🔥 TRENDING રાજકોટ ગ્રામ્ય જિલ્લાના આટકોટ પોલીસ સ્... পাকিস্তানের প্রতি কংগ্রেসের অবস্থান নি... हंसराज सैनी ने ग्राम पंचायत हांसपुर मे... हमीरपुर में इंसाफ की गुहार! पति एक साल... 32 Arrested in Assam’s Statewide Crack... public prosecutor was ambushed and ass...
29 Oct 2026•
ગુજરાતી मराठी ਪੰਜਾਬੀ বাংলা

ಕಿತ್ತೂರು ಉತ್ಸವದ ವೇದಿಕೆಯಲ್ಲಿ ಕಾನಹೊಸಹಳ್ಳಿ ಮಹಾಂತೇಶ್‌ ಕಲರವ

✍️ Reporter: ಮಂಜುನಾಥ ಹೂಡೇಂ 🗓 29 Oct 2026, 02:06 PM 👁 16
Watch on: 📘 Facebook
Share: 💬 WhatsApp 📘 Facebook 𝕏 Post

ರಿದಂ ಪ್ಯಾಡ್ ವಾದನದ ಮೂಲಕ ಗಮನ ಸೆಳೆದ ಗ್ರಾಮೀಣ ಕಲಾವಿದ

ಕೂಡ್ಲಿಗಿ: ಐತಿಹಾಸಿಕ ಕಿತ್ತೂರು ಉತ್ಸವ–2026ರ ಮುಖ್ಯ ವೇದಿಕೆಯಲ್ಲಿ ರಿದಂ ಪ್ಯಾಡ್ ವಾದನದ ಮೂಲಕ ಕಾನಹೊಸಹಳ್ಳಿಯ ಕಲಾವಿದ ಮಹಾಂತೇಶ್. ಇ. ಅವರು ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿ ಗಮನ ಸೆಳೆದಿದ್ದಾರೆ.
ರಂಗಭೂಮಿಯೊಂದಿಗೆ ನಂಟು ಬೆಳೆಸಿಕೊಂಡಿರುವ ಮಹಾಂತೇಶ್ ಅವರು, ವಿವಿಧ ಕಾರ್ಯಕ್ರಮಗಳಲ್ಲಿ ರಿದಂ ಪ್ಯಾಡ್ ವಾದಕರಾಗಿ ಕಾರ್ಯನಿರ್ವಹಿಸುತ್ತಾ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. ಲಯಬದ್ಧ ವಾದನ ಹಾಗೂ ಕಲೆಯ ಮೇಲಿನ ಆಸಕ್ತಿಯಿಂದ ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಅವರು, ಇದೀಗ ಕಿತ್ತೂರು ಉತ್ಸವದ ಪ್ರತಿಷ್ಠಿತ ವೇದಿಕೆಯಲ್ಲಿ ಅವಕಾಶ ಪಡೆದು ತಮ್ಮ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ ಆವರಣದಲ್ಲಿ ನಡೆದ ಉತ್ಸವದಲ್ಲಿ ಪ್ರದರ್ಶನ ನೀಡಿರುವುದು ಗ್ರಾಮೀಣ ಪ್ರತಿಭೆಯ ಕಲಾ ಪಯಣಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ. ಸೀಮಿತ ಅವಕಾಶಗಳ ನಡುವೆಯೂ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಮಹಾಂತೇಶ್ ಅವರ ಸಾಧನೆ ಸ್ಥಳೀಯ ಕಲಾವಿದರಿಗೆ ಪ್ರೇರಣೆಯಾಗಿದೆ.
ಕಾನಹೊಸಹಳ್ಳಿಯ ಈ ಪ್ರತಿಭಾವಂತ ಕಲಾವಿದನ ಸಾಧನೆಗೆ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವಂತಾಗಲಿ ಎಂದು ಹಾರೈಸಿದ್ದಾರೆ.
📲Get App