🔥 TRENDING महसूल मंत्री चंद्रशेखर बावनकुळे यांची... સુત્રાપાડાના ગોરખમઢી ગામે રામમંદિર તથા... दोस्ती की मिसाल: इंसानों और बंदरों के... Uttarakhand Police to Announce 2026 Re... 36 Last‑Minute NEET Admission Certific... Delhi Doubles Parking Fees, Mandates 5...
28 Sep 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯ ಭಗತ್ ಸಿಂಗ್ ಕಾಲೋನಿಯಲ್ಲಿ ಅದ್ದೂರಿಯಾಗಿ ಭಗತ್ ಸಿಂಗ್ ಜಯಂತಿ ಆಚರಣೆ

✍️ Reporter: Khajahussain baba Jalahalli 🗓 28 Sep 2026, 04:30 PM 👁 16
Share: 💬 WhatsApp 📘 Facebook 𝕏 Post
📰 ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್

ಜಾಲಹಳ್ಳಿಯ ಭಗತ್ ಸಿಂಗ್ ಕಾಲೋನಿಯಲ್ಲಿ ಅದ್ದೂರಿಯಾಗಿ ಭಗತ್ ಸಿಂಗ್ ಜಯಂತಿ ಆಚರಣೆ

ಜಾಲಹಳ್ಳಿ, ಸೆ.28: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಭಗತ್ ಸಿಂಗ್ ಕಾಲೋನಿಯ ಭಗತ್ ಸಿಂಗ್ ವೃತ್ತದಲ್ಲಿ ಭಗತ್ ಸಿಂಗ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ರೈತ ಸಂಘದ ಮುಖಂಡರಾದ ನರಸಣ್ಣ ನಾಯಕ ಹಾಗೂ ಗುರುಗೌಡ ಮಾಲಿಪಾಟೀಲ್ ಅವರು ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಸಿಪಿಐ(ಎಂ) ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, “ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿಕಾರಿ ಯುವ ನಾಯಕರಾಗಿದ್ದ ಭಗತ್ ಸಿಂಗ್ ಅವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದರು. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವನ್ನು ಜಾಲಹಳ್ಳಿಯ ಭಗತ್ ಸಿಂಗ್ ಕಾಲೋನಿಯಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ಭಗತ್ ಸಿಂಗ್ ಅವರ ಹೋರಾಟದ ಸ್ಫೂರ್ತಿ ಇಂದಿಗೂ ಯುವಜನತೆ, ಶೋಷಿತರು, ರೈತರು, ಕಾರ್ಮಿಕರು ಹಾಗೂ ದುಡಿಯುವ ಜನರ ಹಕ್ಕುಗಳ ಹೋರಾಟಕ್ಕೆ ದಾರಿದೀಪವಾಗಿದೆ. ಅವರ ಬದುಕು, ಹೋರಾಟ ಮತ್ತು ತ್ಯಾಗ–ಬಲಿದಾನಗಳು ಎಂದೆಂದಿಗೂ ಸ್ಮರಣೀಯ ಹಾಗೂ ಆದರ್ಶಪ್ರಾಯವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಷರೀಫ್ ಕುರುಕುಂದಿ ಅವರು ಭಗತ್ ಸಿಂಗ್ ಅವರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಕ್ತುಮ್ ಪರಾಶಿ, ಕುಮಾರ್ ಚಪ್ಪಳಕಿ, ಶಿವಮಾನ್ಯ ತ್ಯಾಪ್ಲಿ, ಊರಿನ ಮುಖಂಡರಾದ ಗುರುಗೌಡ ಮಾಲಿಪಾಟೀಲ್, ಶಿವಪ್ಪ ಗಣೇಕಲ್, ಶಿವರಾಜ್ ಗಾಂಜಿ, ಮೌನೇಶ್ ದಾಸರ, ಹನುಮಂತ ಮಡಿವಾಳ, ನರಸಣ್ಣ ತ್ಯಾಪ್ಲಿ, ರಂಗನಾಥ್ ತ್ಯಾಪ್ಲಿ, ಮಹೇಬೂಬ್ ಕುರುಕುಂದಿ, ಮೌನೇಶ್ ಚಪ್ಪಳಕಿ, ಬಾಲಯ್ಯ ಗೋಸಾಲ್ ಸೇರಿದಂತೆ ಭಗತ್ ಸಿಂಗ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಭಗತ್ ಸಿಂಗ್ ಅಮರ್ ರಹೇ” ಎಂಬ ಘೋಷಣೆಗಳು ಮೊಳಗಿದವು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App