🔥 TRENDING बिदर में 'अक्का पैडे' ने किया स्कूली ब... ભારતે ન્યુઝીલેન્ડને 3-0થી હરાવી ઐતિહાસ... विधायक जयराम महतो का कोदंमबरी, बिघा मे... बीदर में 'अक्का पैदे' द्वारा स्कूली बच... ಪ್ರತಿಷ್ಠಾಪನೆ सरकारी स्वास्थ्य व्यवस्था के प्रति संत...
27 Oct 2026•
ગુજરાતી मराठी ਪੰਜਾਬੀ বাংলা

ಅಂಬಾಮಠದ ಪೀಠಾಧಿಪತಿ ನಾಮದೇವಗೌಡ ಶರಣರ ವಿರುದ್ಧದ ಆರೋಪ ಸತ್ಯಕ್ಕೆ ದೂರ: ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ

✍️ Reporter: Khaja Hussain 🗓 27 Oct 2026, 03:15 PM 👁 13
Share: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ | ವಿಶೇಷ ವರದಿ**

# ಅಂಬಾಮಠದ ಪೀಠಾಧಿಪತಿ ನಾಮದೇವಗೌಡ ಶರಣರ ವಿರುದ್ಧದ ಆರೋಪ ಸತ್ಯಕ್ಕೆ ದೂರ: ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ

### ಮಠದ ಅಭಿವೃದ್ಧಿಗೆ ಸಹಕರಿಸಿದವರೇ ಈಗ ವಿರೋಧಿಸುತ್ತಿರುವುದು ವಿಪರ್ಯಾಸ: ಪತ್ರಿಕಾಗೋಷ್ಠಿಯಲ್ಲಿ ಗಣ್ಯರ ಅಭಿಪ್ರಾಯ

**ಅರಕೇರಾ, ಅ. 26:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಅಂಬಾಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ದೇವದುರ್ಗದ ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ ಅಭಿಪ್ರಾಯಪಟ್ಟರು.

ಮದರಕಲ್ ಗ್ರಾಮದ ಅಂಬಾಮಠದಲ್ಲಿ ಸೋಮವಾರ ನಡೆದ ಹುಣ್ಣಿಮೆ ವಿಶೇಷ ಅನುಭವ ಕಾರ್ಯಕ್ರಮದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಗೌಡ ಮದರಕಲ್ ಅವರ ನೇತೃತ್ವದಲ್ಲಿ ಅ. 19ರಂದು ಪಲಕನಮರಡಿ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿ ಅಂಬಾಮಠದ ಪೀಠಾಧಿಪತಿಗಳ ವಿರುದ್ಧ ಆರೋಪ ಮಾಡಿರುವುದು ಖಂಡನೀಯ ಎಂದರು.

ನಾಮದೇವಗೌಡ ಶರಣರನ್ನು ಮದರಕಲ್ ಗ್ರಾಮಕ್ಕೆ ಕರೆತಂದು, ಮಠದ ಹೆಸರಿನಲ್ಲಿ ಜಾಗ ಗ್ರಾಮ ಪಂಚಾಯತ್ ನಲ್ಲಿ ನೋಂದಣಿ ಮಾಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೇ ಈಗ ಮಠದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಈ ಬೆಳವಣಿಗೆಗಳು ಶರಣರ ಘನತೆಗೆ ಧಕ್ಕೆ ತರುವ ಪ್ರಯತ್ನದಂತಿವೆ ಎಂದು ಆರೋಪಿಸಿದರು.

### ಗುರುಗಳನ್ನು ಗೌರವಿಸಿ, ಮಠವನ್ನು ಉಳಿಸಿಕೊಳ್ಳಿ: ಶ್ರೀ ಗುರುಬಸವ ರಾಜಗುರುಗಳು

ಈ ಸಂದರ್ಭದಲ್ಲಿ ಮಾತನಾಡಿದ ಮಲದಕಲ್‌ನ ಶ್ರೀ ಗುರುಬಸವ ರಾಜಗುರುಗಳು, ಮದರಕಲ್ ಗ್ರಾಮದ ಅಂಬಾಮಠವು ಭಕ್ತರ ನಂಬಿಕೆ ಮತ್ತು ಸಹಕಾರದಿಂದ ಬೆಳೆದುಬಂದಿದೆ. ಗುರುಗಳನ್ನು ಗ್ರಾಮಕ್ಕೆ ಕರೆತಂದ ಬಳಿಕ ಅವರನ್ನು ಗೌರವಿಸಿ, ಮಠದ ಅಭಿವೃದ್ಧಿಗೆ ಸಹಕರಿಸುವುದು ಭಕ್ತರ ಜವಾಬ್ದಾರಿಯಾಗಿದೆ ಎಂದರು.

ಗುರುಗಳನ್ನು ಅವಮಾನಿಸುವುದು ಮಹಾಪಾಪ. ಸಣ್ಣಪುಟ್ಟ ವ್ಯತ್ಯಾಸಗಳು ಅಥವಾ ತಪ್ಪುಗಳಿದ್ದರೆ ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಮೊದಲು ಗುರುಗಳನ್ನು ಕರೆತಂದು ಮಠದ ನಿರ್ಮಾಣಕ್ಕೆ ಕೈಜೋಡಿಸಿದವರೇ ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು.

ಸತ್ಸಂಗ, ಪರಸ್ಪರ ಗೌರವ ಮತ್ತು ಸಹಬಾಳ್ವೆಗೆ ಆದ್ಯತೆ ನೀಡಿ ಮಠದ ಘನತೆಯನ್ನು ಕಾಪಾಡಲು ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮುಂದಾಗಬೇಕು ಎಂದು ಮನವಿ ಮಾಡಿದರು.

### ಅನಗತ್ಯ ಗೊಂದಲ ಸೃಷ್ಟಿಸಬೇಡಿ: ನಿವೃತ್ತ ತಹಶೀಲ್ದಾರ್ ವೆಂಕನಗೌಡ

ನವಿಲುಗುಡ್ಡದ ನಿವೃತ್ತ ತಹಶೀಲ್ದಾರ್ ವೆಂಕನಗೌಡ ಮಾತನಾಡಿ, ಮಸ್ಕಿ ತಾಲೂಕಿನ ಹುಸ್ಕಿಹಾಳದಿಂದ ಸಿಂಧನೂರು ನಲ್ಲಿ ಸಮಾಜ ಸೇವೆ ಮಾಡುತ್ತಿದ್ದ ನಾಮದೇವಗೌಡ ಶರಣರನ್ನು ಮದರಕಲ್ ಗ್ರಾಮಕ್ಕೆ ಕರೆತಂದು ಮಠ ನಿರ್ಮಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಈಗ ಆರೋಪ ಮಾಡುತ್ತಿರುವವರೂ ಸಹಕರಿಸಿದ್ದರು ಎಂದು ತಿಳಿಸಿದರು.

ಮಠದ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಒಟ್ಟಾಗಿ ಕೆಲಸ ಮಾಡಿದವರು ಈಗ ಪರಸ್ಪರ ವಿರೋಧದ ಹಾದಿ ಹಿಡಿಯುವುದು ಸರಿಯಲ್ಲ. ಸಾರ್ವಜನಿಕರು ಹಾಗೂ ಭಕ್ತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.

ನಾಮದೇವಗೌಡ ಶರಣರು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುತ್ತಿದ್ದು, ಮಠವು ಅಭಿವೃದ್ಧಿ ಹೊಂದುತ್ತಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕು ಎಂದು ಮನವಿ ಮಾಡಿದರು.

ವಿಶೇಷ ವರದಿ

### ಆರೋಪಗಳಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಲಿ: ನಾಮದೇವಗೌಡ ಶರಣರು

ಅಂಬಾಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು ಮಾತನಾಡಿ, “ನನ್ನ ಸ್ವಂತ ಊರು ಮಸ್ಕಿ ತಾಲೂಕಿನ ಹುಸ್ಕಿಹಾಳ. ನಂತರ ಸಿಂಧನೂರು ನಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವಾಗ ಅಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿ ಮದರಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನನ್ನನ್ನು ಗ್ರಾಮಕ್ಕೆ ಕರೆತಂದರು. ಮಠ ನಿರ್ಮಿಸಿ, ಗುರುಗಳ ಸ್ಥಾನ ತುಂಬಲು ನಿಮ್ಮಂತಹ ಶರಣರ ಅಗತ್ಯವಿದೆ ಎಂದು ಆಹ್ವಾನಿಸಿದ್ದರು” ಎಂದು ತಿಳಿಸಿದರು.

ಈಗ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರೂ ಹಿಂದೆ ತಮ್ಮ ಶಿಷ್ಯರಾಗಿದ್ದರು ಎಂದು ಹೇಳಿದ ಅವರು, “ನನ್ನ ವಿರುದ್ಧ ಯಾವುದೇ ಆರೋಪಗಳಿದ್ದರೆ ಅವುಗಳನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಲಿ” ಎಂದು ಸವಾಲು ಹಾಕಿದರು.

### ಮಹಿಳಾ ಸದಸ್ಯರಿಂದಲೂ ಪ್ರತಿಕ್ರಿಯೆ

ಈ ಸಂದರ್ಭದಲ್ಲಿ ಮಹಿಳಾ ಸದಸ್ಯರಾದ ಸಾವಿತ್ರಿ ಅನ್ವರಿ ಮತ್ತು ರೇಣುಕಾ ಕಲ್ಮಾಗೇರಿ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

### ಗಣ್ಯರ ಉಪಸ್ಥಿತಿ

ಪತ್ರಿಕಾಗೋಷ್ಠಿಯಲ್ಲಿ ಅಂಬಾಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು, ಮಲದಕಲ್‌ನ ಶ್ರೀ ಗುರುಬಸವ ರಾಜಗುರುಗಳು, ನವಿಲುಗುಡ್ಡದ ನಿವೃತ್ತ ತಹಶೀಲ್ದಾರ್ ವೆಂಕನಗೌಡ, ದೇವದುರ್ಗದ ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ, ಕರಡಿಗುಡ್ಡದ ಮಾಜಿ ಎಪಿಎಂಸಿ ಅಧ್ಯಕ್ಷ ರಾಮನಗೌಡ, ಶಿವಪ್ಪ ಪಲಕನಮರಡಿ, ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದಪ್ಪ ಅಲಗೇರಿ, ಶಂಕರಗೌಡ ಮಾಲಿಪಾಟೀಲ್, ಊಟಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಮರೇಶ್, ಬಸಣ್ಣ ರಾಮಲು ಗಲಗ್ ಗುತ್ತೇದಾರ, ಮ್ಯಾಕಲದೊಡ್ಡಿಯ ಚನ್ನಬಸವ ನಾಯಕ, ದಲಿತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಿಜಯರಾಣಿ, ಚನ್ನಬಸವ ತಾತ ಗಲಗ್, ಸಾಬಣ್ಣ ಹೂಗಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶಿವು ಪಾಟೀಲ್, ಅಂಬಣ್ಣ ಮೂಡಲಗುಂಡ, ಸಾಬಣ್ಣ ಮೂಡಲಗುಂಡ, ಮಾನಪ್ಪ ನಾಯಕ್ ಕ್ಯಾದಿಗ್ಗೆರ, ಬಸವರಾಜ ಕರಿಹೋನಿ, ಮದರಕಲ್‌ನ ಹನುಮಂತ ಬಡಿಗೇರ್, ಹನುಮಂತ ಅನ್ವರಿ, ದೇವನಗೌಡ, ಸಿದ್ದಪ್ಪಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಾನಯ್ಯ, ಅಲ್ಲಿಸಾಬ್, ಸಿದ್ದಣ್ಣ, ರಂಗಪ್ಪ, ಹೊಸೂರು ಮಹದೇವಪ್ಪ ಶರಣರು, ಬಸವರಾಜ ಹೊಸೂರು, ರಂಗಣ್ಣ ಹರಿಜನ್, ಶಿವಣ್ಣ ಉಪ್ಪಾರ್, ಮುದುಕಪ್ಪ ಕಬ್ಬರ್, ಗಂಗಣ್ಣ ಕಬ್ಬರ್, ನಿಂಗಣ್ಣ ಕುರುಬರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕರಿಯಪ್ಪ ಸೋಮನಮರಡಿ ಹಾಗೂ ಶರಣ ಬಸವ ಮ್ಯಾಕಲದೊಡ್ಡಿ ಸೇರಿದಂತೆ ಮಠದ ಸದ್ಭಕ್ತರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App