🔥 ट्रेंडिंग Sensex and Nifty Close Strongly on Glo... Gold Prices Surge in Bengaluru Amid Gl... ସଭାପତି ପ୍ରାର୍ଥୀଙ୍କ ଉପରେ କିଏ ପକାଉଛି ଚାପ... अररिया में अनावश्यक रेफरल पर लगेगी रोक... Food Department Launches Joint Inspect... Kaveri 5th Stage Pipeline Testing Succ...
15 अक्टू. 2026•
ગુજરાતી मराठी ਪੰਜਾਬੀ বাংলা
ದಾವಣಗೆರೆಯ ಗಾಂಧಿ ವೃತ್ತದಲ್ಲಿ ಜರ್ಮನ್ ಮಾದರಿಯಲ್ಲಿ ರಸ್ತೆಗೆ ಕಲ್ಲುಗಳನ್ನು ಹಾಕಿರುವುದು
धर्म

ದಾವಣಗೆರೆಯ ಗಾಂಧಿ ವೃತ್ತದಲ್ಲಿ ಜರ್ಮನ್ ಮಾದರಿಯಲ್ಲಿ ರಸ್ತೆಗೆ ಕಲ್ಲುಗಳನ್ನು ಹಾಕಿರುವುದು

✍️ रिपोर्टर: ಕೆ ಆರ್ ಸುರೇಶ್ 🗓 15 अक्टू. 2026, 12:32 PM 👁 21
शेयर करें: 💬 WhatsApp 📘 Facebook 𝕏 Post

ದಾವಣಗೆರೆಯ ಗಾಂಧಿ ವೃತ್ತದಲ್ಲಿ ಜರ್ಮನ್ ಮಾದರಿಯಲ್ಲಿ ರಸ್ತೆಗೆ ಕಲ್ಲುಗಳನ್ನು ಹಾಕಿರುವುದನ್ನು ಇಲ್ಲಿ ಕೆಲವರು ಢಗ ಢಗ ಸರ್ಕಲ್ ಎಂದು ಆಡಿಕೊಳ್ಳುತ್ತಾರೆ. ಆದರೆ, ನನಗಿಲ್ಲಿ ಕೆಲವು ಅನುಕೂಲಗಳು ಕಂಡು ಬಂದಿವೆ. ಮೊದಲಿಗೆ, ಟ್ರಾಫಿಕ್ ನಿಯಮಗಳನ್ನು ಪಾಲಿಸದವರು ಈ ಸಿಗ್ನಲ್ಲಿನಲ್ಲಿ ಸಿಗ್ನಲ್ ಜಂಪ್ ಮಾಡುವಾಗ ಕ್ಷಣ ಯೋಚಿಸುತ್ತಾರೆ. ಯಾಕೆಂದರೆ ಜೋರಾಗಿ ಇಲ್ಲಿ ಹೋಗಲಾಗುವುದಿಲ್ಲ.

ದಾವಣಗೆರೆಯ ಗಾಂಧಿ ವೃತ್ತದಲ್ಲಿ ಜರ್ಮನ್ ಮಾದರಿಯಲ್ಲಿ ರಸ್ತೆಗೆ ಕಲ್ಲುಗಳನ್ನು ಹಾಕಿರುವುದನ್ನು ಇಲ್ಲಿ ಕೆಲವರು ಢಗ ಢಗ ಸರ್ಕಲ್ ಎಂದು ಆಡಿಕೊಳ್ಳುತ್ತಾರೆ. ಆದರೆ, ನನಗಿಲ್ಲಿ ಕೆಲವು ಅನುಕೂಲಗಳು ಕಂಡು ಬಂದಿವೆ. ಮೊದಲಿಗೆ, ಟ್ರಾಫಿಕ್ ನಿಯಮಗಳನ್ನು ಪಾಲಿಸದವರು ಈ ಸಿಗ್ನಲ್ಲಿನಲ್ಲಿ ಸಿಗ್ನಲ್ ಜಂಪ್ ಮಾಡುವಾಗ ಕ್ಷಣ ಯೋಚಿಸುತ್ತಾರೆ. ಯಾಕೆಂದರೆ ಜೋರಾಗಿ ಇಲ್ಲಿ ಹೋಗಲಾಗುವುದಿಲ್ಲ. ಅಕಸ್ಮಾತ್ ಬಿದ್ದರೆ ರಸ್ತೆ ಕಲ್ಲಿನದ್ದಾಗಿರುವುದರಿಂದ ಕತೆ ಗೋವಿಂದ ಆಗುತ್ತದೆ. Actually, ಆ ಕಲ್ಲುಗಳನ್ನು ನೋಡಿದರೇನೇ ಎಂಥಹ ಗಟ್ಟಿ ದೇಹದವರಿಗೂ ಬಿದ್ದರೆ ಗತಿ ಏನಪ್ಪ ಎಂಬಂತಾಗಿದೆ. ಇದೊಂಥರ ಒಳ್ಳೆಯದು. ಎರಡನೆಯದು, ಸರ್ಕಲ್ಲುಗಳಲ್ಲಿ ನಿಧಾನ ಗತಿಯ ಚಲನೆ ಇದ್ದರೆ ಎಲ್ಲರಿಗೂ ಅನುಕೂಲ. ಅದಿಲ್ಲಿ ಸಾಧ್ಯವಾಗಿದೆ. ಮೂರನೇಯದು, ಮಳೆಯ ನೀರು ಆರಾಮವಾಗಿ ಭೂಮಿಗೆ ಹೋಗುತ್ತಿದೆ... ಈ ರೀತಿ ನಿಮಗೆ ಇನ್ಯಾವುದೇ ಅನುಕೂಲಗಳು ಕಂಡು ಬಂದರೆ ತಪ್ಪದೇ ಕಾಮೆಂಟ್ ಮಾಡಿ...
#davanagere
📲Get App