🔥 ट्रेंडिंग अलवर की विधवा ने जयपुर सचिवालय अधिकारी... गोरवाड़ा में दुर्घटना: बैंकर की मौत, म... ભરૂચ અને અંકલેશ્વરમાં સોનાનો ભાવ ૧૮ સપ... પિઝા હોટલમાં જીવતું જીવડું બહાર આવ્યું... ભરૂચમાં યલો એલર્ટ: અતિભારે વરસાદની આગા... Veteran Actor Anant Nag Hints at Possi...
18 सित. 2026
ગુજરાતી मराठी ਪੰਜਾਬੀ বাংলা

ಕರ್ತವ್ಯಲೋಪ ಆರೋಪದ ಹೀನ್ನಲೆ ಬಾಗಲಕೋಟ ಜೀಲ್ಲಾ ಆರೋಗ್ಯ ಅಧಿಕಾರಿ ಅಮಾನತು

✍️ रिपोर्टर: Arun Naykar 🗓 18 सित. 2026, 02:58 PM 👁 11
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post

ಬಾಗಲಕೋಟ ಜಿಲ್ಲಾ ಆರೋಗ್ಯಾದಿಕಾರಿ ಅಮಾನತು

#ಬಾಗಲಕೋಟೆ:* ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ್ ಯರಗಲ್ಲ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಜಿಲ್ಲಾ ರೋಗ್ಯಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಯರಗಲ್ಲ ಅವರು ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲದೇ, ಅತ್ಯಗತ್ಯ ಕೆಲಸಗಳನ್ನು ವಿಳಂಬ ಮಾಡುತ್ತಿದ್ದರು. ಸರ್ಕಾರ ಹಾಗೂ ಇಲಾಖೆ ನಿಯಮಗಳನ್ನು ಪಾಲಿಸದೇ ಸ್ವೇಚ್ಛಾನುಸಾರ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಬಾಗಲಕೋಟೆ ಜಿ.ಪಂ ಸಿಇಒ ಗಜಾನನ ಬಾಲೆ ಅವರು ಸಲ್ಲಿಸಿದ್ದ ವರದಿಯನ್ನು ಆಧರಿಸಿ ಆರೋಗ್ಯ ಇಲಾಖೆಯ ಶಿಸ್ತು ಪ್ರಾಧಿಕಾರದ ಆಯುಕ್ತ ಗುರುದತ್ತ ಹೆಗಡೆ ಅವರು ಅಮಾನತು ಆದೇಶಿಸಿದ್ದಾರೆ.

*ಮಗಳ ಸಂಬಳ ವಿವಾದವೇ ಮುಳುವಾಯಿತೇ?*
ಬಾಗಲಕೋಟೆಯಲ್ಲಿ MD ವ್ಯಾಸಂಗ ಮಾಡುತ್ತಿರುವ ಅವರ ಪುತ್ರಿ ಡಾ. ಅಂಕಿತಾ ಯರಗಲ್ಲ ಅವರು ಕಾಲೇಜಿಗೆ ಹಾಜರಾಗುತ್ತಲೇ ನವನಗರದ ವಾಂಬೆ ಕಾಲೋನಿಯಲ್ಲಿ ವೈದ್ಯಾಧಿಕಾರಿ ಎಂದು ಹಾಜರಿ ತೋರಿಸಿ 2 ಸಾವಿರ ಅಲ್ಲ, 2 ಲಕ್ಷ ರೂ.ಗಳ ಸಂಬಳ ಪಡೆಯುತ್ತಿರುವ ವಿಷಯವೂ ಸಹ ವಿವಾದಕ್ಕೆ ಕಾರಣವಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
📲Get App