🔥 TRENDING રાજુભાઇ ભટ્ટે હરીકૃષ્ણ મહારાજને ભવ્ય થ... पावसाअभावी पिके करपून गेली आहे ડભોઇ: સગીરાને લગ્નની લાલચ આપી ભગાડી જઈ... Hyderabad Authorities Demolish Tilted... Houthis claim attacks on Riyadh and Ya... Odisha OSSTET 2026 Admit Card Released...
20 Sep 2026
ગુજરાતી मराठी ਪੰਜਾਬੀ বাংলা

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

✍️ Reporter: KALLAPPA MIRJI 🗓 20 Sep 2026, 11:24 AM 👁 10
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ದ್ಯಾವನಕೊಂಡ ಗ್ರಾಮದ ರೈತನೋರ್ವ ಸಾಲಭಾದೆ ತಾಳಲಾರದೆ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಕಲಘಟಗಿ: ತಾಲ್ಲೂಕಿನ ದ್ಯಾವನಕೊಂಡ ಗ್ರಾಮದ ರೈತನೋರ್ವ ಸಾಲಭಾದೆ ತಾಳಲಾರದೆ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಗ್ರಾಮದ ರೈತರಾದ ಈರನಗೌಡ ಬಸನಗೌಡ ಹುಡೇದ (46) ಎಂಬುವವರೇ ಸೆ. 15 ರಿಂದ 18 ರ ನಡುವಿನ ಅವಧಿಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ರೈತನು ಸರ್ವೆ ನಂ: 102 ರ ಜಮೀನನ ಮೇಲೆ ಸೆಂಟ್ರಲ್ ಬ್ಯಾಂಕಿನಲ್ಲಿ 2 ಲಕ್ಷ ಬೆಳೆಸಾಲ ಹಾಗೂ ವಿವಿಧ ಕಡೆ ಕೈಗಡ ಸಾಲ ಮಾಡಿ ಮೆಕ್ಕೆಜೋಳ ಮತ್ತು ಭತ್ತ ಬೆಳೆದಿದ್ದು ಸರಿಯಾಗಿ ಮಳೆಯಾಗದೇ ಬೆಳೆ ಕುಂಟಿಗೊಂಡು ಮಾಡಿದ ಸಾಲ ತೀರಿಸಲಾಗದೇ ಜೀವನದಲ್ಲಿ ಮನನೊಂದು ಸಾವನೊಪ್ಪಿದ್ದಾನೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
📲Get App