🔥 TRENDING Ajay Devgn: 'Drishyam' Wouldn't Exist... JioHotstar rolls out new weekend lineu... Alia Bhatt’s New Film ‘Don’t Be Shy’ H... Physiotherapy Services Expand Across I... Vijay Sethupathi's 'Baththa' trailer t... Times of India releases official trail...
25 Sep 2026•
ગુજરાતી मराठी ਪੰਜਾਬੀ বাংলা

ಥ್ರೋಬಾಲ್‌ನಲ್ಲಿ ಪ್ರಥಮ: ಜಿಲ್ಲಾ ಮಟ್ಟಕ್ಕೆ ತಾಯಕನಹಳ್ಳಿ ಬಾಲಕಿಯರ ಲಗ್ಗೆ

✍️ Reporter: ಮಂಜುನಾಥ ಹೂಡೇಂ 🗓 25 Sep 2026, 06:48 PM 👁 11
Share: 💬 WhatsApp 📘 Facebook 𝕏 Post

ತಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ

ಕೂಡ್ಲಿಗಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಸೀಮಿತ ಸೌಲಭ್ಯಗಳ ನಡುವೆಯೂ ನಿರಂತರ ಅಭ್ಯಾಸ, ಶಿಸ್ತು ಮತ್ತು ತಂಡದ ಒಗ್ಗಟ್ಟಿನೊಂದಿಗೆ ಕಣಕ್ಕಿಳಿದ ವಿದ್ಯಾರ್ಥಿನಿಯರು ಎದುರಾಳಿ ತಂಡಗಳಿಗೆ ತೀವ್ರ ಪೈಪೋಟಿ ನೀಡಿ ಗಮನ ಸೆಳೆದರು. ಆಟದ ಆರಂಭದಿಂದ ಅಂತ್ಯದವರೆಗೂ ಆತ್ಮವಿಶ್ವಾಸದಿಂದ ಸೆಣಸಾಡಿದ ಬಾಲಕಿಯರು ಉತ್ತಮ ಕ್ರೀಡಾ ಕೌಶಲ್ಯ ಪ್ರದರ್ಶಿಸುವ ಮೂಲಕ ವಿಜಯದ ನಗೆ ಬೀರಿದರು.
ಕ್ರೀಡೆಯಲ್ಲಿ ಗೆಲುವಿನಷ್ಟೇ ಮುಖ್ಯವಾದ ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡದ ಮನೋಭಾವವನ್ನು ವಿದ್ಯಾರ್ಥಿನಿಯರು ಮೈದಾನದಲ್ಲಿ ಪ್ರದರ್ಶಿಸಿರುವುದು ವಿಶೇಷವಾಗಿದೆ. ಈ ಸಾಧನೆಯ ಮೂಲಕ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿಯೂ ಪ್ರತಿಭಾವಂತ ಕ್ರೀಡಾಪಟುಗಳ ಕೊರತೆಯಿಲ್ಲ ಎಂಬುದನ್ನು ತಾಯಕನಹಳ್ಳಿ ಬಾಲಕಿಯರು ತೋರಿಸಿಕೊಟ್ಟಿದ್ದಾರೆ.
ತಂಡದ ಈ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸುವಂತೆ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಕರಿಯಣ್ಣ ಕೆ, ಮೆಂಟರ್ ನವೀನ್ ಕುಮಾರ್ ಎಂ ಸಮಾಜ ವಿಜ್ಞಾನ ಶಿಕ್ಷಕ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
📲Get App