🔥 TRENDING ધાંગધ્રા તાલુકાના જેસડા ગામમાં જાહેરમા... અમરેલીના રાજુલા-જાફરાબાદ ફોરલેન હાઇવે... Gujarat’s Waste‑to‑Wealth Initiative G... GCAS Delays May Postpone Gujarat Semes... India Reaffirms Commitment to Circular... Karnataka CM D K Shivakumar warns of w...
16 Sep 2026
ગુજરાતી मराठी ਪੰਜਾਬੀ বাংলা

ಸರಕಾರಿ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

✍️ Reporter: MAHAMAD WALI QURESHI 🗓 16 Sep 2026, 09:45 AM 👁 14
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಸರಕಾರಿ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

ನೀಡ್ 24 ನ್ಯೂಸ್

ದೇವದುರ್ಗ,ಸೆ.15-: ಪಟ್ಟಣದ ಹೊರವಲಯದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ

ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಸರಕಾರಿ ಬಾಲಕಿಯರ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.200 ಮೀ ಓಟದಲ್ಲಿ ಕುಮಾರಿ ಮಹಾಂತಮ್ಮ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅದೇ ರೀತಿ 4*400 ಮೀ. ರಿಲೇ ಓಟದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಗಂಗಮ್ಮ, ಸವಿತಾ, ಅಕ್ಷತಾ, ದೇವಮ್ಮ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಾಲಪ್ಪ ಭಾವಿಮನಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಿ, ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಮಾರ್ಗದರ್ಶಕಿ ಮಮತಾ ಆದಿ, ದೈಹಿಕ ಶಿಕ್ಷಣ ಶಿಕ್ಷಕರಾದ ದಾವಲ್‌ ಸಾಬ್ ಬಂಡಿ, ಬಸವರಾಜ ಯಾಟಗಲ್, ಲೋಕೇಶ, ವ್ಯವಸ್ಥಾಪಕಿ ಸುಮಿತ್ರಾ ಮತ್ತಿತ್ತರರಿದ್ದರು..
📲Get App