🔥 TRENDING मध्य प्रदेश देवास રાજ્યકક્ષાની ૭૦મી અખિલ ભારતીય શાળાકીય... ਪਰਵਿੰਦਰ ਝੋਟਾ ਕਤਲ ਮਾਮਲੇ 'ਚ ਅਮਰੀਕੀ MP ਨੇ... નવરાત્રી પર્વ પહેલા કામરેજ પોલીસ એક્શન... सीकर रोड के वार्ड नंबर 1 में सड़कों से... Northeast Monsoon Begins, Heavy Rains...
16 Oct 2026•
ગુજરાતી मराठी ਪੰਜਾਬੀ বাংলা
Religion

ಮೈಸೂರು ದಸರಾ ವೈಭವ ಕಾರ್ಯಕ್ರಮಕ್ಕೆ ಡಾ.ನಾಗಲಕ್ಷ್ಮೀ ಮಹಿಳಾ ಆಯೋಗದ

✍️ Reporter: ಕೆ ಆರ್ ಸುರೇಶ್ 🗓 16 Oct 2026, 09:25 AM 👁 23
Watch on: 📘 Facebook
Share: 💬 WhatsApp 📘 Facebook 𝕏 Post

ಮೈಸೂರು ದಸರಾ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಆಯೋಜಿಸಿದ್ದ, ಮೈಸೂರು ದಸರಾ ಪರಂಪರೆಯನ್ನು ಬಿಂಬಿಸುವ ಮಹಿಳೆಯರ ವಾಕ್‌ಥಾನ್‌ಗೆ ಚಾಲನೆ ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದೆ.

ಮೈಸೂರು ದಸರಾ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಆಯೋಜಿಸಿದ್ದ, ಮೈಸೂರು ದಸರಾ ಪರಂಪರೆಯನ್ನು ಬಿಂಬಿಸುವ ಮಹಿಳೆಯರ ವಾಕ್‌ಥಾನ್‌ಗೆ ಚಾಲನೆ ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದೆ.

ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ತಮ್ಮ ತಮ್ಮ ಪ್ರದೇಶಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಪಾಲ್ಗೊಂಡಿದ್ದು, ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವುದು ಹಬ್ಬದ ಸಂಭ್ರಮದಂತಿತ್ತು.

ಮಹಿಳಾ ಶಕ್ತಿ ಎಂದರೆ ಎಷ್ಟೇ ಕಷ್ಟಗಳು, ಅವಮಾನಗಳು ಎದುರಾದರೂ ಪರ್ವತದಂತೆ ಅಚಲವಾಗಿ ನಿಂತು ಹೋರಾಡುವ ದೃಢ ಸಂಕಲ್ಪ. ಕ್ಷಮೆ ಮತ್ತು ಪ್ರೀತಿ ಮಹಿಳೆಯ ಶಕ್ತಿಯಾದರೆ, ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಹಾಗೂ ಆತ್ಮಗೌರವದಿಂದ ಬದುಕುವ ಛಲ ಆಕೆಯ ನಿಜವಾದ ಶಕ್ತಿ. ಹಿಂಸೆಯನ್ನು ಸಹಿಸಿಕೊಂಡು ಬದುಕುವುದಲ್ಲ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ತನ್ನ ಹಕ್ಕುಗಳಿಗಾಗಿ ಹೋರಾಡುವುದೇ ಮಹಿಳಾ ಸಬಲೀಕರಣ ಎಂದು ತಿಳಿಸಿದೆ.

ಮಹಿಳಾ ದಸರಾ ಕೇವಲ ಸಂಭ್ರಮದ ಆಚರಣೆಯಾಗದೆ, ಪ್ರತಿಯೊಬ್ಬ ಹೆಣ್ಣುಮಗಳೂ ತನ್ನ ಬದುಕಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯಲು ಸ್ಫೂರ್ತಿಯಾಗಬೇಕು ಎಂದು ಕರೆ ನೀಡಿದೆ.

#Mysuru
#Dussera
#Navarathri
#WomenPower
#womenhelpingwomen
📲Get App