🔥 TRENDING বিজয়া সম্মিলনী অনুষ্ঠান হলো চুঁচুড়া... Jharkhand CM Hemant Soren to Lead Rall... Conductor's Swift Action Saves Passeng... India and Argentina to Deepen Bilatera... आवास योजना से IGRS तक लापरवाही के आरोप... Ishan Kishan Struggles Again as India...
31 Oct 2026•
ગુજરાતી मराठी ਪੰਜਾਬੀ বাংলা
Religion

ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಲಿಂಗದಹಳ್ಳಿ ಮಹಾಪೂಜೆ ಯಶಸ್ವಿಯಾಗಿ ಆಯೋಜನೆ

✍️ Reporter: Ningappa 🗓 30 Oct 2026, 11:09 PM 👁 24
Share: 💬 WhatsApp 📘 Facebook 𝕏 Post

ಲಿಂಗದಹಳ್ಳಿ ಗ್ರಾಮದಲ್ಲಿ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ಅತಿದೊಡ್ಡ ಹಾಜರಾತಿ ಮತ್ತು ಉತ್ಸವದೊಂದಿಗೆ ನಡೆಯಿತು.

ದೇವದುರ್ಗ, ಅ.30: ತಾಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಶ್ರೀ ಶ್ರೀ 1008 ಶ್ರೀಮದ್ ಜ್ಞಾನಸಿಂಹಾಸನಾಧೀಶ್ವರ ಕಾಶಿ ಜಗದ್ಗುರು ಧರ್ಮರತ್ನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪವಿತ್ರ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.

ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ಕಾಶಿ ಜಗದ್ಗುರುಗಳು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿ, ಧಾರ್ಮಿಕ ಮೌಲ್ಯಗಳು, ಭಕ್ತಿ, ಆಧ್ಯಾತ್ಮಿಕ ಚಿಂತನೆ ಹಾಗೂ ಧರ್ಮಾಚರಣೆಯ ಮಹತ್ವದ ಕುರಿತು ಹಿತವಚನಗಳನ್ನು ನುಡಿದರು.

ಕಾರ್ಯಕ್ರಮದಲ್ಲಿ ಜಾಲಹಳ್ಳಿಯ ಬೃಹನ್ಮಠದ ಶ್ರೀ ಷ.ಬ್ರ. ವಿದ್ಯಾಮಾನ್ಯ ಶಿವಾಭಿನವ ಶಿವಾಚಾರ್ಯರತ್ನ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ದೇವಾಪೂರದ ಸಂಸ್ಥಾನಮಠದ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ದೇವರಭೂಪುರದ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು, ಗಬ್ಬೂರಿನ ಮಹಾಸಂಸ್ಥಾನಮಠದ ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನಪುರದ ಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠದ ಶ್ರೀ ಷ.ಬ್ರ. ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗುಂಡಕನಾಳದ ಹಿರೇಮಠದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೂಜ್ಯರು ಭಾಗವಹಿಸಿದ್ದರು.

ದೇವದುರ್ಗ, ಅರಕೇರಾ, ಸುರಪುರ ಹಾಗೂ ಹುಣಸಗಿ ಭಾಗಗಳ ರಾಜಕೀಯ ಮುಖಂಡರು, ವಿವಿಧ ಸಂಸ್ಥೆಗಳ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

*ವಿವಿಧ ಸೇವೆ ಸಲ್ಲಿಸಿದ ಭಕ್ತರು:* ಕಸ್ತೂರೆಮ್ಮ ವೆಂಕಟರಾಯ ಬೆನಕನ್ ಕಕ್ಕಲದೊಡ್ಡಿ ಭಕ್ತಿಕಾಣಿಕೆ, ಕೃತಿಕಾ ಸಂಜೀವರಡ್ಡಿ ಸಾಹುಕಾರ ಮಾಡಬಾಳ (ಸಾಯಿ ವೆಂಕಟರಮಣ ಟ್ರೇಡರ್ಸ್, ಜಾಲಹಳ್ಳಿ) ಅನ್ನದಾಸೋಹ ಸೇವೆ, ಶಂಕ್ರಮ್ಮ ಅಮರಣ್ಣ ಶೆಲ್ಲಿ ಭಕ್ತಿಕಾಣಿಕೆ, ಪ್ರಭಾವತಿ ಗುರುನಾಥ ಸೌದ್ರಿ ವೀರಗಾಸೆ ಸೇವೆ, ಅರ್ಪಿತಾ ಹಣಮಂತರಡ್ಡಿ ಕಕ್ಕಲದೊಡ್ಡಿ ಕುಂಭ ಸೇವೆ, ಶಿವಣ್ಣ ಹೊಸೂರು ಸಾರೋಟು ಮತ್ತು ಕಣಿಹಲಿಗಿ ಸೇವೆ ಸಲ್ಲಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಆಕಾಶವಾಣಿ ಕಲಾವಿದ ಅಮರಯ್ಯ ಸ್ವಾಮಿ ಜಾಲಿಬೆಂಚಿ ಹಾಗೂ ಸುಲೋಚನಾ ಎಸ್. ನಿರ್ವಹಿಸಿದರು.
📲Get App