🔥 TRENDING Global News press issues statement ચીખલી તાલુકાની વિવિધ સરકારી કચેરીઓની જ... औरैया में 75 वर्षीय रामसुगर और 30 वर्ष... वेंडिया ग्राम पंचायत में पेयजल की किल्... नवादा के सतगांवा में दुर्गा पूजा शांति... Governor RN Ravi Opens Dhakuria Durga...
16 Oct 2026•
ગુજરાતી मराठी ਪੰਜਾਬੀ বাংলা
ಮರಣಾನಂತರ ದೇಹದಾನಕ್ಕೆ ಮುಂದಾದ ಬೀದರ್‌ನ ಮೂವರು ಶಿಕ್ಷಕರು ಹಾಗೂ ಓರ್ವ ಸಾಹಿತಿ, ಬ್ರಿಮ್ಸ್‌ನಲ್ಲಿ ಸನ್ಮಾನ
Education

ಮರಣಾನಂತರ ದೇಹದಾನಕ್ಕೆ ಮುಂದಾದ ಬೀದರ್‌ನ ಮೂವರು ಶಿಕ್ಷಕರು ಹಾಗೂ ಓರ್ವ ಸಾಹಿತಿ, ಬ್ರಿಮ್ಸ್‌ನಲ್ಲಿ ಸನ್ಮಾನ

✍️ Reporter: Basavaraj pujari 🗓 16 Oct 2026, 08:25 PM 👁 10
Share: 💬 WhatsApp 📘 Facebook 𝕏 Post

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ ದೇಹವನ್ನು ದಾನ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದ ಬೀದರ್ ಜಿಲ್ಲೆಯ ಮೂವರು ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಒಬ್ಬ ಸಾಹಿತಿಯನ್ನು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ವತಿಯಿಂದ ಗೌರವಿಸಲಾಯಿತು.

ಬೀದರ್: ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ ದೇಹವನ್ನು ದಾನ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದ ಬೀದರ್ ಜಿಲ್ಲೆಯ ಮೂವರು ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಒಬ್ಬ ಸಾಹಿತಿಯನ್ನು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ವತಿಯಿಂದ ಶುಕ್ರವಾರ ಗೌರವಿಸಲಾಯಿತು. ನಗರದ ಶಿವನಗರ ನಿವಾಸಿ ಸಾಹಿತಿ ಜಗದೇವಿ ಎಸ್. ದುಬಲಗುಂಡೆ, ಹುಮನಾಬಾದ್ ತಾಲೂಕಿನ ಗಡವಂತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಎಸ್. ಕಾಳಗಿ, ಹುಮನಾಬಾದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಡಾ. ಸಾರಿಕಾ ಎಸ್. ಗಂಗಾ ಹಾಗೂ ಹುಮನಾಬಾದ್‌ನ ಹಂದಿಕೇರಾ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಡಾ. ಸಂಜುಕುಮಾರ ಸತಿವಾಳೆ ಅವರು ದೇಹದಾನಕ್ಕೆ ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದಾರೆ.

ಅ. 16ರಂದು ಬ್ರಿಮ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ, ಪ್ರಾಂಶುಪಾಲ ಡಾ. ರಾಜೇಶ ಪಾರಾ ಹಾಗೂ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂದೀಪ ದೇಶಮುಖ ಅವರು ದೇಹದಾನಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ದೇಹದಾನದ ಮಹತ್ವದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಓದಿ ಪ್ರೇರಿತರಾಗಿ ದೇಹದಾನಕ್ಕೆ ಮುಂದೆ ಬಂದವರನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇಹದಾನದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ದೇಹದಾನಿ ಡಾ. ಸಂಜುಕುಮಾರ ಸತಿವಾಳೆ ಮಾತನಾಡಿ, ಇಂದಿನ ಸಮಾಜದಲ್ಲಿ ಪರಸ್ಪರ ದ್ವೇಷ ಮತ್ತು ಅಸೂಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರಿಗೆ ಒಳಿತನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ದಾನಗಳಲ್ಲಿಯೇ ದೇಹದಾನ ಶ್ರೇಷ್ಠವಾದದ್ದು ಎಂಬ ನಂಬಿಕೆಯಿAದ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲು ದೇಹದಾನಕ್ಕೆ ಮುಂದಾಗಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಶಿಕ್ಷಕಿಯರಾದ ಡಾ. ಸಾರಿಕಾ ಎಸ್. ಗಂಗಾ ಮತ್ತು ಜಯಶ್ರೀ ಎಸ್. ಕಾಳಗಿ ಮಾತನಾಡಿ, ಹಲವು ವರ್ಷಗಳಿಂದ ದೇಹದಾನ ಮಾಡುವ ಇಚ್ಛೆ ಹೊಂದಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಆ ಅವಕಾಶ ದೊರೆತಿರುವುದು ಸಂತಸ ತಂದಿದೆ. ಮಾನವ ದೇಹದ ಪ್ರತಿಯೊಂದು ಅಂಗ ಹಾಗೂ ರಚನೆಯೂ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅಮೂಲ್ಯ ಕೊಡುಗೆಯಾಗಲಿದೆ ಎಂದು ತಿಳಿಸಿದರು.

ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಅನ್ನದಾನ, ವಿದ್ಯಾದಾನ, ರಕ್ತದಾನ ಹಾಗೂ ನೇತ್ರದಾನದಂತೆ ದೇಹದಾನವೂ ಅತ್ಯಂತ ಉದಾತ್ತವಾದ ಮಾನವೀಯ ಸೇವೆಯಾಗಿದೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮೌಲ್ಯವು ನಮ್ಮ ದೇಹ ಮತ್ತು ಸಾಮರ್ಥ್ಯಗಳು ಇತರರ ಒಳಿತಿಗೂ ಬಳಕೆಯಾಗಬೇಕು ಎಂಬ ಸಂದೇಶ ನೀಡುತ್ತದೆ. ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣಕ್ಕೆ ಸಮರ್ಪಿಸುವ ನಿರ್ಧಾರ ಸಾಮಾನ್ಯವಾದುದಲ್ಲ. ಇದರ ಹಿಂದೆ ವಿಶಾಲ ಹೃದಯ, ಮಾನವೀಯ ಕಾಳಜಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂಬ ಉದಾತ್ತ ಮನೋಭಾವ ಅಡಗಿದೆ. ದೇಹದಾನಿಗಳ ಈ ನಿರ್ಧಾರ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
📲Get App