🔥 TRENDING નર્મદા જિલ્લામાં સુરવા હેલિપેડ ખાતે મુ... एटा: धोखाधड़ी मामले में वांछित अभियुक्... సద్దుల బతుకమ్మ సందర్భంగా జిల్లా ప్రజలక... प्रयागराज में मतदाता सूची विशेष पुनरीक... ਬਠਿੰਡਾ ਦੀ ਅਨਾਜ ਮੰਡੀ ’ਚ ਡੀ.ਸੀ. ਤੇ ਐੱਸ.ਐ... जोधपुर: डॉ. एसएन मेडिकल कॉलेज में चयनि...
17 Oct 2026•
ગુજરાતી मराठी ਪੰਜਾਬੀ বাংলা

ಹರಿಹರದಲ್ಲಿ ಹಿಂದೂ ಜಾಗರಣ ವೇದಿಕೆ,ಎಬಿವಿಪಿ ಪ್ರತಿಭಟನೆ

✍️ Reporter: Viswanatha D R 🗓 17 Oct 2026, 04:56 PM 👁 18
Share: 💬 WhatsApp 📘 Facebook 𝕏 Post
ಅ. 17: ಮಂಗಳೂರಿನಲ್ಲಿ ಎಬಿವಿಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ಚಿತ್ರದುರ್ಗ ಜಿಲ್ಲೆಯ ಆಶಾ ಎಂಬ ಯುವತಿಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ‘ಲವ್ ಜಿಹಾದ್’ ಎಂದು ಆರೋಪಿಸಿರುವ ಪ್ರಕರಣದ ಕುರಿತು ಹಿಂದೂ ಜಾಗರಣ ವೇದಿಕೆ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಹರಿಹರ ಶಾಖೆಗಳ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಮಹಾಜೇನಹಳ್ಳಿ ದೇವಸ್ಥಾನದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶಾಸಕ ಬಿ.ಪಿ. ಹರೀಶ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟನಾಕಾರರೊಂದಿಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ ಹಿಂಡಸಘಟ್ಟ, ಹರಿಹರ ನಗರ ಘಟಕದ ಮಾಜಿ ಅಧ್ಯಕ್ಷ ರಾದ ಅಜೀತ್ ಸಾವಂತ್, ಮಾಜಿ ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ರಘು ಕಾಮದೇನು, ಪರಶುರಾಮ್ ಕಾಟ್ವೇ, ಸುನಿಲ್ ಕಾಳಿದಾಸನಗರ, ವೀರೇಶ್ ಅಜ್ಜಣ್ಣನವರು, ಟ್ಯಾಟೋ ಬಾಬು, ಗಣೇಶ್ ಶಿವಾಜಿ ಹಾಗೂ ಉಭಯ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
📲Get App