🔥 TRENDING Nandini Milk Price Hike Almost Certain... 74% of Maharashtra Faces Drought Despi... Maharashtra declares drought across 26... Maharashtra Declares Drought in 265 of... Heavy Showers Sweep Uttar Pradesh as M... Heavy Rain in Uttar Pradesh Claims 13...
26 Sep 2026•
ગુજરાતી मराठी ਪੰਜਾਬੀ বাংলা
ರೈತರು ಬೋರ್‌ವೆಲ್ ರೀಚಾರ್ಜ್ ಮಾಡಿಕೊಂಡು ಜಲ ಸಂರಕ್ಷಣೆಗೆ ಆದ್ಯತೆ ನೀಡಿ: ಹೆಗಡೆ

ರೈತರು ಬೋರ್‌ವೆಲ್ ರೀಚಾರ್ಜ್ ಮಾಡಿಕೊಂಡು ಜಲ ಸಂರಕ್ಷಣೆಗೆ ಆದ್ಯತೆ ನೀಡಿ: ಹೆಗಡೆ

✍️ Reporter: KALLAPPA MIRJI 🗓 26 Sep 2026, 03:18 PM 👁 9
Share: 💬 WhatsApp 📘 Facebook 𝕏 Post

ತಾಲ್ಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯಿಂದ ಜಲಕೃಷಿ ಸಮೃದ್ಧಿ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಲಘಟಗಿ: ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಕೃಷಿ ಹೊಂಡಗಳ ನಿರ್ಮಾಣ ಹಾಗೂ ಜಲಕೃಷಿ ಸಮೃದ್ಧಿ ಯೋಜನೆಯಡಿ ಕೊಳವೆ ಭಾವಿ ಸುತ್ತಲೂ ಗುಂಡಿ ನಿರ್ಮಿಸಿ ಬೋರ್‌ವೆಲ್ ರೀಚಾರ್ಜ್ ಮಾಡಿಕೊಂಡು ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮನುವಿಕಾಸ ಸಂಸ್ಥೆ ಮುಖ್ಯಸ್ಥ ಶ್ರೀಕಾಂತ್ ಹೆಗಡೆ ತಿಳಿಸಿದರು.
ತಾಲ್ಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯಿಂದ ಜಲಕೃಷಿ ಸಮೃದ್ಧಿ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಗತಿಪರ ರೈತ ಪರಶುರಾಮ ಎತ್ತಿನಗುಡ್ಡ ಮಾತನಾಡಿ ರಾಸಾಯನಿಕ ಕೃಷಿಯಿಂದ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದ್ದೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ತಿಳಿಸಿದರು.
ಜಲಕೃಷಿ ಸಮೃದ್ಧಿ ಯೋಜನೆಯಡಿ ಮನುವಿಕಾಸ ಸಂಸ್ಥೆಯಿಂದ ಕೈಗೊಂಡಿದ್ದ ಬೋರ್‌ವೆಲ್ ರೀಚಾರ್ಜ್ ಕಾಮಗಾರಿ ಸ್ಥಳಕ್ಕೆ ರೈತರೊಂದಿಗೆ ಭೇಟಿ ಮಾಡಿ ರೀಚಾರ್ಜ್ ಮಾಡುವ ವಿಧಾನ ಹಾಗೂ ಅಂತರ್ಜಲ ಸಂರಕ್ಷಣೆ ಮಹತ್ವ ತಿಳಿಸಲಾಯಿತು.
ರಾಜರಾಜೇಶ್ವರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ತೋಟಗಾರಿಕೆ ಇಲಾಖೆ ವಿಜ್ಞಾನಿ ಪಲ್ಲವಿ,ಗ್ರಾ.ಪಂ ಅಧ್ಯಕ್ಷ ಗುರುನಾಥ ಹರಿಜನ, ಸಂಸ್ಥೆ ತಾಲ್ಲೂಕ ಸಂಯೋಜಕ ಸುನೀಲ್ ಪೂಜಾರ, ಗ್ರಾಮಸ್ಥರಾದ ಶಿವಪ್ಪ ಕುಡುಬಾವಿ, ಕಲ್ಲಪ್ಪ ನಾಯಕ,ಬಿ.ಸಿ ಪಾಟೀಲ, ಕಲ್ಲಪ್ಪ ಮುಕ್ಕಲಕಟ್ಟಿ, ವಿನಾಯಕ ಭಟ್ಟ,ಯಲ್ಲಪ್ಪ ಸುಣಗಾರ ಇದ್ದರು.
📲Get App