🔥 TRENDING Bidar former news किताझोर स्कूल की शिक्षिका सरिता हेम्ब्... વડાલ ખાતે ધારાસભ્ય ભગવાનજીભાઈ કરગટીયાન... Shreya Ghoshal Releases New Independen... Shilpa Rao Says Collaborating with Ani... Char Dham Yatra Resumes in Uttarakhand...
30 Sep 2026•
ગુજરાતી मराठी ਪੰਜਾਬੀ বাংলা

ಶೋಷಿತರ ಪರ ಧ್ವನಿಯಾಗುವುದು ಸಾಹಿತ್ಯ: ಡಾ. ಭೀಮೇಶ ಯರಡೋಣಿ

✍️ Reporter: Viswanatha D R 🗓 30 Sep 2026, 03:34 PM 👁 13
Share: 💬 WhatsApp 📘 Facebook 𝕏 Post
ಹರಿಹರ, ಸೆ. 30: ಸಾಹಿತ್ಯವು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ಶೋಷಿತರ ಪರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನ್ಯಾಮತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಭೀಮೇಶ ಯರಡೋಣಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದಲ್ಲಿ ಆಯೋಜಿಸಿದ್ದ ‘ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯದ ಅನುಸಂಧಾನ’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಭಾಷೆಯ ಮೂಲಕ ವಿವಿಧ ಜ್ಞಾನಶಾಖೆಗಳ ಅರಿವು ಪಡೆಯಬಹುದು. ಸಾಹಿತ್ಯವು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಹೋಲಿಸಿ, ಸಾಹಿತ್ಯ–ಸಂಸ್ಕೃತಿಗಳ ನಡುವಿನ ಸಂಬಂಧ ಹಾಗೂ ಅನುವಾದದ ಪಾತ್ರವನ್ನು ವಿವರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಗೌರಮ್ಮ ಎಸ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಯುವಜನರಲ್ಲಿ ಓದಿನ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಓದಿನ ಮಹತ್ವ ಹಾಗೂ ಸಾಹಿತ್ಯದ ಅಧ್ಯಯನದಿಂದ ದೊರೆಯುವ ಪ್ರಯೋಜನಗಳನ್ನು ವಿವರಿಸಿದರು. ಕನ್ನಡ ವಿಭಾಗದ ರಾಘವೇಂದ್ರ ಜಿ.ಪಿ. ಅತಿಥಿಗಳನ್ನು ಪರಿಚಯಿಸಿದರು.

ಐಕ್ಯೂಎಸಿ ಸಹಸಂಚಾಲಕ ಅಬ್ದುಲ್ ಬಷೀರ್, ಉಪನ್ಯಾಸಕರಾದ ಡಾ. ಮಹಾಂತೇಶ ಎಸ್.ಆರ್., ಡಾ. ಭಾರತಿ ಎ.ಎಂ., ಡಾ. ವಾಗೀಶ ಎನ್.ಎಂ. ಹಾಗೂ ಡಾ. ಯತೀಶ್ ಉಪಸ್ಥಿತರಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಶಬಾನಾ ಬಾನು ಡಿ.ಎಸ್. ಪ್ರಾರ್ಥಿಸಿದರು. ಸುಕನ್ಯಾ ಸ್ವಾಗತಿಸಿದರು. ಕೋಟೇಶ ವಂದಿಸಿದರು. ಸೌಜನ್ಯ ನಿರೂಪಿಸಿದರು.
📲Get App