🔥 TRENDING India Sees Lowest Farm Fires Since 201... Two Brothers Fatally Injured in Bike A... President Murmu to Visit Jagdalpur on... Chhattisgarh Braces for Two-Day Rainfa... Protest at Assam Health Centre Over Pr... Two Rare Turtles Rescued in Tinsukia,...
16 Oct 2026•
ગુજરાતી मराठी ਪੰਜਾਬੀ বাংলা
*ಬೀದರ ಜಿಲ್ಲೆಯ ಫ್ರೀಡಂ ಟಿವಿ ವರದಿಗಾರ ಓಂಕಾರ ಮಠಪತಿಗೆ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ*
Local

*ಬೀದರ ಜಿಲ್ಲೆಯ ಫ್ರೀಡಂ ಟಿವಿ ವರದಿಗಾರ ಓಂಕಾರ ಮಠಪತಿಗೆ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ*

✍️ Reporter: Basavaraj pujari 🗓 16 Oct 2026, 06:49 PM 👁 10
Share: 💬 WhatsApp 📘 Facebook 𝕏 Post

*ಬೆಂಗಳೂರು: ಅಕ್ಟೋಬರ್ 23ರಂದು ಪ್ರಶಸ್ತಿ ಪ್ರದಾನ ಸಮಾರಂಭ* ಬೀದರ: ಜಿಲ್ಲೆಯ ಫ್ರೀಡಂ ಟಿವಿ ವರದಿಗಾರರು ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಮುಖ್ಯಸ್ಥರಾದ ಓಂಕಾರ ಮಠಪತಿ ಅವರು ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ–2026ಕ್ಕೆ

*ಬೀದರ ಜಿಲ್ಲೆಯ ಫ್ರೀಡಂ ಟಿವಿ ವರದಿಗಾರ ಓಂಕಾರ ಮಠಪತಿಗೆ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ*

*ಬೆಂಗಳೂರು: ಅಕ್ಟೋಬರ್ 23ರಂದು ಪ್ರಶಸ್ತಿ ಪ್ರದಾನ ಸಮಾರಂಭ*

ಬೀದರ: ಜಿಲ್ಲೆಯ ಫ್ರೀಡಂ ಟಿವಿ ವರದಿಗಾರರು ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಮುಖ್ಯಸ್ಥರಾದ ಓಂಕಾರ ಮಠಪತಿ ಅವರು ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ–2026ಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರಿನ ಟಿಎನ್‌ಐಟಿ ಮೀಡಿಯಾ ಅಕಾಡೆಮಿ ವತಿಯಿಂದ ಆಯೋಜಿಸಿರುವ South Indian Media Awards 2026 ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 23ರ ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಬೆಂಗಳೂರಿನ ಅರಮನೆ ಮೈದಾನದ, ಜಯಮಹಲ್ ರಸ್ತೆಯ ಗೇಟ್ ನಂ. 8ರ ಬಳಿಯ ಶೃಂಗಾರ ಪ್ಯಾಲೇಸ್ ಗಾರ್ಡನ್‌ನಲ್ಲಿ ನಡೆಯಲಿದೆ.

ದಕ್ಷಿಣ ಭಾರತದ ಪತ್ರಿಕೋದ್ಯಮ, ಪ್ರಸಾರ ಮಾಧ್ಯಮ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಓಂಕಾರ ಮಠಪತಿ ಅವರಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ.

ಬೀದರ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಓಂಕಾರ ಮಠಪತಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಮಾಧ್ಯಮ ವಲಯದಲ್ಲಿ ಸಂತಸ ಮೂಡಿಸಿದೆ. ಅವರ ಸಾಧನೆಗೆ ವಿವಿಧ ಗಣ್ಯರು, ಪತ್ರಕರ್ತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
📲Get App