🔥 TRENDING Delhi's Jamia Mosque Fundraiser Sparks... Indian Pilot Stops Omani Co‑Pilot from... Search term 'matrutikkiwala' logged on... Search term “courageouscrew” spikes on... New transcript shows Cornell rape vict... Reporter Atul Thakor
01 Oct 2026•
ગુજરાતી मराठी ਪੰਜਾਬੀ বাংলা

ಜಮೀನಿನಲ್ಲಿ ರೈತನ ಮೇಲೆ ಕರಡಿ ದಾಳಿ ಗಂಭೀರ ಗಾಯ

✍️ Reporter: KALLAPPA MIRJI 🗓 01 Oct 2026, 11:56 AM 👁 21
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದ ಹೊರವಲಯದ ಹುಲಿಗುಡ್ಡದ ಹತ್ತಿರದ ಕಬ್ಬಿನ ಜಮೀನಿನಲ್ಲಿ ರೈತನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳ್ಳಿಸಿದ ಘಟನೆ ಬುಧವಾರ ಜರುಗಿದೆ.

ಕಲಘಟಗಿ: ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದ ಹೊರವಲಯದ ಹುಲಿಗುಡ್ಡದ ಹತ್ತಿರದ ಕಬ್ಬಿನ ಜಮೀನಿನಲ್ಲಿ ರೈತನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳ್ಳಿಸಿದ ಘಟನೆ ಬುಧವಾರ ಜರುಗಿದೆ.
ಗ್ರಾಮದ ಶಕ್ರಪ್ಪ ಅಗಸರ (55)ಎಂಬ ರೈತನ ಮೇಲೆ ಕರಡಿ ತೀವ್ರವಾಗಿ ಗಾಯಗೊಳ್ಳಿಸಿದ್ದು ಸ್ಥಳಕ್ಕೆ ಕುಟುಂಬಸ್ಥರು ಧಾವಿಸಿ ತಾಲ್ಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಿದ್ದಾರೆ.
ಕೃಷಿ ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಕರಡಿ ರೈತನ ಮೇಲೆ ದಾಳಿ ಮಾಡಿ ಕೈ ಕಾಲುಗಳಿಗೆ ಗಂಭೀರ ಗಾಯಗೊಳ್ಳಿಸಿದೆ ಕರಡಿ ಕಾಣಿಸಿಕೊಂಡ ಕಡೆ ರೈತರು ತೆರಳಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.
ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ತೆರಳಿ ರೈತನ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
📲Get App