🔥 TRENDING सिंहस्थ-2028 की तैयारियों को गति: मुख्... राष्ट्रीय मानवाधिकार आयोग सदस्य प्रियं... મેલડી માતા મંદિરમાં પૂર્ણિમા દિવસે હજા... कलेक्टर प्रतिभा पाल ने स्वामित्व योजना... कटनी के किसान जगपति ने 25 डिसमिल से शु... ਬਿਹਾਰ ਦੇ ਗਯਾਜੀ ਤੋਂ ਬੈਂਕਾਕ ਲਈ ਸਿੱਧੀ ਉਡਾ...
26 Oct 2026•
ગુજરાતી मराठी ਪੰਜਾਬੀ বাংলা

"ವೋಟ್ ಬಚಾವೋ ದೇಶ್ ಬಚಾವೋ" ಕಾರ್ಯಕ್ರಮ ಸಂಡೂರು ಕ್ಷೇತ್ರದ ಉಸ್ತುವಾರಿಯನ್ನಾಗಿ ವೇಣುಗೋಪಾಲ ಗೌಡ ನೇಮಕ

✍️ Reporter: Ningappa 🗓 26 Oct 2026, 09:50 PM 👁 13
Share: 💬 WhatsApp 📘 Facebook 𝕏 Post
ಕೆಪಿಸಿಸಿಯ "ವೋಟ್ ಬಚಾವೋ - ದೇಶ್ ಬಚಾವೋ" ಅಭಿಯಾನ: ಸಂಡೂರು (ST) ಕ್ಷೇತ್ರದ ಉಸ್ತುವಾರಿಯಾಗಿ ವೇಣುಗೋಪಾಲ ಗೌಡ ನೇಮಕ

ದೇವದುರ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವತಿಯಿಂದ ಹಮ್ಮಿಕೊಂಡಿರುವ *"Vote Bachav - Desh Bachav Programme"* ಗೆ ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಬಳ್ಳಾರಿ ಗ್ರಾಮಾಂತರ ಜಿಲ್ಲೆಯ *ಸಂಡೂರು (ST) ಮೀಸಲು ವಿಧಾನಸಭಾ ಕ್ಷೇತ್ರದ ಉಸ್ತುವಾರಿ (Assembly Wise I/C) ಯಾಗಿ ವೇಣುಗೋಪಾಲ ಗೌಡ* ಅವರನ್ನು ನೇಮಕ ಮಾಡಲಾಗಿದೆ. ಪಟ್ಟಿಯಲ್ಲಿ ಅವರನ್ನು *Co-ordinator - 9901599834* ಎಂದು ನಮೂದಿಸಲಾಗಿದೆ.

ಈ ಅಭಿಯಾನಕ್ಕೆ ಎಐಸಿಸಿ ವೀಕ್ಷಕರಾಗಿ ಶ್ರೀ ಜೆ.ಡಿ. ಸೀಲಂ, ಕೆಪಿಸಿಸಿ ಸಹ ಉಸ್ತುವಾರಿಯಾಗಿ ಶ್ರೀ ಎ. ವಸಂತ ಕುಮಾರ್, ಎಂಎಲ್‌ಸಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಜಿಲ್ಲಾವಾರು ನೋಡುವುದಾದರೆ,
- *ಬಳ್ಳಾರಿ ಸಿಟಿ DCC ಅಧ್ಯಕ್ಷ:* ಆಲಂ ಪ್ರಶಾಂತ್
- *ಬಳ್ಳಾರಿ ಗ್ರಾಮಾಂತರ DCC ಅಧ್ಯಕ್ಷ:* ಕೆ. ಮಲ್ಲಿಕಾರ್ಜುನ
- *ಜಿಲ್ಲಾ ಉಸ್ತುವಾರಿ (KPCC Incharge):* ಶ್ರೀ ಎ. ಆರ್. ಎಂ. ಹುಸೇನ್

ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣಕ್ಕೆ ಮಲ್ಲಿಕಾರ್ಜುನಸ್ವಾಮಿ, ರಾಯಚೂರಿಗೆ ರಮೇಶ್ ದೊರೆ ಅಲ್ದಾಳ್, ಮಾನ್ವಿಗೆ ಹನುಮಗೌಡ ಮರಕಲ್, ದೇವದುರ್ಗಕ್ಕೆ ಡಾ. ಭೀಮಣ್ಣ ಮೇಟಿ, ಲಿಂಗಸೂಗೂರಿಗೆ ಮುರಳಿ ಕೃಷ್ಣ, ಸಿಂಧನೂರಿಗೆ ವೆಂಕಟೇಶ್ ರಾಗಲ್ ಪರ್ವಿ, ಮಸ್ಕಿಗೆ ಕೃಷ್ಣಾಜಿ ಕುಲಕರ್ಣಿ ಅವರನ್ನು ನೇಮಿಸಲಾಗಿದೆ.

ಸಂಡೂರು ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮತ್ತು ಸಂಘಟನೆ ಬಲವರ್ಧನೆಗೆ ವೇಣುಗೋಪಾಲ ಗೌಡ ಅವರು ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ.
📲Get App