🔥 TRENDING Kerala SMA Scheme Scrutinized Over Gen... Kerala Woman Turns ₹250 into ₹90 Lakh... South India Braces for More Rain and S... Massive Fire Ravages Furniture Showroo... BJP’s Youngest MLA Maithili Thakur Ele... Sehore: Son apologizes to father after...
21 Oct 2026•
ગુજરાતી मराठी ਪੰਜਾਬੀ বাংলা

ಕೆ.ಬೇವಿನಹಳ್ಳಿಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ

✍️ Reporter: Viswanatha D R 🗓 21 Oct 2026, 07:27 PM 👁 34
Share: 💬 WhatsApp 📘 Facebook 𝕏 Post
ಕೆ. ಬೇವಿನಹಳ್ಳಿಯಲ್ಲಿ ಭಕ್ತಿಭಾವದಿಂದ ವಿಜಯದಶಮಿ ಆಚರಣೆ

ಹರಿಹರ, ಅ. 21, 2026: ದಸರಾ ಹಬ್ಬದ ಅಂಗವಾಗಿ ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದಲ್ಲಿ ವಿಜಯದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಭಜನೆ ನೆರವೇರಿದ ಬಳಿಕ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗಂಗಾ ಪೂಜೆಯ ನಂತರ ಬನ್ನಿ ಮರದ ಬಳಿ ತಲುಪಿತು.

ಬನ್ನಿ ಮರದ ಬಳಿ ಶಾಸ್ತ್ರಿಗಳಾದ ರಾಜಶೇಖರಯ್ಯ,ಅರ್ಚಕರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ಪರಸ್ಪರ ಬನ್ನಿ ಯನ್ನು ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಕಿರಿಯರು ಹಿರಿಯರಿಗೆ ಬನ್ನಿ ನೀಡಿ ಆಶೀರ್ವಾದ ಪಡೆದರು. ಗ್ರಾಮದ ಹಿರಿಯರು, ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯ, ಸಮೃದ್ಧಿ ಹಾಗೂ ಸೌಹಾರ್ದದ ಸಂಕೇತವಾದ ಬನ್ನಿ ಮುಡಿಯುವ ಆಚರಣೆ, ಗ್ರಾಮಸ್ಥರ ನಡುವಿನ ಬಾಂಧವ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.
📲Get App