🔥 ट्रेंडिंग અમરેલીમાં શાંતાબા જનરલ હોસ્પિટલએ કેન્સ... ફતેપુરા - અમદાવાદ રૂટની બસને માળિયા નજ... पीआरडी जवानों को योगी सरकार की बड़ी सौ... જલાલપોર વિધાનસભા મતવિસ્તારમાં નરેન્દ્ર... ગઢડા વિધાનસભા: કોંગ્રેસના પૂર્વ કાર્યક... અમરેલીમાં 'સેવા સંકલ્પ અભિયાન' હેઠળ એક...
18 सित. 2026
ગુજરાતી मराठी ਪੰਜਾਬੀ বাংলা

ವ್ಯಕ್ತಿತ್ವ ವಿಕಾಸನದಲ್ಲಿ ಸಮಾಜಶಾಸ್ತ್ರದ ಪಾತ್ರ ಮಹತ್ವದ್ದು- ಸುಭಾಸ್. ಡಿ

✍️ रिपोर्टर: Viswanatha D R 🗓 18 सित. 2026, 12:30 PM 👁 18
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
ಹರಿಹರ, ಸೆ.18: ವ್ಯಕ್ತಿಯ ವ್ಯಕ್ತಿತ್ವ ವಿಕಾಸನದಲ್ಲಿ ಸಮಾಜಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆಯ ಉಪನ್ಯಾಸಕ ಸುಭಾಸ್. ಡಿ. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ IQAC ಅಡಿಯಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಶಾಸ್ತ್ರದ ಮಹತ್ವ ಹಾಗೂ ವ್ಯಕ್ತಿತ್ವ ವಿಕಾಸನದಲ್ಲಿ ಅದರ ಪಾತ್ರವನ್ನು ವಿವರಿಸಿದರು. ಸಾಮಾಜಿಕರಣ, ಕುಟುಂಬ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ವಿವಿಧ ಸಾಮಾಜಿಕ ಅಂಶಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪ್ರಭಾವ ಬೀರುತ್ತವೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶಕುಂತಲಾ ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಮಹತ್ವವನ್ನು ಅರಿತುಕೊಂಡು ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಶಿಕ್ಷಣದ ಪ್ರಾಮುಖ್ಯತೆ ಅಪಾರವಾಗಿದೆ ಎಂದು ಹೇಳಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಾನಂದ ಎಸ್. ಕೆಂಪಳ್ಳೆರ್ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
📲Get App