🔥 TRENDING Sagar Police Arrest Main Accused in To... Rain Raises Concerns for Rahul Gandhi’... जिला एवं सत्र न्यायालय उरई में राष्ट्र... Allahabad HC Seeks UP Govt Reply on Sa... Madhya Pradesh on Alert as Monsoon Bri... ભરૂચ સાયખા GIDCમાં Pixel Chemicalમાંથી
13 Sep 2026
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ ಜಕ್ಕಲಿ ಅಣ್ಣಯ್ಯ–ತಮ್ಮಯ್ಯ ಶರಣರ ಪುರಾಣ ಮಹಾಮಂಗಲೋತ್ಸವ

✍️ Reporter: Khajahussain baba Jalahalli 🗓 13 Sep 2026, 06:03 AM 👁 4
Watch on: ▶️ YouTube
Share: 💬 WhatsApp 📘 Facebook 𝕏 Post
📰 ಜಾಲಹಳ್ಳಿ–ದೇವದುರ್ಗ | ಬ್ರೇಕಿಂಗ್ ನ್ಯೂಸ್

ಜಾಲಹಳ್ಳಿಯಲ್ಲಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ

ಜಕ್ಕಲಿ ಅಣ್ಣಯ್ಯ–ತಮ್ಮಯ್ಯ ಶರಣರ ಪುರಾಣ ಮಹಾಮಂಗಲೋತ್ಸವ

ಮಠಮಾನ್ಯಗಳ ಉಳಿವು ಹಾಗೂ ಧಾರ್ಮಿಕ ಪರಂಪರೆ ಬೆಳೆಸಲು ಎಲ್ಲರೂ ಕೈಜೋಡಿಸಬೇಕು: ಶಾಸಕಿ ಕರೇಮ್ಮ ಜಿ. ನಾಯಕ

ಜಾಲಹಳ್ಳಿ, ಸೆ. 11: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ ಹಾಗೂ ಜಕ್ಕಲಿ ಅಣ್ಣಯ್ಯ–ತಮ್ಮಯ್ಯ ಶರಣರ ಪುರಾಣ ಮಹಾಮಂಗಲೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದೇವದುರ್ಗ ಶಾಸಕಿ ಕರೇಮ್ಮ ಜಿ. ನಾಯಕ, “ಜಾಲಹಳ್ಳಿಯ ಪುಣ್ಯಭೂಮಿಯಲ್ಲಿ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ದೇವರು ನೆಲೆಸಿರುವುದು ನಮ್ಮೆಲ್ಲರ ಪುಣ್ಯ. ಇದೇ ಜಾಲಹಳ್ಳಿ ನೆಲದಲ್ಲಿ ಕಾಶಿ ಜಗದ್ಗುರುಗಳು ಜನಿಸಿರುವುದು ಗ್ರಾಮದ ಆಧ್ಯಾತ್ಮಿಕ ಪರಂಪರೆಗೆ ಹೆಮ್ಮೆಯ ಸಂಗತಿಯಾಗಿದೆ,” ಎಂದರು.

“ಗುರುಗಳ ಆಶೀರ್ವಾದದಿಂದ ಶಾಸಕಿಯಾಗಿ ಜನಸೇವೆ ಮಾಡುವ ಅವಕಾಶ ದೊರೆತಿದೆ. ದೇವದುರ್ಗ ತಾಲೂಕಿನ ಜನರೇ ನನ್ನ ಪಾಲಿನ ದೇವರು. ಅವರ ಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ,” ಎಂದು ಶಾಸಕಿ ತಿಳಿಸಿದರು.

ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಿಗೆ ಆಧ್ಯಾತ್ಮಿಕ ಜ್ಞಾನ ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಒದಗಿಸುತ್ತವೆ. ಪುರಾಣ ಕಥೆಗಳನ್ನು ಕೇಳುವ ಅವಕಾಶ ದೊರೆಯುವುದಕ್ಕೂ ಪುಣ್ಯ ಮಾಡಿರಬೇಕು. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಉತ್ತಮ ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಪುಣ್ಯ–ಪಾಪದ ಕುರಿತು ಮಾತನಾಡಿದ ಶಾಸಕಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾಡುವ ದಾನ–ಧರ್ಮ ಹಾಗೂ ಸೇವೆಗೆ ಹೆಚ್ಚಿನ ಮಹತ್ವವಿದೆ. ಪ್ರತಿಫಲದ ನಿರೀಕ್ಷೆಯಿಂದ ಮಾಡುವ ದಾನ–ಧರ್ಮಕ್ಕೆ ನಿಜವಾದ ಸಾರ್ಥಕತೆ ದೊರೆಯುವುದಿಲ್ಲ ಎಂದು ಹೇಳಿದರು.

ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಠಮಾನ್ಯಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದ್ದರಿಂದ ಮಠಮಾನ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.

ಗುರುಗಳ ಆಶೀರ್ವಾದದಿಂದ ದೇವದುರ್ಗ ತಾಲೂಕಿನ ಜನರ ಸಮಸ್ಯೆಗಳು ಬಗೆಹರಿದು, ತಾಲೂಕು ಅಭಿವೃದ್ಧಿಯತ್ತ ಸಾಗಲಿ ಎಂದು ಆಶಿಸಿದ ಶಾಸಕಿ, ತಾಲೂಕಿನ ಜನರ ಸುಖ–ಸಮೃದ್ಧಿಗಾಗಿ ಸದಾ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಧಾರ್ಮಿಕ ಸಾನಿಧ್ಯ

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮವನ್ನು ಶ್ರೀ ಷ.ಬ್ರ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ನಿಲೋಗಲ್ ಹಾಗೂ ಶ್ರೀ ಷ.ಬ್ರ. ಕಪಿಲಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಶಿಬಿರಮಠ ದೇವದುರ್ಗ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು (ಹಿರೇಮಠ, ಗುಂಡಕನಾಳ), ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು (ಸೋಮವಾರಪೇಟೆ ಹಿರೇಮಠ, ರಾಯಚೂರು), ಶ್ರೀ ಹುಚ್ಚೇಶ್ವರ ಸ್ವಾಮಿಗಳು (ಶ್ರೀ ರಾಮಲಿಂಗೇಶ್ವರ ಮಠ, ಗುಳಬಾಳ), ಶ್ರೀ ಷ.ಬ್ರ. ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಂತಿ ರಾಂಪಳ್ಳಿ, ಸಿ.ಎಸ್. ಪಾಟೀಲ್, ಚಂದ್ರಶೇಖರ ಪಾಟೀಲ ಮಿಯ್ಯಾಪುರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವನಗೌಡ ದೇಸಾಯಿ, ಈರಣ್ಣ ಪಾಣಿ, ಬಸವನಗೌಡ ಪಾಟೀಲ್, ಸಂಗಯ್ಯ ತಾತ ಸೇರಿದಂತೆ ಮುಖಂಡರು, ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪುರಾಣ ಪ್ರವಚನವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಲಿಸಿದರು.

ಕಾರ್ಯಕ್ರಮವನ್ನು ಜಾಲಹಳ್ಳಿಯ ಜೆ.ಜೆ. ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಂತಮ್ಮ ಪಾಟೀಲ ಹಾಗೂ ಜೆ.ಜೆ. ಪ್ರೌಢಶಾಲೆಯ ಶಿಕ್ಷಕ ಗುಡ್ಡಪ್ಪ ಬಿ. ನಿರೂಪಿಸಿದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App