🔥 TRENDING સુરતમાં સોના-ચાંદીના ઘરેણાંના નામે છેત... कळम तालुक्यात भीषण दुष्काळ: शेतकरी हवा... સુરત ક્રાઇમ બ્રાન્ચે જાવેદ શા હત્યાકાં... ખેડબ્રહ્મા તાલુકા પંચાયતના ૩ આમ આદમી પ... સુરતમાં ચોરીની શંકામાં સગીરની હત્યા: સ... સુરતમાં સફાઈ કર્મચારીઓની આઉટસોર્સિંગ ભ...
24 Sep 2026
ગુજરાતી मराठी ਪੰਜਾਬੀ বাংলা

ಹಾನಗಲ್ ತಾಲ್ಲೂಕಿನ ಬಸಾಪುರ ಶಾಲೆಗೆ ಪ್ರಗತಿ ಟ್ರಸ್ಟ್ ಆನವಟ್ಟಿ ಇವರಿಂದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

✍️ Reporter: MAHAMAD WALI QURESHI 🗓 24 Sep 2026, 03:52 PM 👁 8
Share: 💬 WhatsApp 📘 Facebook 𝕏 Post
ಹಾನಗಲ್‌ ತಾಲ್ಲೂಕಿನ ಬಸಾಪುರ ಶಾಲೆಗೆ ಪ್ರಗತಿ ಟ್ರಸ್ಟ್ ಆನವಟ್ಟಿ ಇವರಿಂದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ఈ దిన NFO &రియ ప్రాథమిక ಶಾಲೆ,ಬಸಾಪುರ, ಹಾನಗಲ್ ತಾಲ್ಲೂಕು ಇವರಿಗೆ ಪ್ರಗತಿ ಟ್ರಸ್ಟ್ ಹಾಗು ಸೊರಬ ತಾಲ್ಲೂಕ್ ಯುವಜನ ಸಂಘದ ವತಿಯಿಂದ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು. 70 2 ವಿತರಿಸಿ ಪ್ರಗತಿ ಟ್ರಸ್ಟ್ ಕಾರ್ಯದರ್ಶಿಯಾದ ಕಾರ್ತಿಕ್ ಸಾಹುಕಾ‌ರ್ ಮಾತನಾಡಿ ಸೇವೆ ಎನ್ನುವುದು ಒಂದು ಕಾಯಕ, ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದುಡಿಮೆಯ ಶೇಕಡ 20ರಷ್ಟು ಹಣವನ್ನು ಸೇವೆಗಾಗಿ ಮುಡುಪಿಟ್ಟರೆ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಂಡ ಹಾಗಾಗುತ್ತದೆ. ಯಶಸ್ಸು ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಅವಶ್ಯಕ. ಆದರೆ ಯಶಸ್ತಿಗೆ ತನ್ನದೇ ಆದಂತ ಯಾವುದೇ ರೀತಿಯ ಅರ್ಥ ಇಲ್ಲ. ನಮ್ಮ ಮನಸ್ಸಿಗೆ ಖುಷಿ ಕೊಡುವಂತ ಯಾವುದೇ ಕೆಲಸದಲ್ಲಿ ನಾವು ಸಾಪಲ್ಯತೆ ಕಂಡರೆ ಅದನ್ನೇ ಯಶಸ್ಸು ಎಂದು ಕರೆಯಬಹುದು ಎಂದರು. ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ನಿರತರಾಗಿರುವ ತಾಲ್ಲೂಕ್‌ ಯುವಜನ ಸಂಘದ ಸದಸ್ಯರು

ಹಾನಗಲ್ ತಾಲ್ಲೂಕಿನಲ್ಲಿಯೂ ಸಹ ಸಮಾಜಸೇವೆಯಲ್ಲಿ ದಾಪುಗಾಲಿಡುತ್ತಿದ್ದು ಪ್ರತಿಯೊಬ್ಬರ ಸಹಕಾರ ಅವಶ್ಯಕ ಎಂದು ತಿಳಿಸಿದರು.

ಶಾಲೆಯ ಪ್ರಧಾನ ಗುರುಗಳಾದ ಟಿ ಹೆಚ್ ಗೆಜ್ಜೆಹಳ್ಳಿ ಅವರು ಮಾತನಾಡಿ ಸೇವೆ ಮಾಡುವ ಮನಸ್ಥಿತಿ ಎಲ್ಲರಲ್ಲೂ ಇರುತ್ತದೆ. ಸೇವೆ ಸರಿಯಾದ ರೀತಿಯಲ್ಲಿ ಬಳಕೆಯಾಗುವುದನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಊರಿನವರೇ ಆದ ವೀರಭದ್ರಪ್ಪನವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿ ಮಕ್ಕಳಿಗೆ ಬ್ಯಾಗ್ ಕೊಡಿಸುವುದರ

ಮುಖಾಂತರ ಸಹಾಯ ಹಸ್ತವನ್ನು ಚಾಚಿರುತ್ತಾರೆ. ಅವರ ಸೇವಾ ಕಾರ್ಯ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿದರು. ತಾಲ್ಲೂಕ್ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿಯಾದ ಅಭಿಲಾಷ್ ಹುರಳಿಕೊಪ್ಪ ಮಾತನಾಡಿ ಇದುವರೆಗೂ ನಾವು ಸಮಾಜ ಸೇವೆಯಲ್ಲಿ 30 ವರ್ಷಗಳಿಂದ ನಿರತರಾಗಿದ್ದು 54 ಬಾರಿ ರಕ್ತದಾನ ಶಿಬಿರ, ಒಂದು ಲಕ್ಷಕ್ಕೂ ಹೆಚ್ಚು ನೋಟ್ ಬುಕ್ ವಿತರಣೆ, ನೂರಾರು ಕಂಪ್ಯೂಟರ್ ವಿತರಣೆ ಹಾಗೂ ಶಾಲೆಗಳಿಗೆ ಡೆಸ್ಕ್ ವಿತರಣೆ ಹಾಗೂ ಹೊಲಿಗೆ ಯಂತ್ರಗಳ ವಿತರಣೆ ಮುಂತಾದ

ಸಮಾಜಮುಖಿ ಕಾರ್ಯಗಳಿಂದ ಜನರ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇದ್ದೇವೆ. ಎಲ್ಲರ ಸಹಕಾರ ಇದೇ ರೀತಿ ಇರಲಿ ಎಂದು ಹೇಳಿದರು. ಸೀಡ್ ಕಂಪನಿಯ ಮುಖ್ಯಸ್ಥರಾದ ಚನ್ನಪ್ಪಣ್ಣ ಕೋಡಿಹಳ್ಳಿ ಮಾತನಾಡಿ ಈ ರೀತಿ ಯುವಜನತೆ ತಮ್ಮನ್ನು ತಾವು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಸಂತೋಷದಾಯಕ ವಿಚಾರ, ತಾಲ್ಲೂಕ್ ಯುವಜನ ಸಂಘ ಹಾಗೂ ಪ್ರಗತಿ ಟ್ರಸ್ಟ್ ಸಮಾಜಮುಖಿ ಕಾರ್ಯಗಳಿಂದ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು ಯುವಜನತೆಯು ಸೊರಬ ತಾಲ್ಲೂಕಿನಿಂದ ಹಾನಗಲ್ ತಾಲ್ಲೂಕಿಗೆ ಬಂದು ಇಲ್ಲಿ ಕೂಡ ಸೇವೆ ಸಲ್ಲಿಸುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಭದ್ರಪ್ಪ ಬಸಾಪುರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾಲತೇಶ್ ಕ್ಷಡಿರದ, ಜಗದೀಶ್ ಎಲಿಗಾರ್, ಪುಟ್ಟಪ್ಪ ಮಕರವಳ್ಳಿ, ನಾಗನಗೌಡ ಪಾಟೀಲ್, ರಮೇಶ್ ಜೋಗಿಹಳ್ಳಿ, ಗಿರೀಶ್ ಬಸಾಪುರ, ಪ್ರವೀಣ್ ದಡ್ಡಿ ಕೊಪ್ಪ ಉಪಸ್ಥಿತರಿದ್ದರು. ರಾಯನಗೌಡ ಪಾಟೀಲ್ ನಿರೂಪಿಸಿ, ಮಂಜುಳಾ ಮತ್ತು ಶ್ರುತಿ ಜವಳಿ ಅವರು ವಂದಿಸಿದರು.
📲Get App