🔥 ट्रेंडिंग મુંદરા પોલીસ સ્ટેશન વિસ્તારમાં આવેલ ભુ... बिहार में ब्लॉक प्रमुख के घर के बाहर ग... टाइगर श्रॉफ की कार पर फायरिंग: वीडियो... ज़ेन टेक्नोलॉजीज़ के ज़ेंटेक यूटीएस सह... डिप्टी सीएम एकनाथ शिंदे ने घायल अभिनेत... टाइगर श्रॉफ को अनील पांडित ने निशाना ब...
19 अक्टू. 2026•
ગુજરાતી मराठी ਪੰਜਾਬੀ বাংলা

ಬ್ಯಾಕೋಡನಲ್ಲಿ ಪ್ರಜಾಸೇವಾ ಆಂದೋಲನ | ಎಸ್.ಎಚ್.ಅರಕೇರಿ ಹೇಳಿಕೆ ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರ

✍️ रिपोर्टर: Mallikarjun Gabbur 🗓 19 अक्टू. 2026, 11:36 AM 👁 23
शेयर करें: 💬 WhatsApp 📘 Facebook 𝕏 Post

ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಆಯೋಜಿಸಿದ ಪ್ರಜಾಸೇವಾ ಆಂದೋಲನದ ಸದುಪ ಯೋಗವನ್ನು ಸಾರ್ವಜನಿಕರು ಪಡೆದು ಕೊಳ್ಳಬೇಕು,'' ಎಂದುಬಸವನಬಾಗೇವಾಡಿ ಗೇಡ್ -2 ತಹಸೀಲ್ದಾರ್ ಎಸ್.ಎಚ್‌. ಅರಕೇರಿ ಹೇಳಿದರು.

ಸರಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತರಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೇ ತಮ್ಮ ಕುಂದು-ಕೊರತೆಗಳನ್ನು ಲಿಖಿತ ಅರ್ಜಿ ಮೂಲಕ ತಿಳಿಸಬೇಕು. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ನಿಯಮಾನುಸಾರ ಪರಿಶೀಲಿಸಿ,ಪರಿಹಾರ ಒದಗಿಸಲಾಗುವುದೆಂದು ಹೇಳಿದರು.


ಬ್ಯಾಕೋಡ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪಡೆಕನೂರ ಕೆರೆಯಿಂದ ಗ್ರಾಮಕ್ಕೆ ನೀರು ಸರಬರಾಜು ಸೌಲಭ್ಯ ಮಾಡಿಕೊಡಬೇಕು ಎಂದು ಹೇಳಿದರು. ತಾಪಂ ಇಒ ವೆಂಕಟೇಶ ವಂದಾಲ, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಗ್ರಾಮದಲ್ಲಿರುವ 13 ಎಕರೆ ಗೋಮಾಳ ಜಮೀನಿನಲ್ಲಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ಕೆರೆಯಿದ್ದು, ಅದನ್ನು ವಿಸ್ತರಿಸಿ ಪೂರ್ಣ 13 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದರೇ ಅಂತರ್ಜಲ ಹೆಚ್ಚಾಗುವುದಲ್ಲದೇ ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಗ್ರಾಮಸ್ಥರು ಇಒ ಅವರಿಗೆ ಹೇಳಿದರು.


ಸಭೆಯಲ್ಲಿ ಬೆರಳೆಣಿಕೆ ಹಿರಿಯ ಅಧಿ ಕಾರಿಗಳು ಮಾತ್ರ ಇದ್ದರು. ಬಹುತೇಕ ಕಿರಿಯ ಅಧಿಕಾರಿಗಿಂತ ಕೆಳ ದರ್ಜೆ ಅಧಿ ಕಾರಿಗಳೇ ಸಭೆಯಲ್ಲಿ ಕಂಡಿದಕ್ಕೆ ಗ್ರಾಮದ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಇಲಾಖೆ ಅಧಿ ಕಾರಿಗಳು ಸಭೆಗೆ ಬಂದಿಲ್ಲ, ಅವರಿಗೆ ಈ ಸಭೆ ಸಂಬಂಧವಿಲ್ಲವೇ? ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಂಗನವಾಡಿ ಕಟ್ಟಡ ಕಾಮಗಾರಿಗಳ, ಕೆರೆ ಅಭಿವೃದ್ಧಿ ಸೇರಿ ನಾನಾ ಸಮಸ್ಯೆಗಳ ಇತ್ಯರ್ಥಕ್ಕಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಶು ಸಂಗೋಪನೆ ಇಲಾಖೆಯ ಡಾ. ಸಂಖ, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆಯ ఎఇఇ ವಿ.ಬಿ.ಗೊಂಗಡಿ, ಪಿಡಿಒ ಸುರೇಶ ಲೋಣಿ ಸೇರಿದಂತೆ ಇತರರಿದ್ದರು.
📲Get App