಾಜ ಮತ್ತು ಎಂ.ಡಿ. ಮುಜಾಮಿಲ್, ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಜೈರುದ್ದೀನ್ ಅವರನ್ನು ನೇಮಕ ಮಾಡಲಾಯಿತು. ಸದಸ್ಯರಾಗಿ ಶಿವರಾಜ್ ನೀಲವಂಜಿ ಹಾಗೂ ಅಳವಳೆಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ನುಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಬೈಕ್ ರ‍್ಯಾಲಿ, ಧ್ವಜಾರೋಹಣ ಹಾಗೂ ವಿದ್ಯಾರ್ಥಿ ಘಟಕದ ಸ್ಥಾಪನೆಯೊಂದಿಗೆ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು.
**ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ.**