🔥 TRENDING mathura मथुरा - BSA रतन कीर्ति की पहल... mathura मथुरा - BSA रतन कीर्ति की पहल... Kuldeep Yadav Breaks Into Top‑5 of ICC... South Africa enforce follow‑on as Aust... शिवराजपुर में दशहरा मिलन समारोह: एकता... Delhi Police transfers second Das‑Rank...
22 Oct 2026•
ગુજરાતી मराठी ਪੰਜਾਬੀ বাংলা

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ

✍️ Reporter: ಮಂಜುನಾಥ ಹೂಡೇಂ 🗓 21 Oct 2026, 10:43 PM 👁 14
Share: 💬 WhatsApp 📘 Facebook 𝕏 Post

ಅಂಬಾರಿ ಜಾರಿ ಬಿದ್ದು ವಾಹನಗಳಿಗೆ ಹಾನಿ; ಆತಂಕದಲ್ಲಿ ಓಡಿದ ಜನರು, ಜಂಬೂಸವಾರಿ ಅರ್ಧಕ್ಕೆ ಮೊಟಕು

ಶಿವಮೊಗ್ಗ: ನಗರದ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ದಿಕ್ಕಾಪಾಲಾಗಿ ಓಡಿದ ಘಟನೆ ಬುಧವಾರ ಸಂಭವಿಸಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜಂಬೂಸವಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ನಗರದ ಕೋಟೆ ಶಿವಪ್ಪನಾಯಕ ಅರಮನೆ ಸಮೀಪದಿಂದ ಆರಂಭಗೊಂಡ ಜಂಬೂಸವಾರಿ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಸೋಮಣ್ಣ ಆನೆ 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತು ಸಾಗುತ್ತಿತ್ತು. ಸ್ವಲ್ಪ ದೂರ ಸಾಗಿದ ಬಳಿಕ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಓಡತೊಡಗಿತು. ಇದರಿಂದ ಮೆರವಣಿಗೆ ವೀಕ್ಷಿಸಲು ನೆರೆದಿದ್ದ ಜನರು ಗಾಬರಿಗೊಂಡು ಸುರಕ್ಷಿತ ಸ್ಥಳಗಳತ್ತ ಓಡಿದರು.
📲Get App